ಈ ಸ್ಟಾರ್‌ ಹೀರೋಯಿನ್‌ ಜೊತೆ ಲವ್‌ನಲ್ಲಿದ್ರಂತೆ ರಜನಿಕಾಂತ್..!‌ ತಲೈವಾ ಹೃದಯ ಕದ್ದ ಲೇಡಿ ಯಾರು ಗೊತ್ತಾ?

Rajinikanth Love Story: ಸೂಪರ್‌ ಸ್ಟಾರ್‌ ರಜನಿಕಾಂತ್‌ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಜೊತೆ ನಟಿಸಲು ಖ್ಯಾತ ನಟಿಯರು ಕಾಯುತ್ತಿದ್ದಾರೆ... ಆದರೆ ಈ ಹಿಂದೆ ನಟ ರಜನಿಕಾಂತ್ ಈ ನಟಿಯನ್ನು ಪ್ರೀತಿಸುತ್ತಿದ್ದರಂತೆ.. ಹಾಗಾದರೆ ಯಾರು ಆ ನಟಿ ಅಂತೀರಾ ಈ ಸ್ಟೋರಿ ಓದಿ..   

Written by - Savita M B | Last Updated : Jan 17, 2024, 11:35 AM IST
  • ಈಗ ನಟ ರಜನಿಕಾಂತ್ ಅವರಿಗೆ 73 ವರ್ಷ.
  • ಈ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿ ಯಂಗ್ ಹೀರೋಗಳನ್ನು ಮೀರಿಸಿದ್ದಾರೆ
  • ನಟ ಜೈಲರ್ ಚಿತ್ರದ ಯಶಸ್ಸಿನ ನಂತರ ಇನ್ನೂ ಹೆಚ್ಚು ಬ್ಯುಸಿಯಾಗಿದ್ದಾರೆ..
ಈ ಸ್ಟಾರ್‌ ಹೀರೋಯಿನ್‌ ಜೊತೆ ಲವ್‌ನಲ್ಲಿದ್ರಂತೆ ರಜನಿಕಾಂತ್..!‌ ತಲೈವಾ ಹೃದಯ ಕದ್ದ ಲೇಡಿ ಯಾರು ಗೊತ್ತಾ? title=

Super Star Rajanikanth: ಈಗ ನಟ ರಜನಿಕಾಂತ್ ಅವರಿಗೆ 73 ವರ್ಷ. ಈ ವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನಿ ಯಂಗ್ ಹೀರೋಗಳನ್ನು ಮೀರಿಸಿದ್ದು.. ಜೈಲರ್ ಚಿತ್ರದ ಯಶಸ್ಸಿನ ನಂತರ ಇನ್ನೂ ಹೆಚ್ಚು ಬ್ಯುಸಿಯಾಗಿದ್ದಾರೆ.. 

ನಟ ರಜನಿಕಾಂತ್ ಸರಣಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಸದ್ಯ ವೆಟ್ಟಿಯನ್ ಚಿತ್ರದ ಶೂಟಿಂಗ್‌ನಲ್ಲಿ ನಟ ಬ್ಯುಸಿಯಾಗಿದ್ದಾರೆ. ಈ ನಡುವೆ ಹಲವು ವರ್ಷಗಳ ಹಿಂದೆ ಶುರುವಾಗಿ ಕೊನೆಗೊಂಡ ರಜನಿಕಾಂತ್ ಪ್ರೇಮಕ್ಕೆ ಸಂಬಂಧಿಸಿದ ಸುದ್ದಿಯೊಂದು ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-Rishabh Sawhney: ಫೈಟರ್‌ ಚಿತ್ರದಲ್ಲಿ ಹೃತಿಕ್‌ಗೆ ಪೈಪೋಟಿ ನೀಡಿ.. ಹೈಲೈಟ್‌ ಆಗಿರುವ ಈ ವಿಲನ್‌ ಯಾರು ಗೊತ್ತಾ?

ತಮಿಳಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಜನಿಕಾಂತ್ ಹೃದಯ ಕದ್ದ ನಟಿ ಯಾರು ಅನ್ನೋದು ಸದ್ಯದ ಚರ್ಚೆ.. ಈ ನಟಿ ರಜನಿಕಾಂತ್ ಅವರೊಂದಿಗೆ 22 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ. 

ರಜನಿಕಾಂತ್ ನಟಿ ಶ್ರೀದೇವಿಯನ್ನು ಪ್ರೀತಿಸುತ್ತಿದ್ದರು. ಅದೂ ಅಲ್ಲದೆ ರಜನಿಕಾಂತ್ ಶ್ರೀದೇವಿಯನ್ನು ಮದುವೆಯಾಗಲು ನಿರ್ಧರಿಸಿದ್ದರಂತೆ.. ನಂತರ ಈ ವಿಷಯವನ್ನು ಮನೆಯವರಿಗೆ ತಿಳಿಸಿ ಹುಡುಗಿ ಕೇಳುವ ಶಾಸ್ತ್ರವನ್ನೂ ಮಾಡಲಾಗಿತ್ತಂತೆ.. 

ಇದನ್ನೂ ಓದಿ-ಸ್ಯಾಂಡಲ್‌ವುಡ್‌ಗೆ ಗೋಲ್ಡನ್‌ ಕ್ವೀನ್‌ ಕಂಬ್ಯಾಕ್‌: ಗುಡ್‌ ನ್ಯೂಸ್‌ ನೀಡಿದ ಅಮೂಲ್ಯ!

ರಜನಿಕಾಂತ್ ಶ್ರೀದೇವಿಗೆ ಪ್ರಪೋಸ್ ಮಾಡಲು ಹೋದಾಗ ಮನೆಯಲ್ಲಿ ಕರೆಂಟ್ ಹೋಗಿದ್ದರಿಂದ ತಮ್ಮ ಪ್ರೇಮ ನಿವೇದನೆಗೆ ಇದು ಸರಿಯಾದ ಸಮಯವಲ್ಲ ಎಂದು ನಟ ಹಿಂದೆ ಸರಿದರಂತೆ. ನಂತರ ರಜನಿಕಾಂತ್ ಆಕೆಗೆ ಪ್ರಪೋಸ್ ಮಾಡಲೇ ಇಲ್ಲವಂತೆ.. 

ಹಿರಿಯ ನಿರ್ದೇಶಕ ಬಾಲಚಂದರ್ ಸಂದರ್ಶನವೊಂದರಲ್ಲಿ ರಜನಿಕಾಂತ್ ಅವರ ಹಳೆಯ ಪ್ರೇಮಕಥೆಯನ್ನು ಹೇಳಿದ್ದಾರೆ. ರಜನಿಕಾಂತ್ ಅವರು ನಟಿ ಶ್ರೀದೇವಿ ಅವರನ್ನು ಪ್ರೀತಿಸುತ್ತಿದ್ದರು ಎಂಬುದೇ ಹಲವರಿಗೆ ತಿಳಿದಿಲ್ಲ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News