ತೆರೆ ಮೇಲೆ ಬರಲು ‘ರವಿ ಬೋಪಣ್ಣ’ ರೆಡಿ: ಆಗಸ್ಟ್ 12 ರಂದು ಕಮಾಲ್ ಮಾಡಲಿದೆ ‘ಕ್ರೇಜಿ’ ಸಿನಿಮಾ

ಸಿನಿಮಾ ಅಂದ್ರೆ ಸಾಕು ಎಲ್ಲವನ್ನೂ ಮರೆತು ಊಟ ನಿದ್ದಯನ್ನ ಬಿಟ್ಟು ಕೂರೋ ವ್ಯಕ್ತಿ ಅಂದ್ರೆ ಅದು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತ್ರ. ನವರಸನಾಯಕ ಜಗ್ಗೇಶ್ ಹೇಳಿದಂತೆ ರವಿಚಂದ್ರನ್ ಕನ್ನಡ ಚಿತ್ರ ರಂಗದ ಆಲದಮರವೇ

Written by - YASHODHA POOJARI | Last Updated : Aug 10, 2022, 07:05 PM IST
  • ರವಿ ಬೋಪಣ್ಣ ಸಿನಿಮಾ ತೆರೆಗೆ ಬರಲು ಕೆಲವೇ ದಿನಗಳ ಬಾಕಿ
  • ಪ್ರೀ ರಿಲೀಸ್ ಈವೆಂಟ್ ನಲ್ಲಿ ಅನೇಕ ತಾರೆಯರು ಆಗಮಿಸಿ ಶುಭಹಾರೈಸಿದರು
  • ಸಿನಿಮಾ ಕ್ರೇಜ್ಗಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಸಖತ್ ಹಣ ಖರ್ಚು ಮಾಡುತ್ತಾರೆ ಎಂದರೆ ನಂಬಲೇಬೇಕು
ತೆರೆ ಮೇಲೆ ಬರಲು ‘ರವಿ ಬೋಪಣ್ಣ’ ರೆಡಿ: ಆಗಸ್ಟ್ 12 ರಂದು ಕಮಾಲ್ ಮಾಡಲಿದೆ ‘ಕ್ರೇಜಿ’ ಸಿನಿಮಾ title=
Ravi Bopanna Cinema

ಬಹುನೀರಿಕ್ಷೆಯ ಸಿನಿಮಾ 'ರವಿ ಬೋಪಣ್ಣ' ಇದೇ ಆಗಸ್ಟ್ 12 ರಂದು ತೆರೆ ಮೇಲೆ ಕಮಲ್ ಮಾಡಲು ಬರುತ್ತಿದೆ. ಹಲವು ವಿಶೇಷತೆಗಳಿಗೆ ಈ ಸಿನಿಮಾ ಕಾರಣವಾಗುತ್ತಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಸಿನಿಮಾ ಅಂದ್ರೆ ಪ್ರಪಂಚ.

ಸಿನಿಮಾ ಅಂದ್ರೆ ಸಾಕು ಎಲ್ಲವನ್ನೂ ಮರೆತು ಊಟ ನಿದ್ದಯನ್ನ ಬಿಟ್ಟು ಕೂರೋ ವ್ಯಕ್ತಿ ಅಂದ್ರೆ ಅದು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತ್ರ. ನವರಸನಾಯಕ ಜಗ್ಗೇಶ್ ಹೇಳಿದಂತೆ ರವಿಚಂದ್ರನ್ ಕನ್ನಡ ಚಿತ್ರ ರಂಗದ ಆಲದಮರವೇ.

ಇದನ್ನೂ ಓದಿ: ಆಜಾದಿ ಕಾ ಅಮೃತ್‌ ಮಹೋತ್ಸವ : ಏಕಾಂಗಿಯಾಗಿ 22000 ಕಿಮೀ. ಯಾತ್ರೆ ಮುಗಿಸಿದ ಕನ್ನಡತಿ

