ಸಸ್ಪೆನ್ಸ್, ಥ್ರಿಲ್ಲರ್ ನೈಸ್ ರೋಡ್ ಟ್ರೈಲರ್ ಬಿಡುಗಡೆ

Nice Road Trailer Released: ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು  ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್  ಇಟ್ಟುಕೊಂಡು ಮಾಡಿದ ಚಿತ್ರ.  

Written by - Yashaswini V | Last Updated : Jul 11, 2024, 12:12 PM IST
  • ಕಳೆದ ಜನ್ಮದಲ್ಲಿ ಮಾಡಿದ ತಪ್ಪಗೆ ಈ ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ
  • ಈ ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ ಮೇಲೆ ಹೆಣೆಯಲಾಗಿರುವ ಕಥೆಯೇ 'ನೈಸ್ ರೋಡ್'
ಸಸ್ಪೆನ್ಸ್, ಥ್ರಿಲ್ಲರ್ ನೈಸ್ ರೋಡ್ ಟ್ರೈಲರ್ ಬಿಡುಗಡೆ title=

Nice Road Trailer: ಗೋಪಾಲ್ ಹಳೇಪಾಳ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ  ನೈಸ್ ರೋಡ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. 

ಕಳೆದ ಜನ್ಮದಲ್ಲಿ ಮಾಡಿದ ತಪ್ಪಗೆ ಈ  ಜನ್ಮದಲ್ಲಿ ಶಿಕ್ಷೆ ಕೊಡುವುದು ಯಾವ ನ್ಯಾಯ  ಎನ್ನುವ  ಅಂಶವನ್ನಿಟ್ಟುಕೊಂಡು ಕರ್ಮ ಮತ್ತು ಧರ್ಮದ ಮೇಲೆ 'ನೈಸ್ ರೋಡ್' (Nice Road)  ಚಿತ್ರದ  ಕಥೆ ಹೆಣೆಯಲಾಗಿದೆ.  ನಿರ್ದೇಶನದ ಜೊತೆಗೆ ಪುನರ್ ಗೀತಾ ಸಿನಿಮಾಸ್  ಬ್ಯಾನರ್ ಅಡಿ ಗೋಪಾಲ್ ಹಳೇಪಾಳ್ಯ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ 

ನೈಸ್ ರೋಡ್ ಚಿತ್ರದ ಟ್ರೇಲರ್ ಬಿಡುಗಡೆ (Nice Road Trailer) ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಗೋಪಾಲ್, ಈ ಹಿಂದೆ ನಾನು  ತಾಂಡವ ಎಂಬ  ಸಿನಿಮಾ ನಿರ್ದೇಶನ ಮಾಡಿದ್ದೆ. ನೈಸ್ ರೋಡ್ ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು  ಪಾಪ, ಪುಣ್ಯ, ಪುನರ್ಜನ್ಮದ ಕಾನ್ಸೆಪ್ಟ್  ಇಟ್ಟುಕೊಂಡು ಮಾಡಿದ ಚಿತ್ರ ಎಂದರು. 

ಇದನ್ನೂ ಓದಿ- ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ "ಉತ್ತರಕಾಂಡ"

ಕಥೆ ಬರೆಯುವಾಗಲೇ ಧರ್ಮ ಆಯ್ಕೆ: 
ಈ  ಕಥೆ ಬರೆಯುವಾಗಲೇ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರಕ್ಕೆ  ಧರ್ಮ ಅವರನ್ನು ಆಯ್ಕೆ  ಮಾಡಿಕೊಂಡಿದ್ದೆ,  ಮತ್ತೊಂದು ಮುಖ್ಯ ಪಾತ್ರದಲ್ಲಿ ಜೋತಿ ರೈ (Jyothi Rai) ಕಾಣಿಸಿಕೊಂಡಿದ್ದಾರೆ.‌ ಗೋವಿಂದೇಗೌಡ, ಮಂಜು ನಾಥ್ ರಂಗಾಯಣ, ಮಂಜು ಕ್ರಿಶ್, ರೇಣು ಶಿಕಾರಿ, ಪ್ರಭು, ಸಚ್ಚಿ ರವಿಕಿಶೋರ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. 25 ದಿನಗಳ ಕಾಲ ಬೆಂಗಳೂರು,  ಕುಣಿಗಲ್ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ ಎಂದರು. 

