For Regn: ‘ದಿಯಾ’ ಪೃಥ್ವಿ ಜೊತೆ ‘ಫಾರ್ ರಿಜಿಸ್ಟ್ರೇಷನ್’ ಆದ ಮಿಲನಾ ನಾಗರಾಜ್!

"F0R REGN" ಚಿತ್ರದ ಫಸ್ಟ್‌ಲುಕ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ 1 ಮಿಲಿಯನ್ ಗೂ ಅಧಿಕ ಲೈಕ್ಸ್ ದೊರಕಿದೆ.

Written by - YASHODHA POOJARI | Edited by - Puttaraj K Alur | Last Updated : Apr 4, 2022, 07:24 PM IST
  • ‘ಫಾರ್ ರಿಜಿಸ್ಟರೇಷನ್’ನಲ್ಲಿ ಒಂದಾದ ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್
  • ಯುಗಾದಿ ಹಬ್ಬಕ್ಕೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ
  • ‘ಆಶು’ ಪಾತ್ರದಲ್ಲಿ ಪೃಥ್ವಿ ಹಾಗೂ ‘ಅನ್ವಿ’ ಪಾತ್ರದಲ್ಲಿ ಮಿಲನಾ ಕಾಣಿಸಿಕೊಳ್ಳುತ್ತಿದ್ದಾರೆ
For Regn: ‘ದಿಯಾ’ ಪೃಥ್ವಿ ಜೊತೆ ‘ಫಾರ್ ರಿಜಿಸ್ಟ್ರೇಷನ್’ ಆದ ಮಿಲನಾ ನಾಗರಾಜ್!  title=
'ಫಾರ್ ರಿಜಿಸ್ಟರೇಷನ್' ಫಸ್ಟ್‌ಲುಕ್ ಗೆ ಮೆಚ್ಚುಗೆ

ಬೆಂಗಳೂರು: 2020ರ ಸೂಪರ್ ಹಿಟ್ ಚಿತ್ರಗಳಾದ ‘ದಿಯಾ’ ಹಾಗೂ ‘ಲವ್ ಮಾಕ್ಟೇಲ್’ ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್(Pruthvi Ambaar) ಹಾಗೂ ಮಿಲನಾ ನಾಗರಾಜ್ ಅಭಿನಯದಲ್ಲಿ ಮೂಡಿಬರುತ್ತಿರುವ ಮತ್ತೊಂದು ಸದಭಿರುಚಿಯ ಚಿತ್ರ "F0R REGN" (ಫಾರ್ ರಿಜಿಸ್ಟರೇಷನ್).

ಇದನ್ನೂ ಓದಿ: KGF 2 Booking: 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ.. ದಾಖಲೆ ಬರೆದ ಯಶ್ ಸಿನಿಮಾ

ವರ್ಷದ ಮೊದಲ ಹಬ್ಬ ಯುಗಾದಿಗೆ ಈ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್‌ಲುಕ್(For Regn Movie)ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ಲೈಕ್ಸ್ ದೊರಕಿದೆ. ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಪೃಥ್ವಿ ‘ಆಶು’ ಪಾತ್ರದಲ್ಲಿ ಹಾಗೂ ಮಿಲನಾ(Milana Nagaraj) ಅವರು ‘ಅನ್ವಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Drug Case: ಮತ್ತೆ ಸದ್ದು ಮಾಡಿದ ಡ್ರಗ್‌ ಕೇಸ್‌: ನಟಿ ಸೇರಿ ಬಿಗ್‌ಬಾಸ್‌ ವಿನ್ನರ್‌ ಪೊಲೀಸ್‌ ವಶಕ್ಕೆ..!

ನಿಶ್ಚಲ್ ಫಿಲಂಸ್ ಮೂಲಕ ಎನ್.ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನವೀನ್ ದ್ವಾರಕನಾಥ್(Naveen Dwarakanath) ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಆರ್.ಕೆ.ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಳತ್ತಿ ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರ ನಿರ್ಮಾಪಕರಾಗಿ ನಿರಂಜನ್ ರಾಧಾಕೃಷ್ಣ ಇದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News