ಬೆಂಗಳೂರು : ಬಾಲ ನಟನಾಗಿ ನಟನೆ ಆರಂಭಿಸಿದಾಗಿನಿಂದಲೂ ಯಶಸ್ಸಿನ ಉತ್ತುಂಗದಲ್ಲಿರುವ ಪುನೀತ್ ಹೊಸ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಿದ ನಂತರ, ಮುಂದಿನ ದಿನಗಳಲ್ಲಿ ತಮ್ಮದೇ ಪ್ರೊಡಕ್ಷನ್ ಆಗಿರುವ ಪಿಆರ್ ಕೆ ಬ್ಯಾನರ್ನಲ್ಲಿ ಮಾತ್ರ ನಟಿಸಲು ಪುನೀತ್ ತೀರ್ಮಾನಿಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.
ಪಿಆರ್ ಕೆ ಪ್ರೊಡಕ್ಷನ್ ಈಗಾಗಲೇ ಧಾರಾವಾಹಿಗಳ ನಿರ್ಮಾಣದಲ್ಲಿ ಹೆಸರು ಮಾಡಿದ್ದು ಪುನೀತ್ ಪತ್ನಿ ಅಶ್ವಿನಿ ಇದರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಜನಪ್ರಿಯ 'ಮನೆ ದೇವರು' ಧಾರಾವಾಹಿಯೂ ಇದೇ ಪ್ರೊಡಕ್ಷನ್ನ ಕೊಡುಗೆಯಾಗಿದೆ.