ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ

Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್‌ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್‌ ಆಗಿ ವಾರ ಕಳೆದರೂ, ಕಲೆಕ್ಷನ್‌ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.  

Written by - Zee Kannada News Desk | Last Updated : Jul 4, 2024, 02:19 PM IST
  • ಕಲ್ಕಿ 2898 AD ಚಲನಚಿತ್ರ ತನ್ನ ಬಾಕ್ಸ್‌ ಆಫಿಸ್‌ ಕಲೆಕ್ಷನ್‌ನ ಮೂಲಕ ಬಾಕ್ಸ್‌ ಆಫಿಸ್‌ನಲ್ಲಿ ಹವಾ ಕ್ರಿಯೇಟ್‌ ಮಾಡಿದೆ.
  • ಕನಸಿನ ಓಟ ಮುಂದುವರೆಯುತ್ತಿದೆ ಎಂದು ಚಿತ್ರತಂಡ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
  • ಚಿತ್ರ ರು.1000 ಕೋಟಿ ಕಲೆಕ್ಷನ್ ದಾಟುವುದು ಖಚಿತ ಎಂದು ಶೇರ್‌ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.
ಕಲ್ಕಿ ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಚಿಂದಿ..! ಏಳನೇ ದಿನಕ್ಕೆ, 700 ಕೋಟಿ ಬಾಚಿಕೊಂಡ ಪ್ರಭಾಸ್‌ ಸಿನಿಮಾ title=

Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್‌ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್‌ ಆಗಿ ವಾರ ಕಳೆದರೂ, ಕಲೆಕ್ಷನ್‌ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.

ಕಲ್ಕಿ 2898 AD ಚಲನಚಿತ್ರ ತನ್ನ ಬಾಕ್ಸ್‌ ಆಫಿಸ್‌ ಕಲೆಕ್ಷನ್‌ನ ಮೂಲಕ ಬಾಕ್ಸ್‌ ಆಫಿಸ್‌ನಲ್ಲಿ ಹವಾ ಕ್ರಿಯೇಟ್‌ ಮಾಡಿದೆ.  ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು. ಮೊದಲನೇ ದಿನದಿಂದಲೂ ಒಳ್ಳೆ ಕಲೆಕ್ಷನ್‌ ಮಾಡ್ತಾ ಇರುವ ಕಲ್ಕಿ ಸಿನಿಮಾ ವಾರಾಂತ್ಯದಲ್ಲಿ ಇನ್ನೂ ಹೆಚ್ಚು ಕಲೆಕ್ಷನ್‌ ಮಾಡುವ ನಿರೀಕ್ಷೆಯಿದೆ.

ಕಲ್ಕಿ 2898 ಎಡಿ ಚಲನಚಿತ್ರವು ಏಳು ದಿನಗಳಲ್ಲಿ, ವಿಶ್ವಾದ್ಯಂತ ರೂ.700 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಕನಸಿನ ಓಟ ಮುಂದುವರೆಯುತ್ತಿದೆ ಎಂದು ಚಿತ್ರತಂಡ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Kalki 2898 AD: ಆರನೇ ದಿನಕ್ಕೆ ಸಪ್ಪೆಯಾಯ್ತು ಕಲ್ಕಿ ಬಾಕ್ಸ್‌ ಆಫೀಸ್‌ ಕಲೆಕ್ಷನ್..!

ಕಲ್ಕಿ  2898 AD ಚಿತ್ರದಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ ಬೆಂಕಿಯ ಮಧ್ಯೆ ನಡೆಯುತ್ತಿರುವ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ , ಜೊತೆಗೆ 700 ಕೋಟಿ ರೂಪಾಯಿಗಳ ಘೋಷಣೆಯ ಪೋಸ್ಟರ್ ಅನ್ನು ಪೋಸ್ಟ್‌ ಮಾಡಿದೆ . ಇನ್ನೂ,  ಚಿತ್ರ ರು.1000 ಕೋಟಿ ಕಲೆಕ್ಷನ್ ದಾಟುವುದು ಖಚಿತ ಎಂದು ಶೇರ್‌ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.

ಅತೀ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ತನ್ನ ಬಜೆಟ್‌ಗಿಂತ ಹೆಚ್ಚು ಹಣವನ್ನು ಸಂಗ್ರಹ ಮಾಡಿದೆ. 600 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ನಾಲ್ಕು ವರ್ಷಗಳ ವನವಾಸದ ನಂತರ ರಿಲೀಸ್‌ ಆದ ಸಿನಿಮಾಗೆ ತನ್ನ ಕಾಯುವಿಕೆಗೆ ಫಲ ಸಿಕ್ಕಂತಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News