Raajakeeya: ಇಡೀ ವ್ಯವಸ್ಥೆಯನ್ನು ಅಣಕಿಸುವ 'ರಾಜಕೀಯ' ರ್ಯಾಪ್ ಸಾಂಗ್ 

Raajakeeya: ಹೌದು, ಈಗ ಈ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಅಣಕಿಸುವ 'ರಾಜಕೀಯ' ರ್ಯಾಪ್ ಸಾಂಗ್ ವೊಂದು ಬಿಡುಗಡೆಯಾಗಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ 'ರಾಜಕೀಯ ಸಾಂಗ್ ನ್ನು ರ್ಯಾಪರ್ ಚೇತನ್ ಎನ್ನುವ ಯುವಕ ಬಿಡುಗಡೆ ಮಾಡಿದ್ದು,ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಈ ಸಾಂಗ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Manjunath N | Last Updated : Mar 20, 2024, 08:04 PM IST
  • ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
  • ಈ 'ರಾಜಕೀಯ ಸಾಂಗ್ ನ್ನು ರ್ಯಾಪರ್ ಚೇತನ್ ಎನ್ನುವ ಯುವಕ ಬಿಡುಗಡೆ ಮಾಡಿದ್ದು
  • ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಈ ಸಾಂಗ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.'
 Raajakeeya: ಇಡೀ ವ್ಯವಸ್ಥೆಯನ್ನು ಅಣಕಿಸುವ 'ರಾಜಕೀಯ' ರ್ಯಾಪ್ ಸಾಂಗ್  title=

ಜನರ ಜೀವನವನ್ನೇ ಬದಲಾಯಿಸುವ ಶಕ್ತಿ 'ರಾಜಕೀಯ ಎನ್ನುವ ಈ ನಾಲ್ಕು ಅಕ್ಷರಗಳಲ್ಲಿದೆ.ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯ ಮೂಲಕ ದೇಶದ ಹಾಗೂ ರಾಜ್ಯದ ರಾಜಕೀಯ ವ್ಯವಸ್ಥೆ ನಿರೂಪಿಸಲ್ಪಡುತ್ತದೆ.ಇಂತಹ ವ್ಯವಸ್ಥೆ ಸುವ್ಯವಸ್ಥಿತವಾಗಿದ್ದರೆ ಜನರ ಬದುಕು ಸಹ ಹಸನಾಗಿರುತ್ತದೆ.ಇಲ್ಲದೆ ಹೋದಲ್ಲಿ ಆ ದೇಶದ ವ್ಯವಸ್ಥೆಯೇ ಅರಾಜಕತೆಯಿಂದ ಕೂಡಿರುತ್ತದೆ.

ಹೌದು, ಈಗ ಈ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಅಣಕಿಸುವ 'ರಾಜಕೀಯ' ರ್ಯಾಪ್ ಸಾಂಗ್ ವೊಂದು ಬಿಡುಗಡೆಯಾಗಿದ್ದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಈ 'ರಾಜಕೀಯ ಸಾಂಗ್ ನ್ನು ರ್ಯಾಪರ್ ಚೇತನ್ ಎನ್ನುವ ಯುವಕ ಬಿಡುಗಡೆ ಮಾಡಿದ್ದು, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಈ ಸಾಂಗ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.'ಮತ ಚಲಾಯಿಸಿ ಯೋಚಿಸುವ ಮೊದಲು ಯೋಚಿಸಿ ಮತ ಚಲಾಯಿಸು ಮೊದಲು' ಎನ್ನುವುದನ್ನು ಚೇತನ್ ಅವರು ಈ ಸಾಂಗ್ ಮೂಲಕ ಸೂಚ್ಯವಾಗಿ ಹೇಳಿದ್ದಾರೆ.

ಮೂಲತಃ ಬಿಕಾಂ ಪದವೀಧರನಾಗಿರುವ ರ್ಯಾಪರ್ ಚೇತನ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು, ಕಳೆದ ಆರು ವರ್ಷಗಳಿಂದ ರ್ಯಾಪ್ ಮ್ಯೂಸಿಕ್ ನಲ್ಲಿ ತಮ್ಮನ್ನು ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.ಈ ಸಾಂಗ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ಅವರ ಇಚ್ಚೆಯಾಗಿದೆ.ಈ ಕುರಿತಾಗಿ ಜೀ ಕನ್ನಡ ನ್ಯೂಸ್ ಜೊತೆಗೆ ಮಾತನಾಡಿದ ಅವರು' ರಾಜಕೀಯ ವ್ಯವಸ್ಥೆಯ ವೈಫಲ್ಯದ ಅಣಕವನ್ನು ಈ ಹಾಡಿನ ಮೂಲಕ ಹೇಳಲಾಗಿದೆ.ಆ ಮೂಲಕ ಮತ ಚಲಾಯಿಸುವ ಸಂದರ್ಭದಲ್ಲಿ ಯೋಚಿಸಿ ಮತ ಚಲಾಯಿಸಿ ಎನ್ನುವ ತಿಳುವಳಿಕೆ ಮೂಡಿಸುವುದೇ ಈ ರ್ಯಾಪ್ ಸಾಂಗ್ ನ ಉದ್ದೇಶವಾಗಿದೆ' ಎನ್ನುತ್ತಾರೆ ರ್ಯಾಪರ್ ಚೇತನ್

