ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬದಂದು ಮತ್ತೊಂದು ಸರ್ಪೈಸ್:‌ D58 ಅಪ್ಡೇಟ್!

Darshan 58th Movie: ಚಂದನವನದ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬದಂದು ಡೆವೆಲ್‌ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡುವುದರ ಜೊತೆಗೆ ತಮ್ಮ 58ನೇ ಚಿತ್ರದ ಅಪ್‌ಡೇಟ್‌ ಸಹ ನೀಡಲಿದ್ದಾರಂತೆ. ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : Jan 25, 2024, 09:03 AM IST
  • ದರ್ಶನ್ ಹುಟ್ಟುಹಬ್ಬದಂದು 'ಡೆವಿಲ್' ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗುವುರ ಜೊತೆಗೆ ದರ್ಶನ್ ನಟನೆಯ ಮುಂದಿನ ಸಿನಿಮಾಗಳ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ.
  • ನಟ ದರ್ಶನ್‌ 'ಕಾಟೇರ' ಬಳಿಕ, ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ನಟಿಸಿತ್ತಿದ್ದು, ಈಗಾಗಲೇ ಲುಕ್ ಟೆಸ್ಟ್ ಕೂಡ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಕೂಡ ಪ್ರಾರಂಭವಾಗಲಿದೆ.
  • ಕಳೆದ ವರ್ಷ ನಿರ್ಮಾಪಕ ವೆಂಕಟ್ ಕೋನಂಕಿ ಜನ್ಮದಿನದಂದು ಪ್ರೇಮ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಘೋಷಣೆ ಆಗಿದ್ದು, ಅದು ಡಿ-ಬಾಸ್‌ನ 58ನೇ ಸಿನಿಮಾ ಎನ್ನಲಾಗುತ್ತಿದೆ.
ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬದಂದು ಮತ್ತೊಂದು ಸರ್ಪೈಸ್:‌ D58 ಅಪ್ಡೇಟ್! title=

D58 Update On Darshan Birthday: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ಈ ವರ್ಷ ಡಿ-ಬಾಸ್‌ ಫ್ಯಾನ್ಸ್‌ ಸಂಭ್ರಮ ಡಬಲ್ ಆಗಲಿದೆ. ಇದೇ ದಿನ 'ಡೆವಿಲ್' ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗುವುರ ಜೊತೆಗೆ ದರ್ಶನ್ ನಟನೆಯ ಮುಂದಿನ ಸಿನಿಮಾಗಳ ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ. ಫೆಬ್ರವರಿ 16 ರಂದು ಅದ್ಧೂರಿ ಸೆಲೆಬ್ರೆಷನ್‌ಗೆ ಬ್ರೇಕ್ ಹಾಕಿ, ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಫ್ಯಾನ್ಸ್‌ ಜೊತೆಗೆ ಈ ವರ್ಷವೂ ದರ್ಶನ್ ಹುಟ್ಟುಹಬ್ಬ ಆಚರಿಸಲಿದ್ದಾರೆ. ಆದರೆ ಕೇಕ್, ಬ್ಯಾನರ್, ಹಾರ ತರಬೇಡಿ, ಬದಲಿಗೆ ದಿನಪಿ ಪದಾರ್ಥ ತಂದು ಕೊಡಿ. ಅದನ್ನು ಅವಶ್ಯಕತೆ ಇರುವವರಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದಾರೆ. 

ನಟ ದರ್ಶನ್‌ 'ಕಾಟೇರ' ಬಳಿಕ, ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಚಿತ್ರದಲ್ಲಿ ನಟಿಸಿತ್ತಿದ್ದು, ಈಗಾಗಲೇ ಲುಕ್ ಟೆಸ್ಟ್ ಕೂಡ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರೀಕರಣ ಕೂಡ ಪ್ರಾರಂಭವಾಗಲಿದೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಕೂಡ ಘೋಷಣೆ ಆಗಿದ್ದು, ಈ ಚಿತ್ರವನ್ನು ಡೈರೆಜ್ಟರ್‌ ಜೋಗಿ ಪ್ರೇಮ್ ನಿರ್ದೇಶನ ಮಾಡಲಿದ್ದಾರೆ.  ನಿರ್ದೇಶಕ ಪ್ರೇಮ್ ಹಾಗೂ ದರ್ಶನ್ 'ಕರಿಯ' ಬಳಿಕ ಮತ್ತೆ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. 

ಇದನ್ನೂ ಓದಿ: ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಲ ಐದು ಚಿತ್ರಗಳಿಗೆ ಚಾಲನೆ

ಕೆಲ ದಿನಗಳ ಹಿಂದೆ ನಟ ದರ್ಶನ್  ಪ್ರೇಮ್ ಬಗ್ಗೆ 'ಪುಡುಂಗು' ಎಂದು ಹೇಳಿ, ಅದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಆ ವೇಳೆ ಪ್ರೇಮ್‌ ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡುವ ಮಾತೇಯಿಲ್ಲ ಎಂದು ಹೇಳಿದ್ದರು. ಆದರೆ ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಆತ್ಮೀಯ ಸ್ನೇಹಿತರಾಗಿದ್ದು, ಆಕೆಯ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಶಮನ ಮಾಡಿ ಒಟ್ಟಿಗೆ ಚಿತ್ರವನ್ನು ಮಾಡುವಂತೆ ಮಾಡಿದ್ದಾರೆ ಎನ್ನಲಾಗಿತ್ತು.  ದರ್ಶನ್ ಖಾಸಗಿ ಹೋಟೆಲ್‌ನಲ್ಲಿ ಕೆವಿಎನ್ ಸಂಸ್ಥೆ ಜೊತೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. 

ಕಳೆದ ವರ್ಷ ನಿರ್ಮಾಪಕ ವೆಂಕಟ್ ಕೋನಂಕಿ ಜನ್ಮದಿನದಂದು ಪ್ರೇಮ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರ ಘೋಷಣೆ ಆಗಿದ್ದು, ಅದು ಡಿ-ಬಾಸ್‌ನ 58ನೇ ಸಿನಿಮಾ ಎನ್ನಲಾಗುತ್ತಿದೆ. ಈ ಬಾರಿ ಹುಟ್ಟುಹಬ್ಬಕ್ಕೆ D58 ಟೈಟಲ್ ರಿವೀಲ್ ಆಗುತ್ತದೆ ಎನ್ನುವ ಗುಸುಗುಸು ಚಂದನವನದ ಅಂಗಳದಲ್ಲಿ ಶುರುವಾಗಿದ್ದು, ಅಭಿಮಾನಿಗಳು ಸಹ ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆ ಬಳಿ ಸಿನಿಮಾ ಅಪ್‌ಡೇಟ್‌ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸದ್ಯ ದರ್ಶನ್ 'ಡೆವಿಲ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ದರ್ಶನ್‌ 58ನೇ ಸಿನಿಮಾ ಮುಂದಿನ ವರ್ಷ ಶುರುವಾಗಬಹುದು. ಹಾಗಾಗಿ ಈ ವರ್ಷ ಯಾವುದೇ ಅಪ್‌ಡೇಟ್ ಇಲ್ಲ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News