ಭಾರತದ ವಿಜಯವನ್ನು ಸಂಭ್ರಮಿಸಿದ ತೈಮೂರ್ ಅಲಿ ಖಾನ್

ಪುಟ್ಟ ತೈಮೂರ್, ಭಾರತೀಯ ಕ್ರಿಕೆಟ್ ತಂಡದ ವಿಜಯವನ್ನು ಸಂಭ್ರಮಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.   

Last Updated : Jun 17, 2019, 04:29 PM IST
ಭಾರತದ ವಿಜಯವನ್ನು ಸಂಭ್ರಮಿಸಿದ ತೈಮೂರ್ ಅಲಿ ಖಾನ್ title=
Image Courtesy: Yogen Shah

ನವದೆಹಲಿ: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಟ ಸೈಫ್ ಅಲಿ ಖಾನ್ ಭಾರತ ತಂಡವನ್ನು ಬೆಂಬಲಿಸುತ್ತಿದ್ದಂತೆ, ಅವರ ಎರಡು ವರ್ಷದ ಮಗ ತೈಮೂರ್ ಭಾರತದ ವಿಜಯವನ್ನು ಸಂಭ್ರಮಿಸಿದ್ದಾರೆ.

ಪುಟ್ಟ ತೈಮೂರ್, ಭಾರತೀಯ ಕ್ರಿಕೆಟ್ ತಂಡದ ವಿಜಯವನ್ನು ಆನಂದಿಸುತ್ತಾ ಕ್ಯಾಮೆರಾಗಳಿಗೆ ನಗು ಮತ್ತು ನಮಸ್ಕರಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೀಗ ಸಾಕಷ್ಟು ವೈರಲ್ ಆಗಿದೆ.  ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಫ್ಯಾನ್ ಕ್ಲಬ್‌ಗಳು ಸಾಕಷ್ಟು ಹಂಚಿಕೊಂಡಿವೆ.

"ಒನ್ ಲವ್, ಒನ್ ಲವ್ ಫಾರ್ ಇಂಡಿಯಾ,"ಶೀರ್ಷಿಕೆ ಜೊತೆಗೆ ಮುದ್ದಾದ ತೈಮೂರ್  ಫೋಟೋವನ್ನು ಹಂಚಿಕೊಳ್ಳಲಾಗಿದೆ.

 
 
 
 

 
 
 
 
 
 
 
 
 

One Love, One Heart For INDIA 😗😗😗

A post shared by Kareena Kapoor Khan (@therealkareenakapoor) on

ಏತನ್ಮಧ್ಯೆ, ಸೈಫ್ ಭಾನುವಾರ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ತಮ್ಮ 'ಜವಾನಿ ಜಾನೆಮ್ನಾನ್' ಚಿತ್ರದ ಕೋ-ಸ್ಟಾರ್ ಅಲಿಯಾ ಅವರೊಂದಿಗೆ ವೀಕ್ಷಿಸಿದರು. ಅವರು ನಟಿ ಪೂಜಾ ಬೇಡಿ ಅವರ ಪುತ್ರಿ ಮತ್ತು 'ಜವಾನಿ ಜಾನೆಮ್ನಾನ್' ಅವರ ಚೊಚ್ಚಲ ಚಿತ್ರವಾಗಲಿದೆ. ನಟರು ಲಂಡನ್‌ನಲ್ಲಿ ರೋಮ್-ಕಾಮ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

 
 
 
 

 
 
 
 
 
 
 
 
 

India V Pakistan father’s day celebrations with my on screen father from #JawaaniJaaneman, #SaifAliKhan✨

A post shared by ALAIA F (@alaiaf_) on

ಸೈಫ್, ಪತ್ನಿ ಕರೀನಾ ಕಪೂರ್ ಮತ್ತು ತೈಮೂರ್ ಈಗ ಎರಡು ವಾರಗಳಿಂದ ಲಂಡನ್‌ನಲ್ಲಿದ್ದಾರೆ. ಇವರಿಗೆ ಇತ್ತೀಚೆಗೆ ಕರೀನಾಳ ಸಹೋದರಿ ಕರಿಷ್ಮಾ ಮತ್ತು ಅವರ ಮಕ್ಕಳಾದ ಸಮಿಯೆರಾ ಮತ್ತು ಕಿಯಾನ್ ಸಾಥ್ ನೀಡಿದ್ದಾರೆ.

Trending News