ಅಕ್ಟೋಬರ್ ತಿಂಗಳಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆ?

   

Last Updated : Jul 28, 2018, 11:23 AM IST
ಅಕ್ಟೋಬರ್ ತಿಂಗಳಲ್ಲಿ  ಪ್ರಿಯಾಂಕಾ ಚೋಪ್ರಾ ಮದುವೆ?  title=

ನವದೆಹಲಿ: ಅಮೆರಿಕಾದ  ಸಿಂಗರ್ ನಿಕ್ ಜೋನಾಸ್ ಜೊತೆ  ಕಾಣಿಸಿಕೊಂಡು ಇತ್ತೀಚಿಗೆ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಈಗ ಇವರಿಬ್ಬರ ಗೆಳೆತನ ಮದುವೆಯವರೆಗೂ ಬಂದು  ತಲುಪಿದೆ.

ಇತ್ತೀಚಿಗೆ ನಿಕ್ ಜೋನಾಸ್ ಪ್ರಿಯಾಂಕ್ ಜೊತೆ ಗೋವಾದಲ್ಲಿ ಕುಟುಂಬದ ಭೋಜನಕೂಟದಲ್ಲಿ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಜೊತೆ  ಭರತ್ ಚಿತ್ರದಲ್ಲಿ ಅಭಿನಯಿಸಬೇಕಾಗಿದ್ದ ಪ್ರಿಯಾಂಕ ಏಕಾಏಕಿ ಈ ಚಿತ್ರದಲ್ಲಿ ನಟಿಸಲು ಆಗುವುದಿಲ್ಲ ಎಂದು ಹೇಳಿದ್ದರು.

ಆದರೆ ಅದಕ್ಕೆ ಕಾರಣವನ್ನು ಅವರು ಬಹಿರಂಗ ಪಡಿಸಿರಲಿಲ್ಲ.ಆದರೆ ಭರತ್ ಚಿತ್ರದ ನಿರ್ದೇಶಕ  ಅಲಿ ಅಬ್ಬಾಸ್ ಜಬ್ಬಾರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ " ಹೌದು ಪ್ರಿಯಾಂಕಾ ಚೋಪ್ರಾ  ಇನ್ನು ಮುಂದೆ  ಭರತ್ ಚಿತ್ರದ ಭಾಗವಾಗಿರುವುದಿಲ್ಲ ಇದಕ್ಕೆ ಕಾರಣವಂತೂ ವಿಶಿಷ್ಟವಾಗಿದೆ..ನಮಗೆ ಅವಳು ನಿಕ್ ಸಮಯದ ವೇಳೆ ಹೇಳಿರುವುದು ನಿಜಕ್ಕೂ ಸಂತಸವಾಗಿದೆ. ಭರತ್ ಟೀಮ್ ಅವಳ ಜೀವನಕ್ಕೆ ಪ್ರೀತಿ ಪೂರಕವಾಗಿ  ಹಾರೈಕೆಗಳನ್ನು ತಿಳಿಸಲು ಇಚ್ಚಿಸುತ್ತದೆ" ಎಂದು ಅವರು ತಿಳಿಸಿದ್ದರು.

ಈಗ Bollywoodlife.com ವರದಿ  ಪ್ರಕಾರ ಪ್ರಿಯಾಂಕ್ ಮತ್ತು ನಿಕ್ ಜೋನಾಸ್ ರಿಬ್ಬರು ಅಕ್ಟೋಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Trending News