ಲೈಕಾ ಪ್ರೊಡಕ್ಷನ್ ನಡಿ ರಜನಿಕಾಂತ್ 170ನೇ ಸಿನಿಮಾ.. 32 ವರ್ಷ ಬಳಿಕ ಮತ್ತೆ ಒಂದಾದ ತಲೈವಾ-ಬಿಗ್ ಬಿ

Rajinikanth 170th movie: ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ಇದೀಗ 32 ವರ್ಷದ ಬಳಿಕ ತಲೈವಾ-ಬಿಗ್ ಬಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.   

Written by - Chetana Devarmani | Last Updated : Jun 10, 2023, 04:34 PM IST
  • ಲೈಕಾ ಪ್ರೊಡಕ್ಷನ್ ನಡಿ ಜನಿಕಾಂತ್ 170ನೇ ಸಿನಿಮಾ
  • 32 ವರ್ಷ ಬಳಿಕ ಮತ್ತೆ ಒಂದಾದ ತಲೈವಾ-ಬಿಗ್ ಬಿ
  • ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ
ಲೈಕಾ ಪ್ರೊಡಕ್ಷನ್ ನಡಿ ರಜನಿಕಾಂತ್ 170ನೇ ಸಿನಿಮಾ.. 32 ವರ್ಷ ಬಳಿಕ ಮತ್ತೆ ಒಂದಾದ ತಲೈವಾ-ಬಿಗ್ ಬಿ  title=
Rajinikanth

Rajinikanth - Amitabh Bachchan: ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. 

ಇದನ್ನೂ ಓದಿ: ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟ ರಕ್ಷಿತ್‌ ಶೆಟ್ಟಿ.! ಮದುವೆನಾ? ಸಿನಿಮಾನಾ? ಗೆಸ್‌ ಮಾಡಿ ನೋಡೋಣ

ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್..ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು. ಈ ಇಬ್ಬರು ತಾರೆಯರು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದವು. ರಜನಿ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ 32 ವರ್ಷದ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ.ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಪ್ರಾಜೆಕ್ಟ್ ಮುಂದಿನ ತಿಂಗಳ ಅಂತ್ಯಕ್ಕೆ ಟೇಕಾಫ್ ಆಗಲಿದೆ. 

ರಜನಿ-ಬಚ್ಚನ್ ನಟಿಸಲಿರುವ, ಲೈಕಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಜೈಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ರಜನಿ ಹಾಗೂ ಬಚ್ಚನ್ ನಂತಹ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಮದುವೆ ಆಗಿ ಮೂರೂವರೆ ತಿಂಗಳಿಗೆ.. 4 ತಿಂಗಳ ಗರ್ಭಿಣಿಯಾದ ಸ್ವರಾ ಭಾಸ್ಕರ್! ಇದು ಹೇಗೆ ಸಾಧ್ಯ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News