ನೈಸ್ ರೋಡ್ ಇದೊಂದು ಕಾಲ್ಪನಿಕ ಕಥೆಯಾಗಿದ್ದು ಈ ತಿಂಗಳ ಕೊನೆಯ ವಾರ ರಿಲೀಸ್ ಮಾಡೋ  ಪ್ಲ್ಯಾನ್ ಇದೆ, ನೈಸ್ ರೋಡ್ ಗೂ  ನಮ್ಮ ಸಿನಿಮಾಗೂ ಸಂಬಂಧವಿಲ್ಲ. ಹಳ್ಳಿಯ ಮುಂದೆ ಹೈವೇ ರಸ್ತೆಯಿರುತ್ತದೆ. ಆ ರಸ್ತೆ ಎಷ್ಟು ನೈಸಾಗಿದೆ ಅಂತ ಊರ ಜನ ಹೇಳ್ತಿರ್ತಾರೆ. ಅದನ್ನೇ ಚಿತ್ರದ ಟೈಟಲ್ ಆಗಿಟ್ಟಿದ್ದೇವೆ ಎಂದು ಹೇಳಿದರು.

ನಟ ಧರ್ಮ ಮಾತನಾಡಿ, ಈವರೆಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದೇನೆ.  ಇಲ್ಲೂ ಪೊಲೀಸ್ ಆಫೀಸರ್  ಪಾತ್ರ ಮಾಡಿದ್ದು, ಇದರಲ್ಲಿ ಕಥೆಯೇ ಹೀರೋ. ಕರ್ಮದ ಬಗ್ಗೆ ಕಥೆ ಹೇಳಲಾಗಿದ್ದು,  ಡಿಫರೆಂಟ್ ಆಗಿ ಬಂದಿದೆ. ಗೋಪಾಲ್ ನೀವೇ ಬೇಕು ಅಂತ ಬಂದಿದ್ದರು  ಎಂದರು. 

ಇದನ್ನೂ ಓದಿ- Actress Sudha Rani: ನಟಿ ಸುಧಾರಾಣಿಗೆ ನರಕ ತೋರಿಸಿದ್ದ ಮೊದಲ ಗಂಡ.. ಬದುಕಿ ಬಂದಿದ್ದು ಯಾರಿಂದ ಗೊತ್ತಾ? 

ಸಿನಿಮಾ ಬಗ್ಗೆ ಮಾತನಾಡಿದ   ರಾಜುಗೌಡ,ಈ ಕಾನ್ಸೆಪ್ಟ್ ಕೇಳಿದಾಗ ತುಂಬಾ ಇಷ್ಟ ಆಯ್ತು. ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸುತ್ತಲಿನ ಅನೇಕ ಪಾತ್ರಗಳು ಸಿಗುತ್ತವೆ, ಇದು ಬದುಕಿನ ಆಯಾಮ ಕಟ್ಟಿಕೊಡುವ ಚಿತ್ರ ಈ ಬಳಗದ ಜೊತೆ ನಾನು ನಿಂತದ್ದು ಖುಷಿಯಿದೆ ಎಂದು ಹೇಳಿದರು. 

ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡುತ್ತ,  ಪ್ರಾರಂಭದಲ್ಲಿ ಹಾಡುಗಳು ಇರಲಿಲ್ಲ. ಆರ್.ಆರ್. ತುಂಬಾ ಚಾಲೆಂಜಿಂಗ್ ಆಗಿತ್ತು. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇರುವ ಚಿತ್ರ. ಮನುಷ್ಯ ಜೀವನದಲ್ಲಿ ನಡೆವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎಂದು ತಿಳಿಸಿದರು. 

ಉಳಿದಂತೆ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ, ಕಲಾವಿದರಾದ ಮಂಜು ರಂಗಾಯಣ, ಗೋವಿಂದೇ ಗೌಡ, ರವಿಕಿಶೋರ್, ಸಚ್ಚಿ, ಸುರೇಖ, ಮಂಜು ಕ್ರಿಶ್, ಪ್ರಭು ರಾಜ್  ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News