Rajinikanth: ರಜನಿಕಾಂತ್‌ ನಟನೆಯ 169 ನೇ ಚಿತ್ರದ ಟೈಟಲ್ ರಿವೀಲ್, ಕುತೂಹಲ ಕೆರಳಿಸಿದ ಪೋಸ್ಟರ್

Rajinikanth 169th film: ಬೀಸ್ಟ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್ ನಟಿಸುತ್ತಿದ್ದು, ಇದು ಅವರ 169 ನೇ ಸಿನಿಮಾ ಆಗಿದೆ. ಕೆಲವು ತಿಂಗಳ ಹಿಂದೆ ಟೀಸರ್‌ನೊಂದಿಗೆ ಚಿತ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. 

Written by - Chetana Devarmani | Last Updated : Jun 18, 2022, 03:40 PM IST
  • ರಜನಿಕಾಂತ್‌ ನಟನೆಯ 169 ನೇ ಚಿತ್ರದ ಟೈಟಲ್ ರಿವೀಲ್
  • ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಸಿನಿಮಾ
  • ಅಭಿಮಾನಿಗಳ ಕುತೂಹಲ ಕೆರಳಿಸಿದ ಪೋಸ್ಟರ್
Rajinikanth: ರಜನಿಕಾಂತ್‌ ನಟನೆಯ 169 ನೇ ಚಿತ್ರದ ಟೈಟಲ್ ರಿವೀಲ್, ಕುತೂಹಲ ಕೆರಳಿಸಿದ ಪೋಸ್ಟರ್   title=
ರಜನಿಕಾಂತ್‌

Jailer: ಬೀಸ್ಟ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್ ನಟಿಸುತ್ತಿದ್ದು, ಇದು ಅವರ 169 ನೇ ಸಿನಿಮಾ ಆಗಿದೆ. ಕೆಲವು ತಿಂಗಳ ಹಿಂದೆ ಟೀಸರ್‌ನೊಂದಿಗೆ ಚಿತ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಅಂದಿನಿಂದಲೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿಯೇ ಇದೆ. ರಜನಿಕಾಂತ್ ಅವರ 169ನೇ ಸಿನಿಮಾಗೆ ʻಜೈಲರ್ʼ ಎಂದು ಹೆಸರಿಡಲಾಗಿದೆ. ಈ ಬಗ್ಗೆ ನಿರ್ದೇಶಕ ನೆಲ್ಸನ್‌ ದಿಲೀಪ್‌ಕುಮಾರ್‌ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವ ಸನ್ ಕ್ರಿಯೇಷನ್ಸ್ ಟ್ವಿಟ್ಟರ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ:  "ಅಬ್ಬಬ್ಬ" ಟ್ರೇಲರ್ ಸಖತಾಗಿದೆ..!

'ಜೈಲರ್' ಶೀರ್ಷಿಕೆ ಸೂಚಿಸುವಂತೆ ರಜನಿಕಾಂತ್ ಜೈಲು ವಾರ್ಡನ್ ಆಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ರಜನಿಕಾಂತ್ ಅವರ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಪೋಸ್ಟರ್‌ ನೋಡಿದ ಫ್ಯಾನ್ಸ್‌ಗಳಲ್ಲಿ ಕುತೂಹಲ ಹೆಚ್ಚಿಸಿದೆ. ವಿಶೇಷ ಪೋಸ್ಟರ್‌ನೊಂದಿಗೆ ಟೈಟಲ್​ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಈ ಪೋಸ್ಟರ್ ಸಿನಿಮಾವು ಆಕ್ಷನ್ ಡ್ರಾಮಾ ಎಂಬ ಸುಳಿವು ನೀಡಿದೆ. 

 

 

'ತಲೈವರ್ 169' ಚಿತ್ರದಲ್ಲಿ ಶಿವ ರಾಜ್‌ಕುಮಾರ್, ರಜನಿಕಾಂತ್‌ ಜೊತೆ ನಟಿಸುವ ನಿರೀಕ್ಷೆಯಿದೆ. 'ತಲೈವರ್ 169' ಚಿತ್ರೀಕರಣ ಜುಲೈನಲ್ಲಿ ಪ್ರಾರಂಭವಾಗಲಿದೆ ಎಂದು ಸಹ ಹೇಳಲಾಗುತ್ತಿದೆ. ಚಿತ್ರದ ಹೆಚ್ಚಿನ ಭಾಗವನ್ನು ಚೆನ್ನೈನಲ್ಲಿ ಚಿತ್ರೀಕರಿಸಲಾಗುವುದು ಮತ್ತು ನಿರ್ದೇಶಕರು ಚಿತ್ರದ ಮೊದಲಾರ್ಧದ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: Bhool Bhulaiyaa 2: ಒಟಿಟಿಗೆ ಬರ್ತಿದೆ ಕಾರ್ತಿಕ್​ ಆರ್ಯನ್ ನಟನೆಯ ಭೂಲ್​ ಭುಲಯ್ಯ 2

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಮೋಹ್ನಾ, ರಮ್ಯಾ ಕೃಷ್ಣನ್ ಮತ್ತು ಶಿವಕಾರ್ತಿಕೇಯನ್ ಚಿತ್ರದ ತಾರಾಗಣವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News