ರ್ಯಾಪ್ ಸಾಂಗ್ ಎಂದರೆ ಕೇವಲ ಮನರಂಜನೆ ಎನ್ನುವಂತಹ ಸಮಯದಲ್ಲಿ 'ರಾಜಕೀಯ' ಎನ್ನುವ ನೈಜ ವಿಷಯ ವಸ್ತುವನ್ನು ಇಟ್ಟುಕೊಂಡು ರ್ಯಾಪ್ ಸಾಂಗ್ ಮೂಲಕ ಪ್ರಸ್ತುತಪಡಿಸುವ ಕೆಲಸವನ್ನು ರ್ಯಾಪರ್ ಚೇತನ್ ಹಾಗೂ ಶಶಾಂಕ್ ಅವರ ತಂಡ ಮಾಡಿರುವುದು ನಿಜಕ್ಕೂ ಶ್ಲಾಘನೀಯ. 

"ರಾಜಕೀಯ"

ಪಾರ್ಲಿಮೆಂಟೊಳಗೆ ನಾಯ್ ತರ ಕಚ್ಚಾಟ 
ರೆಸ್ಟೋರೆಂಟ್ ಒಳಗೆ ಫ್ರೆಂಡ್ ಶಿಪ್ಪಲ್ ಬಾಡೂಟ
ವರ್ಷಕ್ ಐವತ್ತ್ ಸಲ ಕ್ಯಾಂಪೇನು ಮಾಡೋದು 
ಎಲೆಕ್ಷನ್ ಟೈಮಲ್ಲಿ ಭಿಕ್ಷೇನ ಬೇಡೋದು

ನಾವ್ ಕಟ್ಟೋ ಟ್ಯಾಕ್ಸು ಜಿ,ಎಸ್,ಟಿ ಇತ್ಯಾದಿ
ಮಂತ್ರಿಗಳ್ ಮನೇಲಿ ದಿನಾಲೂ ಯುಗಾದಿ
ಅನಕ್ಷರಸ್ತರು ನಮ್ಗೆ ರೂಲರ್ ಗಳು
ಅಕ್ಷರ  ಇದ್ದೋರು ಅವ್ರ್ಗೆ ಪಿ,ಎ ಗಳು 
ಹೇ ತಿನ್ನೋ ಅನ್ನದಲ್ಲೂ ರಾಜಕೀಯ ರಾಜಕೀಯ
ಜಾತಿಮತದಲಿ ರಾಜಕೀಯ ರಾಜಕೀಯ
ಸಿಕ್ಕಿದ್ದೆಲ್ಲ ದೋಚು ಬಿಡ್ಲೇ ಬೇಡ ಅಂತು ರಾಜಕೀಯ
ನ್ಯಾಯ ನೀತಿ ಬಿಟ್ಟು ಮುಂದೆ ನುಗ್ಗು ಅಂತು ರಾಜಕೀಯ

ಐನೂರು ಜೇಬಿಗೆ,ಐನೂರು ಬಾರಿಗೆ ಸಿಕ್ರೆ ಸಾಕು ಹಾಕು ಜೈಕಾರ
ಆಸೇನ ತೋರ್ಸ್ಬಿಟ್ಟು,ಮತ ಹಾಕುಸ್ಕೊಂಡು ಕೆಲ್ಸ ಮಾಡೋಕ್ ಇವ್ರ್ಗೆ ಮೈಭಾರ
ಪಾಲಿಟಿಕ್ಸ್ ಅನ್ನೋದು ಒಂಥರಾ ಬ್ಯುಸಿನೆಸ್ಸು 
ಇನ್ವೆಷ್ಟ್ಮೆಂಟ್ ಮಾಡ್ಬುಟ್ರೆ ಸಿಗೋ ಲಾಭ ಹತ್ರಷ್ಟು
ಡವ್ಲಪ್ ಮೆಂಟ್ ಅನ್ನೋದು ಕಾಣದ ಕಡಲು 
ಹೊತ್ಕೊಂಡು ಉರೀತೈತೆ ರೈತರ  ಒಡಲು.

