"ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ"-ಸಂಚಲನ ಸೃಷ್ಟಿಸಿದ ಖ್ಯಾತ ನಟಿ ಹೇಳಿಕೆ!

Rajinikanth secret marriege: ನಟಿ ಕವಿತಾ ಅವರು ನಟ ರಜನಿಕಾಂತ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Written by - Savita M B | Last Updated : Oct 30, 2023, 12:14 PM IST
  • ಕವಿತಾ 11 ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು
  • ರಜನಿ, ಶಿವಾಜಿ ಸೇರಿದಂತೆ ಪ್ರಮುಖ ನಟರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
  • ಇದೀಗ ನಟಿ ಕವಿತಾ ರಜನಿ ಅವರ ಕುರಿತು ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ
"ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ"-ಸಂಚಲನ ಸೃಷ್ಟಿಸಿದ ಖ್ಯಾತ ನಟಿ ಹೇಳಿಕೆ!  title=

Rajanikanth: ಕವಿತಾ 11 ನೇ ವಯಸ್ಸಿನಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ನಾಯಕಿಯಾಗಿ ನಟಿಸಿದರು. ರಜನಿ, ಶಿವಾಜಿ ಸೇರಿದಂತೆ ಪ್ರಮುಖ ನಟರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 

ತಮಿಳಿನಲ್ಲಿ ಸೆಂತಮಿಲ್ ಪಾಟ್ಟು, ವೈದೇಹಿ ಕಲ್ಯಾಣಂ, ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕವಿತಾ ತಮಿಳು ಮಾತ್ರವಲ್ಲದೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಲಿವುಡ್ ನಲ್ಲಿ ಖ್ಯಾತ ನಟಿಯಾಗಿದ್ದಾರೆ. ಕವಿತಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಆಗ ರಜನಿ ಜೊತೆಗಿನ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ-ವಿಜಯ್ ದೇವರಕೊಂಡ ಚಿತ್ರದಿಂದ ಹೊರನಡೆದ ಶ್ರೀಲೀಲಾ: ಕಾರಣವೇನು?

ಕವಿತಾ ರಜನಿ ಜೊತೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತಿದ್ದಾಗ, ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಗಳು ಬಂದವು. ಮೋಹನ್‌ಬಾಬು ಜೊತೆ ಸಿನಿಮಾದಲ್ಲಿ ನಟಿಸುವಾಗ ಕವಿತಾಗೆ ಈ ವಿಷಯ ತಿಳಿಯಿತು. 

ಆದರೆ ಇದನ್ನು ಕೇಳಿ ಕೋಪಗೊಂಡ ಮೋಹನ್ಬಾಬು ಕವಿತಾ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಶೂಟಿಂಗ್ ನಿಲ್ಲಿಸಿ ಕವಿತಾ ಅವರನ್ನು ಸಂಬಂಧಿಸಿದ ಪತ್ರಿಕಾ ಕಚೇರಿಗೆ ಕರೆದೊಯ್ದು ಜಗಳವಾದ್ದರಂತೆ. ನಂತರ ಪತ್ರಿಕೆ ಕಂಪನಿಯವರು ನಿರಾಕರಣೆ ಪ್ರಕಟಿಸುವುದಾಗಿ ಹೇಳಿದ್ದು, ಆ ಬಳಿಕವಷ್ಟೇ ವದಂತಿ ಅಂತ್ಯಗೊಂಡಿದೆ. ಆ ವೇಳೆ ರಜನಿಕಾಂತ್ ಜೊತೆ ನನ್ನ ಮದುವೆಯ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು ಎಂದು ಕವಿತಾ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-Tamannah: ಕಪ್ಪು ಸೀರೆಯಲ್ಲಿ ಹಾಲಿನಂತೆ ಹೊಳೆಯುತಿದೆ ಮಿಲ್ಕಿ ಬ್ಯೂಟಿ ಅಂದ...! ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News