ʼಜಿಎಸ್‌ಟಿʼಯಲ್ಲಿ ನಿವೇದಿತಾ ಘೋಸ್ಟ್‌...! ಮೊದಲಿನಂತೆ ಟ್ರೋಲ್‌ಗಳಿಗೆ ತೆಲೆಕೊಡಲ್ಲವೆಂದ ʼಚಂದನʼದ ಗೊಂಬೆ

Nivedita Gowda Reacted to Trollers: ಡಬ್ಸ್ಮಾಶ್‌ನಿಂದ ಸೋಷಿಯಲ್‌ ಮೀಡಿಯಾ ಬಳಕೆದಾರರ ಹತ್ತಿರವಾದ ಸಾಂಸ್ಕೃತಿಕ ನಗರದ ಬಾರ್ಬಿ ಡಾಲ್‌ ನಿವೇದಿತಾ ಹಲವಾರು ರಿಯಾಲಿಟಿ ಶೋಗಳ ನಂತರ ಸದ್ಯ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸದ್ಯ ಟ್ರೋಲ್‌ ಹಾಗೂ ನೆಗೆಟೀವ್‌ ಕಾಮೆಂಟ್‌ಗಳಿಗೆ ನಟಿ ಪ್ರತಿಕ್ರಿಯಿಸಿದ್ದಾರೆ.   

Written by - Savita M B | Last Updated : Oct 16, 2023, 03:34 PM IST
  • ಡಬ್ಸ್ಮಾಶ್‌ ಹಾಹು ಟಿಕ್‌ಟಾಕ್‌ ಆಪ್‌ನ ವಿಡಿಯೋ ಮುಖಾಂತರ ಪರಿಚಯವಾದ ನಟಿ
  • ನಂತರ ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಸ್ಪರ್ಧಿಸಿ, ಫಿನಾಲೆಯಲ್ಲಿ ಟಾಪ್‌ 5 ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾಗಿದ್ದರು
  • ನಿವೇದಿತಾ ರಿಯಾಲಿಟಿ ಶೋ ಮೂಲಕ ಇನ್ನಷ್ಟು ಜನರಿಗೆ ಪರಿಚಯವಾದರು
 ʼಜಿಎಸ್‌ಟಿʼಯಲ್ಲಿ ನಿವೇದಿತಾ ಘೋಸ್ಟ್‌...! ಮೊದಲಿನಂತೆ ಟ್ರೋಲ್‌ಗಳಿಗೆ ತೆಲೆಕೊಡಲ್ಲವೆಂದ ʼಚಂದನʼದ ಗೊಂಬೆ  title=

GST Movie: ನಿವೇದಿತಾ ಗೌಡ ಮೊದಮೊದಲು ಎಲ್ಲರಿಗೂ ಪರಿಚಯವಾಗಿದ್ದೆ ಡಬ್ಸ್ಮಾಶ್‌ ಹಾಹು ಟಿಕ್‌ಟಾಕ್‌ ಆಪ್‌ನ ವಿಡಿಯೋ ಮುಖಾಂತರ. ಈಕೆ ಈ ವಿಡಿಯೋಗಳ ಆಡಿಯೋಗೆ ಲಿಪ್‌ ಸಿಂಕ್‌ ಮಾಡುವುದರಲ್ಲಿ ಹಾಗು ಚೆನ್ನಾಗಿ ಡ್ಯಾನ್ಸ್‌ ಹೆಚ್ಚು ಫಾಲೋವರ್ಸ್‌ ಪಡೆದವರು, ನಂತರ ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಚೆನ್ನಾಗಿ ಆಟವಾಡಿ, ಫಿನಾಲೆಯಲ್ಲಿ ಟಾಪ್‌ 5 ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಾಗಿದ್ದರು. ಈ ರೀತಿ ನಿವೇದಿತಾ ರಿಯಾಲಿಟಿ ಶೋ ಮೂಲಕ ಇನ್ನಷ್ಟು ಜನರಿಗೆ ಪರಿಚಯವಾದರು

ಬಿಗ್‌ ಬಾಸ್‌ ನಂತರ ತಮ್ಮ ಎಜುಕೇಷನ್‌ ಕಂಪ್ಲೀಟ್‌ ಆದ ಬಳಿಕೆ, ಏರ್ಪೋಟ್‌ನಲ್ಲಿ ಕೆಲಸ ಮಾಡಲು ಟ್ರೇನಿಂಗ್‌ ಪಡೆದು, ಕೆಲವು ದಿನಗಳ ಕಾಲ ಏರ್ಪೋಟ್‌ನಲ್ಲಿ ಕೆಲಸ ಸಹ ಮಾಡಿದ್ದಾರೆ. ಸದ್ಯಕ್ಕೆ ತಮ್ಮ ಡ್ರೀಮ್‌ ಜಾಬ್‌ನಿಂದ ದೂರವುಳಿದು ಮನೋರಂಜನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಮೊದಲು ಕಾಮಿಟಿ ಟಾಕೀಸ್‌ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲೂ ನಿವೇದಿತಾಗೆ ಸಿಕ್ಕಾ ಪಟ್ಟೆ ಟ್ರೋಲ್‌ಗೆ ಗುರಿಯಾದರು. 

