ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಜಯ ಗಳಿಸಿದ್ದಾರೆ.
ಪ್ರತಿ ವರ್ಷವೂ ನಡೆಯಬೇಕಾಗಿದ್ದ ಚುನಾವಣೆ ಕಾರಣಾಂತಗಳಿಂದಾಗಿ ಕಳೆದ ಎರಡೂವರೆ ವರ್ಷಗಳಿಂದಲೂ ನಡೆದಿರಲಿಲ್ಲ. ಇನ್ನು ಈ ಬಾರಿ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ಪಾರದರ್ಶಕವಾಗಿ ಮತದಾನ ನಡೆಯಿತು. ಸಿನಿಮಾ ವಿತರಕರಾದ ಮಾರ್ಸ್ ಸುರೇಶ್ ಮತ್ತು ಎಸ್.ಎ. ಚಿನ್ನೇಗೌಡರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಚುನಾವಣೆಯಲ್ಲಿ ಸುರೇಶ್ ಅವರಿಗೆ 317 ಮತಗಳು ಲಭಿಸಿದರೆ, ಚಿನ್ನೇಗೌಡರು 552 ಮತಗಳನ್ನು ಪಡೆದುಕೊಳ್ಳುವ ಮೂಲಕ ಗೆಲುವು ಸಾಧಿಸಿದರು. ಹಲವು ದಶಕಗಳಿಂದ ಸಿನಿಮಾ ವಿತರಣೆ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಎಸ್.ಎ. ಚಿನ್ನೇಗೌಡ ಅವರು ಪಾರ್ವತಮ್ಮ ರಾಜ್ಕುಮಾರ್ ಅವರ ಸಹೋದರರು. ಚಿನ್ನಸ್ವಾಮಿಯವರ ಮಕ್ಕಳಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಾಯಕರು.