Puttakkana Makkalu: ನೂರರ ಸಂಭ್ರಮದಲ್ಲಿ "ಪುಟ್ಟಕ್ಕನ ಮಕ್ಕಳು"

ಪುಟ್ಟಕ್ಕನ ಮಕ್ಕಳು ಧಾರವಾಹಿ ಬರೋಬ್ಬರಿ 100 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಕಂಪ್ಲೀಟ್‌ ಮಾಡಿ ಯಶಸ್ವಿಯಾಗಿ ಮುನ್ನುಗ್ತಾಯಿದೆ.. ಇಡಿ ಪುಟ್ಟಕ್ಕನ ಮಕ್ಕಳು ತಂಡ 100ರ ಖುಷಿಯನ್ನ ಸಂಭ್ರಮಿಸುತ್ತಿದೆ.

Written by - CHARITHA PATEL | Last Updated : Apr 21, 2022, 06:22 PM IST
  • ಜೀ ಕನ್ನಡದಲ್ಲಿ ಪ್ರಸಾರವಾಗುವ ವಿಭಿನ್ನ ಕಥಾಹಂದರದ ಧಾರವಾಹಿ ಪುಟ್ಟಕ್ಕನ ಮಕ್ಕಳು
  • ಬರೋಬ್ಬರಿ 100 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಕಂಪ್ಲೀಟ್‌ ಮಾಡಿದ ಸೀರಿಯಲ್‌
  • ಸ್ತ್ರೀ ಶಕ್ತಿ, ಸಾಮಾಜಿಕ ಸಂದೇಶ, ಸಂಬಂಧಗಳ ಮೌಲ್ಯ ಪ್ರತಿನಿಧಿಸುತ್ತಿರುವ ಧಾರಾವಾಹಿ
Puttakkana Makkalu: ನೂರರ ಸಂಭ್ರಮದಲ್ಲಿ "ಪುಟ್ಟಕ್ಕನ ಮಕ್ಕಳು"    title=
ಪುಟ್ಟಕ್ಕನ ಮಕ್ಕಳು

ಜೀ ಕನ್ನಡದಲ್ಲಿ ಪ್ರಸಾರವಾಗುವ ವಿಭಿನ್ನ ಕಥಾಹಂದರದ ಧಾರವಾಹಿ ಪುಟ್ಟಕ್ಕನ ಮಕ್ಕಳು. ಕೇವಲ ಮನರಂಜನೆಗಷ್ಟೇ ಸೀಮಿತವಾಗಿರದೆ ಸ್ತ್ರೀಶಕ್ತಿ, ಸಾಮಾಜಿಕ ಸಂದೇಶ , ಸಂಬಂಧಗಳ ಮೌಲ್ಯ ಹೀಗೆ ಎಲ್ಲಾ ವಿಭಾಗವನ್ನು ಪ್ರತಿನಿಧಿಸುತ್ತಿರುವ ಧಾರಾವಾಹಿ ಇದಾಗಿದ್ದು ಹಿರಿಯ ನಟಿ ಉಮಶ್ರೀ ಧಾರವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ..

ಇದನ್ನೂ ಓದಿ: ಪಾನ್ ಮಸಾಲ ಜಾಹೀರಾತು ನೀಡಿ ಟ್ರೋಲ್‌ ಆದ ಅಕ್ಕಿ! ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್

ಕಥೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂದು ಪುಟ್ಟಕ್ಕನ ಗಂಡ ಆಕೆಯನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ ಆಸರೆಯಾಗಿ ನಿಲ್ಲುತ್ತಾರೆ. ಅದರಲ್ಲೂ ಪುಟ್ಟಕ್ಕನ ಪ್ರತಿಯೊಂದು ಕಷ್ಟದಲ್ಲೂ ಅವಳ ನೆರವಿಗೆ ನಿಲ್ಲೋದು ಎರಡನೇ ಮಗಳು ಸ್ನೇಹ. ಬಹಳ ಧೈರ್ಯಶಾಲಿ ಹುಡುಗಿ. ಇದೀಗ ಕಥೆಯಲ್ಲಿ ಸ್ನೇಹ ಹಾಗೂ ಕಂಠಿ ನಡುವೆ ಕಥೆ ಸಾಗ್ತಾಯಿದ್ದು ಇವರಿಬ್ಬರ ಪ್ರೀತಿ ಸ್ನೇಹ ಕಿತ್ತಾಟ ಕಾಳಜಿ ಈ ಎಳೆ ನೋಡುಗರನ್ನು ಧಾರವಾಹಿಯತ್ತ ಸೆಳೆದಿದೆ. 

ಇನ್ನೂ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ತನ್ನದೆ ಆದ ಮಹತ್ವವನ್ನು ನೀಡಿದ್ದಾರೆ. ಸದ್ಯ ದಿನಕ್ಕೊಂದು ರೋಚಕ ತಿರುವುಗಳೊಂದಿಗೆ, ಕುತೂಹಲದೊಂದಿಗೆ ಧಾರಾವಾಹಿ ಅದ್ಬುತವಾಗಿ ಸಾಗುತ್ತಿದೆ. ಪ್ರೇಕ್ಷಕರು ಕೂಡಾ ಧಾರವಾಹಿಯನ್ನ ಬಹಳ ಇಷ್ಟಪಟ್ಟು ವೀಕ್ಷಿಸುತ್ತಿದ್ದಾರೆ.  

ಇದನ್ನೂ ಓದಿ: ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್‌.. ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ?

ಇನ್ನೂ ಧಾರವಾಹಿಯ ಶುರುವಿನಲ್ಲಿ ಟೀ ಆರ್‌ ಪಿ ಟಾಪ್‌ ಲೀಸ್ಟ್‌ನಲ್ಲಿ ಸ್ಥಾನ ಪಡೆದು ಬ್ಲಾಕ್‌ ಬಸ್ಟರ್‌ ಆಗಿತ್ತು.. ಇಂದಿಗೂ ಕೂಡಾ ಟಾಪ್‌ ಸ್ತಾನದಲ್ಲಿಯೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಿದೆ ಅಂತ ಹೇಳಿದ್ರೆ ತಪ್ಪಾಗಲ್ಲಾ..
ಇದೀಗಾ ವಿಶೇಷ ಅಂದ್ರೆ ಪುಟ್ಟಕ್ಕನ ಮಕ್ಕಳು ಧಾರವಾಹಿ ಬರೋಬ್ಬರಿ 100 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಕಂಪ್ಲೀಟ್‌ ಮಾಡಿ ಯಶಸ್ವಿಯಾಗಿ ಮುನ್ನುಗ್ತಾಯಿದೆ.. ಇಡಿ ಪುಟ್ಟಕ್ಕನ ಮಕ್ಕಳು ತಂಡ 100ರ ಖುಷಿಯನ್ನ ಸಂಭ್ರಮಿಸುತ್ತಿದೆ.

ಇನ್ನು ಮುಂದೆ ಕೂಡಾ ಕಥೆ ಇದೆ ರೀತಿ ಸಾಗಿ 100 ಅಲ್ಲಾ 200 ಅಲ್ಲಾ ಸಾಕಷ್ಟು ಎಪಿಸೋಡ್‌ಗಳನ್ನ ಯಶಸ್ವಿಯಾಗಿ ಪೂರೈಸಲಿ ಎಂಬುವುದು ನಮ್ಮ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News