ಇದನ್ನೂ ಓದಿ-Priya varrier: ಕಣ್ಮನ ಸೆಳೆಯುವ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದ ಕಣ್ಸನ್ನೆ ಸುಂದರಿ..ಪೋಟೋಸ್‌ ನೋಡಿ

2020ರಲ್ಲಿ, ಬಿಗ್‌ಬಾಸ್‌ ಮನೆಯಿಂದಲೇ ಪರಿಚಯವಾದ ಕನ್ನಡ ರಾಪರ್‌ ಚಂದನ್‌ ಶೆಟ್ಟಿ ಅವರನ್ನು ಮದುವೆಯಾದರು. ನಂತರ ರಾಜಾರಾಣಿ, ಗಿಚ್ಚಿ ಗಿಲಿಗಿಲಿ, ಫ್ಯಾಮಿಲಿ ಗ್ಯಾಂಗ್‌ಸ್ಟರ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ತಮ್ಮ ಪತಿ ಚಂದನ್‌ ಜೊತೆ ಕೆಲವು ಆಲ್ಬಮ್‌ ಸಾಂಗ್‌ನಲ್ಲಿಯೂ ಕಾಣಿಸಿಕೊಳುವುದರ ಜೊತೆಗೆ ಕಿರುಚಿತ್ರಗಳಲ್ಲಿಯೂ ನಟಿಸಿದ್ದರು. ಹೀಗೆ ನಿವೇದಿತಾ ಗೌಡ ಎಲ್ಲರನ್ನೂ ಮನೊರಂಜಿಸುತ್ತಿದ್ದಾರೆ. 

ಸದ್ಯ ನಿವೇದಿತಾ ಕಿರುತರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸೃಜನ್‌ ಲೊಕೇಶ್‌ ನಿರ್ದೇಶನ ʼGSTʼ ಸಿನಿಮಾದಲ್ಲಿ ನಿವೇದಿತಾ ನಟಿಸುತ್ತಿದ್ದಾರೆ. ಇದರ ಬಗ್ಗೆ ನಿವೇದಿತಾ " ನನಗೆ ಮನೋರಂಜನೆಯ ಮಾದ್ಯಮದ ಭಾಗವಾಗಿರಲು ನನಗೆ ಆಸಕ್ತಿ ಇತ್ತು. ನನಗೆ ಸೃಜನ್‌ ಸರ್‌ ಅವರ ಹೊಸ ಸಿನಿಮಾದಲ್ಲಿ ದೆವ್ವದ ಪಾತ್ರವನ್ನು ನೀಡಿದಾಗ, ನಾನು ಆ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡೆ" ಅಂತ ಮಾತನಾಡಿದ್ದು, ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್ ಇಬ್ಬರೂ ಅಲ್ಲ.. ಇವರೇ ದೇಶದ ಅತ್ಯಂತ ರಿಚ್ಚೆಸ್ಟ್‌ ಸಿಂಗರ್!‌

ನೆಗೆಟೀವ್‌ ಕಮೆಂಟ್‌ಗಳ ಬಗ್ಗೆ ಹಂಚಿಕೊಂಡ ನಿವೇದಿತಾ ಗೌಡ " ಹಲವರು ನನ್ನ ಕೆಲಸ ಕಾರ್ಯಗಳನ್ನು ನೋಡಿ ಹೊಗಳಿದ್ದಾರೆ. ಇನ್ನು ಕೆಲವರು ಇಲ್ಲ. ಮೊದಲು ನಾನು ಜನರು ಮಾಡುವ ಕಮೆಂಟ್‌ಗಳ ಬ್ಗೆ ತೆಲೆಕೆಡಿಸಿಕೊಳ್ಳುತ್ತಿದ್ದೆ. ಆದರೆ ನನಗೆ ಸದ್ಯ ಇದು ಅಭ್ಯಾಸವಾಗಿ ಬಿಟ್ಟಿದೆ. ನಾನು ಇದರ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ನಾನು ಮೊದಲನೆಯ ದಿನದ ಶೂಟಿಂಗ್‌ನಲ್ಲಿ ಹೆದರಿಕೊಂಡಿದ್ದೆ. ಸಿನಿಮಾರಂಗ ಟಿವಿ ಶೋಗಳಿಗಿಂತ ವಿಭಿನ್ನವಾಗಿದೆ. ಆದರಿಂದ ನಾನು ಕೆಲವು ಕಾಲ ಸಮಯ ತೆಗೆದುಕೊಂಡೆ". ಎಂದು ಹೇಳಿದರು. 

"ನನ್ನ ಗಂಡನಿಂದ ನಟನೆಯ ಬಗ್ಗೆ ಟಿಪ್ಸ್‌ ಸಹ ಪಡೆದುಕೊಳ್ಳುತ್ತಿದ್ದೇನೆ" ಅಂತ ನಿವೇದಿತಾ ಹೇಳಿಕೊಂಡಿದ್ದಾರೆ. ಇದರ ಬಗ್ಗೆ ಹಂಚಿಕೊಳ್ಳುತ್ತಾ ನಿವೇದಿತಾ, " ಚಂದನ್‌ ನನಗೆ ಸಂಭಾಷಣೆ ಹಾಗು ಸೂಚಿಸಿ ಹೇಳುವ ರೀತಿಗೆ ಸಹಾಯ ಮಾಡುತ್ತಿದ್ದಾರೆ. ನಟನೆ ಮುಂದುವರೆಸುತ್ತಿದಂತೆ  ಇಬ್ಬರು ಐಡಿಯಾಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಚಂದನ್‌ ಅವರ ನಟನೆಯ ವಿಡಿಯೋಗಳನ್ನು ತೋರಿಸಿ ನನ್ನ ಅನಿಸಿಕೆ ಕೇಳುತ್ತಾರೆ. ಹೀಗೆ ನಾವು ಇಬ್ಬರು ಕಲೆಯುತ್ತಾ ಇನ್ನಷ್ಟು ಇಂಪ್ರೂ ಮಾಡಿಕೊಳ್ಳುತ್ತೇವೆ", ಎಂದು ಹೇಳಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News