ನವದೆಹಲಿ:10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ಪ್ರತಿಯಾಗಿ ಹಿರಿಯ ನಟ ನಾನಾ ಪಟೇಕರ್ ಈಗ ನಟಿಗೆ ಕ್ಷಮೆಯಾಚುವಂತೆ ಕೋರಿ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ ಎನ್ನುವ ಮಾತಿಗೆ ತನುಶ್ರೀ ಈಗ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿ ಪಟೇಕರ್ ಮತ್ತೊಂದು ಹೊಸ ಸವಾಲು ಹಾಕಿದ್ದಾರೆ
"ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ನಾನು ನನ್ನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ವಕೀಲರುರನ್ನು ಸಜ್ಜುಗೊಳಿಸುತ್ತಿದ್ದೇನೆ. ಅಲ್ಲದೆ ಇದುವರೆಗೆ ನಾನು ನೀಡಿದ ಹೇಳಿಕೆಗೆ ನಾನಾ ಅವರ ವಕೀಲರಿಂದ ಯಾವುದೇ ಲೀಗಲ್ ನೋಟಿಸ್ ನ್ನು ಸ್ವೀಕರಿಸಿಲ್ಲ. ಹಾಗಾಗಿ ಬ್ಲಫ್ಮಾಸ್ಟರ್ ಗೋಗೊ ತನ್ನ ಆಟವನ್ನು ಇಲ್ಲಿಗೆ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡುವ ಸಾಧ್ಯತೆ ಇದೆ . ನನಗೆ ಖಾಲಿ ಬೆದರಿಕೆಗಳನ್ನು ನೀಡುವ ಬದಲು ನನಗೆ ಕಾನೂನು ನೋಟೀಸ್ ಕಳುಹಿಸಿ ಮತ್ತು ನಂತರ ನಾನು ಏನು ಮಾಡಬೇಕೆಂದು ನೀವು ನೋಡುತ್ತೀರಿ. " ಎಂದು ತನುಶ್ರೀ ದತ್ತಾ ಸವಾಲು ಹಾಕಿದ್ದಾಳೆ.
ನಟಿ ದತ್ತಾ ಇನ್ನು ಮುಂದುವರೆದು ನಮ್ಮ ದೇಶದಲ್ಲಿ ಇನ್ನೂ ಲೆಕ್ಕವಿಲ್ಲದಷ್ಟು ಲಕ್ಷಾಂತರ ಜನರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ, ಏಕೆಂದರೆ ಅವರು ನ್ಯಾಯಯುತ ಮಂಬೊ ಜಂಬೋನ ವೆಬ್ನಲ್ಲಿ ಸಿಲುಕಿ ಮೌನವಾಗಿದ್ದಾರೆ. ಅವರು ನಮ್ಮ ನ್ಯಾಯಾಂಗವನ್ನು ಮಾತ್ರವಲ್ಲ, ಅಂತಹ ಬೆದರಿಕೆಗಳಿಂದ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಅಡ್ಡಿಪಡಿಸುವುದರ ಮೂಲಕ ನಮ್ಮ ಗೌರವಾನ್ವಿತ ಸಂವಿಧಾನವನ್ನು ವ್ಯಂಗ್ಯವಾಡಿದ್ದಾರೆ ಎಂದು ನಟಿ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ಪಾಟೇಕರ್ ಅವರು ಟೈಮ್ಸ್ ನೌ ಗೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ದೌರ್ಜನ್ಯ ಎಂದರೇನು? ನನ್ನೊಂದಿಗೆ ಸೆಟ್ನಲ್ಲಿ 50-100 ಜನರು ಇದ್ದರು ಎಂದು ಅವರು ನಟಿಯ ಆರೋಪವನ್ನು ಪ್ರಶ್ನಿಸಿದ್ದರು.