 ಸಾಲು ಸಾಲು ಸಿನಿಮಾ ಮಾಡಿದ್ರೂ ಕೂಡ ಹಣ ಮುಖ್ಯ ಅಲ್ಲ ಸಿನಿಮಾವೇ ಮುಖ್ಯ ಅನ್ನೋದನ್ನ ಸಾರಿ ಸಾರಿ ಹೇಳಿದ ಅದ್ಭುತ ವ್ಯಕ್ತಿ ಅಂದ್ರೆ ಅದು ನಮ್ಮ ಕ್ರೇಜಿ ಸ್ಟಾರ್. ಸಿನಿಮಾ ಸ್ಟಾರ್ ಅಂದ್ರೆ ಬೇಕಾದಷ್ಟು ದುಡ್ಡು ಇರುತ್ತೆ ಅನ್ಕೋತ್ತೀವಿ.ಆದ್ರೆ ರವಿಚಂದ್ರನ್ ಮಾತ್ರ ಇದಕ್ಕೆ ತದ್ವಿರುದ್ಧ. ಯಾಕಂದ್ರೆ ಸಿನಿಮಾ ಮಾಡಲು ಹೋಗಿ ಬೇಕಾದಷ್ಟು ಹಣ ಕಳೆದುಕೊಂಡಿದ್ದಾರೆ ರವಿ ಮಾಮ.

'ರವಿ ಬೋಪಣ್ಣ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಲ್ಲಿ ತಾರೆಯರ ಸಮಾಗಮವೇ ಆಯ್ತು. ಕಿಚ್ಚ ಸುದೀಪ್, ಜಗ್ಗೇಶ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರವಿಚಂದ್ರನ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಮಾತಾನಾಡಿದ ರವಿಚಂದ್ರನ್ ನಂಗೆ 60 ವರ್ಷ ಆಯ್ತು. ನಂಗೆ ತಂದೆಯ ನೆನಪು ಸದಾ ಕಾಡುತ್ತಲೇ ಇರುತ್ತದೆ. ನಾನು ಒಂದು ಫೋನ್ ಮಾಡಿದ್ರೆ ಸಾಕು ಸುದೀಪ್ ಕಾರು ನಿಲ್ಲಿಸಿ ಮಾತನಾಡ್ತಾರೆ. ಇದೇ ಪ್ರೀತಿಯನ್ನ ಮಾತ್ರ ನಾನು ಸಂಪಾದನೆ ಮಾಡಿದ್ದು. ನನ್ನ  ಜೇಬು  ತುಂಬೋ ಬದಲು, ನಿಮ್ಮ ಪ್ರೀತಿಯಿಂದ ನನ್ನ ಹೃದಯ ತುಂಬಿದೆ ಅಂದ್ರು ರವಿಚಂದ್ರನ್.

ನನ್ನ ಮಗಳ ಮದ್ವೆ ಸಂದರ್ಭದಲ್ಲಿ ನನ್ನ ಬಳಿ ಹಣ ಇರಲಿಲ್ಲ. ನನ್ನ ಇಬ್ಬರೂ ಸ್ನೇಹಿತರು ನನ್ನ ಮನೆಗೆ ಬಂದು ಗಿಫ್ಟ್ ಅಂತ ಹಣ ಕೊಟ್ಟು ಹೋದ್ರು. ಒಡವೆ ಕೊಳ್ಳಲು ಹೋಗಿ ಅರ್ಧ ಹಣ ಆಮೇಲೆ ಕೊಡ್ತೀನಿ ಅಂದ್ರೆ ಅವ್ರು ನಾನು ಕೊಟ್ಟ ಹಣವನ್ನ ವಾಪಸ್ಸು ಕೊಟ್ಟು ನಿಮಗೆ ಯಾವಾಗ ಆಗುತ್ತೋ ಅವತ್ತೇ ಕೊಡಿ ಅಂತ ಹೇಳಿದ್ರು. ಇದೇ ಪ್ರೀತಿಯನ್ನ ನಾನು ಸಂಪಾದಿಸಿದ್ದು ಅಂದ್ರು ಕ್ರೇಜಿ ಸ್ಟಾರ್.

ಇದನ್ನೂ ಓದಿ: Nitin Gadkari: ವಾಹನ ಸವಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ನನ್ನ ಜೀವನದಲ್ಲಿ ನನ್ನ ಸ್ನೇಹಿತರು ನನ್ನ ಬೆನ್ನಿಗೆ ಸದಾ ನಿಂತಿದ್ದಾರೆ ಅನ್ನೋದನ್ನ ಎಳೆಎಳೆಯಾಗಿ ಹಂಚಿಕೊಂಡ್ರು ಕ್ರೇಜಿಸ್ಟಾರ್ ರವಿಚಂದ್ರನ್ ನಿಜಕ್ಕೂ ಕನ್ನಡ ಚಿತ್ರರಂಗದ ಆಸ್ತಿ ಅಂದ್ರೆ ಅದು ರವಿ ಸರ್. ಸಿನಿಮಾಗಾಗಿ ಮಾಡಿದ ಅವರ ತ್ಯಾಗ ನಿಜಕ್ಕೂ ಅದ್ಭುತ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News