ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ: ಅದ್ದೂರಿಯಾಗಿ ಸೆಟ್ಟೇರಿದ 'ಟಾಕ್ಸಿಕ್

Toxic Muhurta: ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ (Toxic) ಸೆಟ್ಟೇರಿದ್ದು, ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ. 

Written by - Yashaswini V | Last Updated : Aug 8, 2024, 11:13 AM IST
  • ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ
  • ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ಟಾಕ್ಸಿಕ್ಸ್
  • ಬ್ರಾಹ್ಮೀ ಮುಹೂರ್ತದಲ್ಲಿ ನೆರವೇರಿದ ಟಾಕ್ಸಿಕ್ ಚ್ತ್ರದ ಮುಹೂರ್ತ
ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ: ಅದ್ದೂರಿಯಾಗಿ ಸೆಟ್ಟೇರಿದ 'ಟಾಕ್ಸಿಕ್  title=

Pan India Movie Toxic: ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್​ (Pan India star actor Yash) ಅಭಿನಯದ ಬಹು‌ನಿರೀಕ್ಷಿತ ಪ್ಯಾನ್ ವರ್ಲ್ಡ್ 'ಟಾಕ್ಸಿಕ್' ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ. ಮೂರು ವರ್ಷಗಳ ನಂತರ ಕೊನೆಗೂ ಯಶ್ 19 ಚಿತ್ರಕ್ಕೆ ಚಾಲನೆ ದೊರೆತಿದ್ದು ಯಶ್ (Yash) ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ. 

ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ (Toxic) ಸೆಟ್ಟೇರಿದ್ದು, ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ. 

ಇದನ್ನೂ ಓದಿ- ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್‌ ಠಾಕುರ್‌..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್‌

ಟಾಕ್ಸಿಕ್ ಶುರುಮಾಡುವ ಮೊದಲೆ, ಸೂರ್ಯ ಸದಾಶಿವ ರುದ್ರ, ಮಂಜುನಾಥನ ದರ್ಶನ ಪಡೆದು ಬಂದಿರುವ ರಾಕಿಭಾಯ್ ಯಶ್ (Rakibhai Yash), ಇಂದಿನಿಂದಲೇ ಟಾಕ್ಸಿಕ್ ಶೂಟಿಂಗ್ (Toxic Shooting) ನಲ್ಲಿ ಭಾಗಿಯಾಗಲಿದ್ದಾರೆ. 

ಇದನ್ನೂ ಓದಿ- ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್‌! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?

ಲೈಟ್ ಬಾಯ್ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ ಯಶ್:
ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಲೈಟ್ ಆಫೀಸರ್ ಕೈಯಲ್ಲಿ ಯಶ್ (Yash) ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ (Pan World Movie Toxic) ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.

ಬಹು‌ನಿರೀಕ್ಷಿತ ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ರೆ, ಕೆ‌ವಿ‌ಎನ್ ಪ್ರೊಡಕ್ಷನ್ಸ್ (KVN Productions)ನ ಕೆ. ವೆಂಕಟ್ ನಾರಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News