ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳು ಜನರನ್ನು ಹೆಚ್ಚು ಆಕರ್ಷಿಸುತ್ತಿವೆ. ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ಬಿಗ್ ಬಾಸ್ ನ ಈ ಸೀಸನ್ ಹೆಚ್ಚು ವಿವಾದಗಳಲ್ಲಿ ಸಿಲುಕಿದೆ. ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್'(BIGG BOSS) ನ 13 ನೇ ಸೀಸನ್[ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್] ಆರಂಭವಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿದೆ. ಆದರೆ ಈ ಕಾರ್ಯಕ್ರಮವು ಒಂದರ ನಂತರ ಒಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಮುಂಬೈನ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬಿಗ್ ಬಾಸ್ ಶೋಗೆ ನಿಷೇಧ ಹೇರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ 20 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ.
ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ 'ಬಿಗ್ ಬಾಸ್' (BIGG BOSS) ಶೋ ನಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಿದ ಬಳಿಕ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸೇರಿದಂತೆ ಹಲವಾರು ಸಂಸ್ಥೆಗಳು ಇದನ್ನು ನಿಷೇಧಿಸುವಂತೆ ಒತ್ತಾಯಿಸಿವೆ. ಪ್ರದರ್ಶನದಲ್ಲಿ ತೋರಿಸಲಾಗುವ ದೃಶ್ಯಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದು ಕೆಲವರು ಆರೋಪಿಸಿದ್ದಾರೆ.
ಪ್ರತಿಭಟನೆಗೆ ಸಾಥ್ ನೀಡಿದ ಕರ್ಣಿ ಸೇನಾ:
'ಪದ್ಮಾವತ್' ಚಿತ್ರದ ವಿರೋಧದಿಂದಾಗಿ ಬೆಳಕಿಗೆ ಬಂದ ಕರ್ಣಿಸೇನಾ ಕೂಡ 'ಬಿಗ್ ಬಾಸ್' ಕಾರ್ಯಕ್ರಮದ ವಿರುದ್ಧ ದೂರು ನೀಡಿದೆ. ಈ ದೂರನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಮನೆಯ ಹೊರಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಆನ್ಲೈನ್ ಪೋರ್ಟಲ್ ಬಾಲಿವುಡ್ ಹಂಗಾಮದ ಪ್ರಕಾರ, ಸಲ್ಮಾನ್ ಮನೆಯ ಮುಂದೆ ಪ್ರತಿಭಟನೆ ವೇಳೆ 20 ಜನರನ್ನು ಶುಕ್ರವಾರ ಬಂಧಿಸಲಾಗಿದೆ.
ಇದಲ್ಲದೆ, ಉಪದೇಶ್ ರಾಣಾ ಎಂಬ ವ್ಯಕ್ತಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಸಲ್ಮಾನ್ ಮನೆಯ ಹೊರಗೆ ನಿಂತು 'ಬಿಗ್ ಬಾಸ್' ಮನೆಯೊಳಗಿನ ಅಶ್ಲೀಲ ದೃಶ್ಯವನ್ನು ಪ್ರದರ್ಶಿಸದಂತೆ ಕಾರ್ಯಕ್ರಮದ ನಟರು ಮತ್ತು ನಿರ್ಮಾಪಕರಿಗೆ ಎಚ್ಚರಿಸಿದ್ದಾರೆ. 'ಬಿಗ್ ಬಾಸ್' ಹಿಂದೂಗಳ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಅವಮಾನಿಸುತ್ತಿದೆ ಎಂದು ಕರ್ಣಿ ಸೇನಾ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ.
ಬಿಗ್ ಬಾಸ್ ಶೋ ವಿರುದ್ಧದ ಪ್ರತಿಭಟನೆಗೆ ಕಾರಣ:
ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಖ್ಯ ಕಾರಣವೆಂದರೆ, ಈ ಬಾರಿ 'ಬಿಗ್ ಬಾಸ್' ಶೋನ ಹೊಸ ಸೆಟಪ್. ಈ ಬಗ್ಗೆ ಸಲ್ಮಾನ್ ಖಾನ್ ಅವರು ಮನೆಗೆ ಪ್ರವೇಶಿಸುವ ಮೊದಲು ಸ್ಪರ್ಧಿಗಳಿಗೆ ತಿಳಿಸಿದ್ದರು. ಅವರ ಬಿಎಫ್ಎಫ್ (ಬ್ಯಾಡ್ ಫ್ರೆಂಡ್ ಫಾರೆವರ್) ಯಾರು. ಬಿಎಫ್ಎಫ್ ನಿಯಮದಿಂದಾಗಿ, ಈ ಬಾರಿ ಇಬ್ಬರು ಒಂದೇ ಹಾಸಿಗೆಯ ಮೇಲೆ ಮಲಗಿದ್ದಾರೆ. ಹುಡುಗರು ಮತ್ತು ಹುಡುಗಿಯರು ಈ ಸೀಸನ್ ನ ಆರಂಭದಿಂದಲೂ ಒಟ್ಟಿಗೆ ಹಾಸಿಗೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದಾರೆ.