'Genie Film: ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ರವರ ಜೀನಿ' ಸಿನಿಮಾ

Ponniyin Selvan 'Genie: ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ.

Written by - Zee Kannada News Desk | Last Updated : Jul 5, 2023, 07:20 PM IST
  • ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ
  • ಜಯಂರವಿ ಹೊಸ ಸಿನಿಮಾ ’ಜೀನಿ
  • ಯುವ ನಿರ್ದೇಶಕ ಅರ್ಜುನನ್ ಜೆ ಆರ್ ನಿರ್ದೇಶನ
'Genie Film: ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ರವರ ಜೀನಿ'  ಸಿನಿಮಾ title=

Ponniyin Selvan: ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ.

ವೆಲ್ಸ್ ಫಿಲಂಸ್ ಇಂಟರ್‌ನ್ಯಾಶನಲ್‌ನಡಿ ಡಾ.ಇಶಾರಿ ಕೆ ಗಣೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚೆನ್ನೈನಲ್ಲಿಂದು ಸೆಟ್ಟೇರಿರುವ ಈ ಸಿನಿಮಾಗೆ ಜೀನಿ ಎಂಬ ಟೈಟಲ್ ಇಡಲಾಗಿದೆ.

ಇದನ್ನೂ ಓದಿ: Viral photo: ನಟಸಾರ್ವಭೌಮ ಅಣ್ಣಾವ್ರು & ಕರ್ನಾಟಕ ರತ್ನ ಅಪ್ಪು, ರವರ ಅಪರೂಪದ ಫೋಟೊ ವೈರಲ್..!

ಯುವ ನಿರ್ದೇಶಕ ಅರ್ಜುನನ್ ಜೆ ಆರ್ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಶ್ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ, ಪ್ರದೀಪ್ ಇ ರಾಘವ್ ಸಂಕಲನ, ಹಾಲಿವುಡ್ ಮತ್ತು ಅಂತರಾಷ್ಟ್ರೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸ್ಟಂಟ್ ಕೊರಿಯೋಗ್ರಾಫರ್‌ಗಳಲ್ಲಿ ಒಬ್ಬರಾದ ಯಾನಿಕ್ ಬೆನ್ ಈ ಚಿತ್ರಕ್ಕೆ ಆಕ್ಷನ್ ಸೀಕ್ವೆನ್ಸ್ ಖದರ್ ಚಿತ್ರದಲ್ಲಿರಲಿದೆ.

ಇದನ್ನೂ ಓದಿ: Kiccha Sudeep: ’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್

ಜೀನಿ ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌ನ 25 ನೇ ಚಿತ್ರವಾಗಿದ್ದು, ದುಬಾರಿ ಬಜೆಟ್‌ನಲ್ಲಿ ತಯಾರಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ಜೀನಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News