/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯದೊಂಬರಾಟದ ಮಧ್ಯೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಬುಧವಾರ ಮುಂಜಾನೆ ಬೆಂಗಳೂರಿಗೆ ತಲುಪಿದರು. ಗಮನಾರ್ಹವಾಗಿ ಮಧ್ಯಪ್ರದೇಶದ ಬಂಡಾಯ ಶಾಸಕರು ತಂಗಿರುವ ನಗರದ ರಾಮದಾ ಹೋಟೆಲ್‌ನಲ್ಲಿ ಅವರನ್ನು ಭೇಟಿಯಾಗಲು ದಿಗ್ವಿಜಯ್ ಸಿಂಗ್(Digvijay singh)  ಅಲ್ಲಿಗೆ ಬಂದಾಗ ಪೊಲೀಸರು ಹೋಟೆಲ್ ಹೊರಗೆ ಅವರನ್ನು ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಅವರು ಹೋಟೆಲ್ ಬಳಿ ಧರಣಿ ಕುಳಿತಿದ್ದಾರೆ. ಆ ನಂತರ ಪೊಲೀಸರು ಆತನನ್ನು ಬಂಧಿಸಿದರು (Preventive Arrest).

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬಲವಂತವಾಗಿ ಇಲ್ಲಿ ಇರಿಸಲಾಗಿದೆ. ಅವರನ್ನು ಪಕ್ಷಕ್ಕೆ ಹಿಂದಿರುಗುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಂಡಾಯ ಶಾಸಕರನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ. ಅವರ ಕುಟುಂಬದಿಂದಲೂ ಸಂದೇಶಗಳು ಬಂದಿವೆ. ನಾನು ಈ ಹಿಂದೆ ಇವರಲ್ಲಿ 5 ಶಾಸಕರೊಂದಿಗೆ ಮಾತನಾಡಿದ್ದೆ, ಆದರೆ ಅವರ ಫೋನ್‌ಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹೋಟೆಲ್‌ನ ಪ್ರತಿಯೊಂದು ಕೋಣೆಯ ಹೊರಗೆ ಪೊಲೀಸರನ್ನು ಇರಿಸಲಾಗಿದೆ. ಅವರು 24 ಗಂಟೆಗಳ ಕಾಲ ಕಾವಲು ಕಾಯುತ್ತಿದ್ದಾರೆ  ಎಂದು ಅವರು ಆರೋಪಿಸಿದರು.

ಬೆಂಗಳೂರು ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್, ನಾನು ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ. ಮಾರ್ಚ್ 26 ರಂದು ಮತದಾನ ನಡೆಯಲಿದೆ. ನನ್ನ ಶಾಸಕರನ್ನು ಇಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿದೆ. ಅವರು ನನ್ನೊಂದಿಗೆ ಮಾತನಾಡಲು ಬಯಸುತ್ತಾರೆ. ಆದರೆ ಅವರಿಗೆ ಫೋನ್‌ಗಳನ್ನು ನೀಡುತ್ತಿಲ್ಲ. ಶಾಸಕರ ಭದ್ರತೆಗೆ ಧಕ್ಕೆ ಇದೆ. ಅವರೊಂದಿಗೆ ಮಾತನಾಡಲು ಪೊಲೀಸರು ನನಗೆ ಅವಕಾಶ ನೀಡುತ್ತಿಲ್ಲ  ಎಂದು ಹೇಳಿದರು.

ವಾಸ್ತವವಾಗಿ ಬಂಡಾಯ ಶಾಸಕರನ್ನು ಭೇಟಿಯಾಗಲು ಅನುವು ಮಾಡಿಕೊಡುವಂತೆ ಹೋಟೆಲ್ ಮುಂದೆ ಧರಣಿ ಕುಳಿತಿದ್ದ ದಿಗ್ವಿಜಯ್ ಸಿಂಗ್ ಅವರನ್ನು ಸ್ಥಳದಿಂದ ಕಳುಹಿಸಲು ಪೊಲೀಸರು ಪ್ರಯತ್ನಿಸಿದರು. ಆದರೆ ಸ್ಥಳದಲ್ಲಿ ಹಾಜರಿದ್ದ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ಅನುವು ಮಾಡಿಕೊಡಲಿಲ್ಲ. ಇದಕ್ಕೂ ಮೊದಲು ದಿಗ್ವಿಜಯ್ ಸಿಂಗ್ ಇಲ್ಲಿಗೆ ಬಂದಾಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK ShivaKumar) ಅವರನ್ನು ಭೇಟಿಯಾದರು. ಆ ನಂತರ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ದಿಗ್ವಿಜಯ್ ಸಿಂಗ್ ಹೋಟಲ್ ತಲುಪಿದರು.

ಏತನ್ಮಧ್ಯೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಸಲಿದೆ. ಶೀಘ್ರವೇ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲು ಬಿಜೆಪಿ ಅರ್ಜಿ ಸಲ್ಲಿಸಿದೆ.

Section: 
English Title: 
Police arrested Congress leader Digvijay Singh in Bengaluru
News Source: 
Home Title: 

ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಂಧನ

ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಂಧನ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಂಧನ
Yashaswini V
Publish Later: 
No
Publish At: 
Wednesday, March 18, 2020 - 09:36
Created By: 
Yashaswini V
Updated By: 
Yashaswini V
Published By: 
Yashaswini V