ಅಧಿಕಾರ ಅನ್ನೋದು ಇರುವ ತನಕ ನೀಯತ್ತನ್ನುವುದು ಮರೀಚಿಕೆ
ಕಂತೆ ಕಂತೆ ಕಾಸು ಸ್ವಿಜ್ಃ ಬ್ಯಾಂಕಲ್ಲಿಟ್ಟಿದ್ರು ಭ್ರಷ್ಟಾಚಾರದ ಬಾಯಾರಿಕೆ
ಅವ್ರ್ ಪವರ್ ಇದ್ದಾಗ ಇವ್ರ್ ಮೇಲೆ ದಾಳಿ 
ಇವ್ರ್ ಪವರ್ ಇದ್ದಾಗ ಅವ್ರ್ ಮೇಲೆ ದಾಳಿ 
ರಾಜ್ಯದ ಬೊಕ್ಕಸ ಯಾವಾಗ್ಲೂ ಖಾಲಿ 
ನಮ್ದೆ ದುಡ್ಡಲ್ ಇವ್ರು ಮಾಡೋದು ಜಾಲಿ

ಮಾಡ್ಬಾರ್ದು ಮಾಡಿ,ಬೆಡ್ರೂಮಲ್ ಸಿ.ಡಿ ಬೀಜ ಬಾಯಿಗ್ ಬಂತು ಪೆಟ್ರೋಲ್ ರೇಟ್ ನೋಡಿ
ಮಾತಲ್ಲೆ ಮೋಡಿ ಮಾಡ್ತಾರೆ ನೋಡಿ ಪ್ರಶ್ನೆ ಮಾಡ್ದೋನ್ ಎರೆಡು ಕೈಯಿಗೆ ಬೇಡಿ

ಲಾಕ್ ಡೌನ್ ಆದ್ಮೇಲಂತೂ ಹೆಚ್ಚಾಯ್ತು ಪಾವರ್ಟಿ
ಆದ್ರು ನಿಂತೆ ಇಲ್ಲ ಬೀಳೋದು ಪೆನಾಲ್ಟಿ
ಆಡಿದ್ದ ಮಾತಿಗೆ ಎಲ್ಲಿದೆ ಅರ್ಥ
ಆ ಪಕ್ಷ ಈ ಪಕ್ಷ ಎಲ್ಲಾನು ವ್ಯರ್ಥ

ಕಂಡ ಕಂಡಲ್ಲಿ ಖಂಡನೆ, ಅಮಾಯಕರಿಗೆ ದಂಡನೆ ಹೋದಲ್ಲಿ ಬಂದಲ್ಲಿ ನಿಂತಲ್ಲಿ ಕುಂತಲ್ಲಿ ಕಿತ್ತೋಗಿರೋ ವಾದ ಮಂಡನೆ
ಸೋಮಾರಿಗಳ ಗುಂಪಿದು ಪ್ರತಿ ದಿನವೂ ಸಂಡೇನೆ ರಾಜಕೀಯ ರಂಗದಲ್ಲಿ ಮತದಾರನು ಮಂಗನೇ

ನಮ್ ಪಕ್ಷಕ್ ಒಂದ್ ಓಟು, ಸಾಯಂಕಾಲ ಫುಲ್ ಟೈಟು
ಒಂದ್ ಕ್ವಾಟ್ರಿಗ್ ಆಸೆ ಪಟ್ರೆ ಹಣೆ ಮೇಲೆ ರೆಡ್ಡು ವೈಟು
ಕ್ರಮ ಸಂಖ್ಯೆ ಹದಿನೆಂಟು,ಮನೆಗೆಲ್ಲ ಫ್ರೀ ಕರೆಂಟು
ಆಶ್ವಾಸನೆಗಳನೂ ನಂಬ್ಕೊಂಡ್ರೆ ಪ್ರಾಬ್ಲಮ್ ಪರ್ಮನೆಂಟು

ನಮ್ದೂಕಿ ನಿಮ್ದೂಕಿ ಓಟ್ ಗೆ ಹಾಕ್ಬಿಟ್ಟಿ
ಒಳ್ಳೆ ಟೈಂ ಬರತ್ತೆ ಅಂನ್ಕೊಂಡು ಕೂತ್ಬಿಟ್ಟಿ
ವರ್ಷಾನೆ ಉರುಳೋಯ್ತು,ದೇಶಾನೆ ಮುಳುಗೋಯ್ತು,ತಲೆಲಿದ್ದ ನಾಕು ಕೂದ್ಲೂನು ಬೆಳ್ಗಾಯ್ತು

ರಿಸಲ್ಟ್ ಇದ್ರೂ ರಿಸರ್ವೇಷ್ ನ ಭೂತ
ಮೆರಿಟ್ ಇದ್ದೋನಿಗೆ ಯಾವಾಗ್ಲೂ ಗೂಟ
ಬಡೋರ್ ಮಕ್ಳು ಇಲ್ಲಿ ಮುಂದೆ ಬರ್ಬೇಕಂದ್ರೆ ಕೊಳ್ಳೆಗಾಲಕ್ ಹೋಗಿ ಮಾಡ್ಸ್ಬೇಕು ಮಾಟ

ಹೇ ತಿನ್ನೋ ಅನ್ನದಲ್ಲೂ ರಾಜಕೀಯ ರಾಜಕೀಯ
ಜಾತಿಮತದಲಿ ರಾಜಕೀಯ ರಾಜಕೀಯ
ಸಿಕ್ಕಿದ್ದೆಲ್ಲ ದೋಚು ಬಿಡ್ಲೇ ಬೇಡ ಅಂತು ರಾಜಕೀಯ
ನ್ಯಾಯ ನೀತಿ ಬಿಟ್ಟು ಮುಂದೆ ನುಗ್ಗು ಅಂತು ರಾಜಕೀಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News