"ನಿಮ್ ಮಾಮನೊ.. ಅತ್ತೇನೊ.. 30 % ಕೊಡಿ ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ"-ಸುದೀಪ್‌ಗೆ ಪ್ರಕಾಶ್‌ ರಾಜ್‌ ಟಾಂಗ್‌

Prakash Raj : ನಟ ಕಿಚ್ಚ ಸುದೀಪ್‌ ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಹೇಳಿಕೆ ನೀಡಿದಾಗಿನಿಂದಲೂ ಸಾಕಷ್ಟು ಗೊಂದಲಗಳು ಚರ್ಚೆಗಳು ಸೃಷ್ಟಿಯಾಗುತ್ತಿದ್ದು, ಈ ವಿಚಾರ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಮತ್ತೇ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್‌ ಮೂಲಕ ಕಿಚ್ಚ ಸುದೀಪ್‌ಗೆ ಅಣಕವಾಡಿದ್ದಾರೆ.   

Written by - Zee Kannada News Desk | Last Updated : Apr 7, 2023, 09:15 AM IST
  • ಬುಧವಾರ ನಟ ಸುದೀಪ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ್ದರು.
  • ಕೂಡಲೇ ಟ್ವೀಟ್‌ಗಳ ಮೂಲಕ ಇದಕ್ಕೆ ಬೇಸರ ವ್ಯಕ್ತಪಡಿಸಿದರು.
  • ಇದೀಗ ಮತ್ತೊಂದು ಟ್ವೀಟ್‌ ಮೂಲಕ ಕಿಚ್ಚ ಸುದೀಪ್‌ಗೆ ಟಾಂಗ್‌ ನೀಡಿದ್ದಾರೆ.
 "ನಿಮ್ ಮಾಮನೊ.. ಅತ್ತೇನೊ.. 30 % ಕೊಡಿ ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ"-ಸುದೀಪ್‌ಗೆ ಪ್ರಕಾಶ್‌ ರಾಜ್‌ ಟಾಂಗ್‌  title=

Kichha Sudeep : ಬುಧವಾರ ನಟ ಸುದೀಪ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ್ದರು. ಈ ಹೇಳಿಕೆಗೆ ಸಾಕಷ್ಟು ಜನರ ವಿರೋಧ ವ್ಯಕ್ತವಾಗಿದೆ. ಹೆಚ್ಚಾಗಿ ಸುದೀಪ್‌ ಅಭಿಮಾನಿಗಳಿಗೆ ಈ ವಿಚಾರವಾಗಿ ಬೇಸರ ಉಂಟಾಗಿರುವುದಂತೂ ನಿಜ. ಇನ್ನು ಸುದೀಪ್ ಬಿಜೆಪಿ ಪಕ್ಷ ಸೇರುವುದಿಲ್ಲ ಎನ್ನುವ ಭರವಸೆಯಲ್ಲಿದ್ದ ಪ್ರಕಾಶ್‌ ರಾಜ್‌ಗೂ ಇದು ಶಾಕ್ ತಂದಿತ್ತು. ಕೂಡಲೇ ಟ್ವೀಟ್‌ಗಳ ಮೂಲಕ ಇದಕ್ಕೆ ಬೇಸರ ವ್ಯಕ್ತಪಡಿಸಿದರು.

ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಾಗ ಪ್ರಕಾಶ್ ರಾಜ್ ಅದೆಲ್ಲಾ ಸುಳ್ಳು, "ನಮ್ಮ ಕಿಚ್ಚ ಮಾರಿಕೊಳ್ಳುವವರು ಅಲ್ಲ" ಎಂದು ಟ್ವೀಟ್ ಮಾಡಿದ್ದರು. ಇದೀಗ ಕಿಚ್ಚ ಸುದೀಪ್‌ ನಡೆಯಿಂದಾಗಿ ಪ್ರಕಾಶ್‌ ರಾಜ್‌ ಸಾಲು ಸಾಲು ಟ್ವೀಟ್‌ಗಳ ಮೂಲಕ ಕಿಚ್ಚ ಸುದೀಪ್‌ ಅವರಿಗೆ ಟಾಂಗ್‌ ನೀಡುತ್ತಿದ್ದಾರೆ. ಮೊದಲಿಗೆ ಪ್ರಕಾಶ್‌ ರಾಜ್‌ "ಪ್ರೀತಿಯ ಸುದೀಪ್.. ಎಲ್ಲರೂ ಪ್ರೀತಿಸುವ ಕಲಾವಿದರಾಗಿ.. ನೀವು ಜನರ ಧ್ವನಿಯಾಗುತ್ತೀರಿ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ನೀವು ರಾಜಕೀಯ ಪಕ್ಷದೊಂದಿಗೆ ಬಣ್ಣ ಹಚ್ಚಲು ಆಯ್ಕೆ ಮಾಡಿಕೊಂಡಿದ್ದೀರಿ..#justasking" ಎಂದು ಟ್ವೀಟ್‌ ಮಾಡಿದ್ದರು. 

ಇದನ್ನೂ ಓದಿ-ಕಿಚ್ಚ ಸುದೀಪ್ ಗೆ ಬೆದರಿಕೆ ಪ್ರಕರಣ : ಕಾರು ಚಾಲಕನ ಮೇಲೆ ಅನುಮಾನ!

ಇದೀಗ ಮತ್ತೊಂದು ಟ್ವೀಟ್‌ ಮೂಲಕ ಕಿಚ್ಚ ಸುದೀಪನಿಗೆ ಟಾಂಗ್‌ ನೀಡಿದ್ದಾರೆ. ಕಿಚ್ಚ ಸುದೀಪ್‌ ಸಿಎಂ. ಬೊಮ್ಮಾಯಿ ಅವರನ್ನು ಮಾಮ ಎಂದು ಕರೆಯುವ ವಿಷಯವನ್ನು ಇಟ್ಟುಕೊಂಡು "ನೋಡ್ರಪ್ಪ… ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ….. ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ … #justasking" ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಇನ್ನೊಂದು ಟ್ವೀಟ್‌ ಮಾಡಿ "ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೊಕದ ಭಾರ .. #justasking" ಎಂದು ಟಾಂಗ್‌ ನೀಡಿದ್ದಾರೆ. 

ಇದನ್ನೂ ಓದಿ-ಬಿಜೆಪಿ ಬೆಂಬಲಿಸುತ್ತೇನೆಂಬ ಕಿಚ್ಚನ ಹೇಳಿಕೆಯಿಂದ ಬೇಸರಗೊಂಡ ಪ್ರಕಾಶ್‌ ರಾಜ್‌ ..!

 

Trending News