Prince Mahesh Babu Daughter: ಹಾಡಿನಲ್ಲಿ ಡಾನ್ಸ್ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ ಮಹೇಶ್ ಬಾಬು ಪುತ್ರಿ, Video Viral

Mahesh Babu's daughter Sitara Ghattamaneni:ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ 'ಸರ್ಕಾರು ವಾರಿ ಪಾಟ' ಹಾಡಿನ ವಿಡಿಯೋ ಮೂಲಕ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದ್ದಾಳೆ.  

Written by - Nitin Tabib | Last Updated : Mar 19, 2022, 09:07 PM IST

    ಚಿತ್ರರಂಗಕ್ಕೆ ಮಹೇಶ್ ಬಾಬು ಪುತ್ರಿಯ ಪಾದಾರ್ಪಣೆ

  • ತಂದೆಯ ಜೊತೆಗೆ ಹಾಡಿನ ವಿಡಿಯೋದಲ್ಲಿ ಹೆಜ್ಜೆ ಹಾಕಿದ ಸಿತಾರಾ
  • ಭಾನುವಾರ ಸಂಪೂರ್ಣ ಹಾಡು ಬಿಡುಗಡೆಯಾಗಲಿದೆ
Prince Mahesh Babu Daughter: ಹಾಡಿನಲ್ಲಿ ಡಾನ್ಸ್ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದ ಮಹೇಶ್ ಬಾಬು ಪುತ್ರಿ, Video Viral title=
Mahesh Babu's daughter Sitara Ghattamaneni (File Photo)

ನವದೆಹಲಿ: Mahesh Babu Daughter Sitara Ghattamanene Viral Video - ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಕ್ರೇಜ್ ಹಲವು ವರ್ಷಗಳಿಂದ ಮುಂದುವರೆದಿದೆ. ಅವರ ವೃತ್ತಿಪರ ಜೀವನದಿಂದ ಹಿಡಿದು ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರು ತುಂಬಾ ಉತ್ಸುಕರಾಗಿರುತ್ತಾರೆ. ಇದೇ ವೇಳೆ ಮಹೇಶ್ ಬಾಬು ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದು ಪ್ರಕಟವಾಗಿದೆ. ಅವರ (Mahesh Babu) ಹಾಗೂ ನಮ್ರತಾ ಶಿರೋಡ್ಕರ್ (Namrata Shirodkar) ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ಅವಳು ಹಾಡೊಂದರಲ್ಲಿ ತನ್ನ ತಂದೆಯನ್ನೇ ಮೀರಿಸುವ ಹಾಗೆ ನೃತ್ಯ ಮಾಡುವಂತೆ ಕಂಡುಬಂದಿದ್ದಾಳೆ.

ಇದನ್ನೂ ಓದಿ-RRR Pre Release Even : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಈ ಚಿತ್ರದ ಹಾಡಿನ ಮೂಲಕ ಚಿತ್ರರಂಗ ಪ್ರವೇಶ
ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ, 'ಸರಕಾರು ವಾರಿ ಪಾಟ' ಹಾಡಿನ ವಿಡಿಯೋ ಮೂಲಕ ತನ್ನ ನಟನಾ ವೃತ್ತಿ ಆರಂಭಿಸಿದ್ದಾಳೆ. ನಿರ್ಮಾಪಕರು ಆಕೆಯ ಹಾಡಿನ ಪ್ರೊಮೊವೊಂದನ್ನು 'ಪೇನಿ ಸಾಂಗ್' ಶೀರ್ಷಿಕೆಯಡಿ ಬಿಡುಗಡೆ ಮಾಡಿದ್ದಾರೆ. ಇಲ್ಲಿದೆ Video..

ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ವಿಡಿಯೋ
ಸಿತಾರಾಳ 'ಪೇನಿ ಸಾಂಗ್' (Penny Song) ವಿಡಿಯೋಗೆ ಜಬರ್ದಸ್ತ್ ರೆಸ್ಪಾನ್ಸ್ ದೊರೆತಿದೆ. ಸಿತಾರಾಳ ವಿಶಿಷ್ಟ ಡಾನ್ಸ್ ಶೈಲಿ ಹಾಗೂ ಸ್ಟೈಲ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಸಂಪೂರ್ಣ ಹಾಡನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕರು ಘೋಷಿಸಿದ್ದಾರೆ. ಥಮನ್ ರಚಿತ ಮ್ಯೂಸಿಕ್ ಸಿಂಗಲ್ 'ಕಲಾವತಿ' ಇನ್ನೂ ಹಿಟ್ ಲಿಸ್ಟ್ ನಲ್ಲಿ ಮುಂದುವರೆದಿದೆ.

ಇದನ್ನೂ ಓದಿ-James Fans Response : ವೀಕೆಂಡ್‌ನಲ್ಲಿ 'ಜೇಮ್ಸ್‌' ಅಬ್ಬರ : ಅಭಿಮಾನಿಗಳ ರೆಸ್ಪಾನ್ಸ್ ಹೇಗಿದೆ? ನೋಡಿ

ಕೀರ್ತಿ ಸುರೇಶ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಮಹೇಶ್ ಬಾಬು
ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಕೌಟುಂಬಿಕ ಹಾಗೂ ಆಕ್ಷನ್ ನಿಂದ ಕೂಡಿದ ಚಿತ್ರ 'ಸರಕಾರು ವಾರಿ ಪಾಟ'ದ ನಿರ್ದೇಶನದ ಜವಾಬ್ದಾರಿಯನ್ನು ನಿರ್ದೇಶಕ ಪರಶುರಾಮ್ ಹೊತ್ತುಕೊಂಡಿದ್ದಾರೆ. ಅವರ ತಂಡದ ವತಿಯಿಂದ ಚಿತ್ರದ ಕುರಿತು ಬರುವ ಪ್ರತಿಯೊಂದು ಅಪ್ಡೇಟ್, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸತೊಡಗಿದೆ. 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ಮಹೇಶ್ ಬಾಬು ಅವರ ಜೊತೆಗೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ-James In Piracy: ಪವರ್‌ ಸ್ಟಾರ್ ಸಿನಿಮಾ 'ಜೇಮ್ಸ್‌'ಗೂ ಶುರುವಾಯ್ತು ಪೈರಸಿ ಕಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News