Rashmika Mandanna: "ವಾರಿಸು ಸೆಟ್‌ನಲ್ಲಿಯೇ ನಾನು ಪ್ರಜ್ಞೆ ತಪ್ಪುತ್ತಿದ್ದೆ" ನಟಿ ರಶ್ಮಿಕಾ ರಿವೀಲ್ ಮಾಡಿದ್ದೇನು?

Rashmika Mandanna : ಕಿರಿಕ್‌ ಬ್ಯೂಟಿ ರಶ್ಮಿಕಾ ಮಂದಣ್ಣ #RushHour ಶೀರ್ಷಿಕೆಯ ಆಸ್ಕ್ ಮೈ ಎನಿಥಿಂಗ್ ಸೆಷನ್ ಅನ್ನು ನಡೆಸಿದರು. ಈ ವೇಳೆ ವಾರಿಸು ಸಿನಿಮಾ ಶೂಟಿಂಗ್‌ ವೇಳೆ ನಡೆದ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Mar 21, 2023, 10:56 AM IST
  • ಆಸ್ಕ್ ಮೈ ಎನಿಥಿಂಗ್ ಸೆಷನ್ ನಡೆಸಿದ ನಟಿ ರಶ್ಮಿಕಾ
  • "ವಾರಿಸು ಸೆಟ್‌ನಲ್ಲಿಯೇ ನಾನು ಪ್ರಜ್ಞೆ ತಪ್ಪುತ್ತಿದ್ದೆ"
  • ನಟಿ ರಶ್ಮಿಕಾ ರಿವೀಲ್ ಮಾಡಿದ್ದೇನು?
Rashmika Mandanna: "ವಾರಿಸು ಸೆಟ್‌ನಲ್ಲಿಯೇ ನಾನು ಪ್ರಜ್ಞೆ ತಪ್ಪುತ್ತಿದ್ದೆ" ನಟಿ ರಶ್ಮಿಕಾ ರಿವೀಲ್ ಮಾಡಿದ್ದೇನು? title=
Rashmika Mandanna

Rashmika Mandanna : ರಶ್ಮಿಕಾ ಮಂದಣ್ಣ ಸೋಮವಾರ ಟ್ವಿಟ್ಟರ್‌ನಲ್ಲಿ #RushHour ಶೀರ್ಷಿಕೆಯ ಆಸ್ಕ್ ಮೈ ಎನಿಥಿಂಗ್ ಸೆಷನ್ ಅನ್ನು ನಡೆಸಿದರು. ಅಭಿಮಾನಿಗಳ ಪ್ರಶ್ನೆಗಳಿಗೆ ಈ ವೇಳೆ ಕಿರಿಕ್‌ ಬ್ಯೂಟಿ ಉತ್ತರಿಸಿದ್ದಾರೆ. ವಿಜಯ್ ಅಭಿಮಾನಿಗಳು ವಾರಿಸು ಚಿತ್ರದಲ್ಲಿ ನಟರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದರು. ಅಭಿಮಾನಿಯೊಬ್ಬರು, "ಪ್ಲೀಸ್ ವಾರಿಸು ಸೆಟ್‌ನಲ್ಲಿ ನಡೆದ ಯಾವುದೇ ತಮಾಷೆಯ ಕ್ಷಣಗಳನ್ನು ಹಂಚಿಕೊಳ್ಳಿ" ಎಂದು ಕೇಳಿದರು.

ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್ 2ʼ ಚಿತ್ರದಿಂದ ತೇಲಿ ಬಂತು ‘ಕಿರುನಗೆ’ ಹಾಡು, ಈ ದಿನದಂದು ಸಿನಿಮಾ ರಿಲೀಸ್

ವಾರಿಸು ಚಿತ್ರದ ಸೆಟ್‌ನಲ್ಲಿ ವಿಜಯ್ ಮತ್ತು ನಿರ್ದೇಶಕ ವಂಶಿ ಇಬ್ಬರೂ ನನ್ನನ್ನು ತಮಾಷೆ ಮಾಡಿದ್ದಾರೆ ಎಂದು ರಶ್ಮಿಕಾ ಬಹಿರಂಗಪಡಿಸಿದ್ದಾರೆ. ನಾನು ಸೆಟ್‌ನಲ್ಲಿರುವ ಸೋಫಾಗಳ ಮೇಲೆ ಮೂರ್ಛೆ ಹೋದಾಗ, ವಂಶಿ ಸರ್ ಫೋಟೋಗಳನ್ನು ತೆಗೆದಿದ್ದರು. ಅಲ್ಲದೇ ಹೋಗಿ ಅದನ್ನು ವಿಜಯ್ ಸರ್‌ಗೆ ತೋರಿಸುತ್ತಿದ್ದರು. ಅವರು ನನ್ನನ್ನು ತಮಾಷೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

 

 

ವಾರಿಸು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ದಿವ್ಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕರ ಎಂಟ್ರಿ ಕೊಟ್ಟ ರಶ್ಮಿಕಾ ಈಗ ದೇಶದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅನಿಮಲ್ ಮತ್ತು ಪುಷ್ಪ 2 ಸಿನಿಮಾಗಳಲ್ಲಿ ಸದ್ಯ ರಶ್ಮಿಕಾ ಬ್ಯುಸಿಯಾಗಿದ್ದಾರೆ. 

ಇದನ್ನೂ ಓದಿ: Taapsee Pannu : ಮೋಹಕ ನಟಿ ತಾಪ್ಸೀ ಪನ್ನು ಬ್ಯೂಟಿ ಸೀಕ್ರೇಟ್‌ ಏನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News