ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ?

ಪ್ರತಿಭಾನ್ವಿತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮಾಲ್ಡೀವ್ಸ್ ರಜಾ ದಿನಗಳಲ್ಲಿರುವ ಎಲ್ಲ ಸಿನಿಮಾ ತಾರೆಯರ ವಿರುದ್ಧ ಹರಿಹಾಯ್ದಿದ್ದಾರೆ.

Last Updated : Apr 24, 2021, 11:53 PM IST
  • ಪ್ರತಿಭಾನ್ವಿತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮಾಲ್ಡೀವ್ಸ್ ರಜಾ ದಿನಗಳಲ್ಲಿರುವ ಎಲ್ಲ ಸಿನಿಮಾ ತಾರೆಯರ ವಿರುದ್ಧ ಹರಿಹಾಯ್ದಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ? title=
file photo

ನವದೆಹಲಿ: ಪ್ರತಿಭಾನ್ವಿತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮಾಲ್ಡೀವ್ಸ್ ರಜಾ ದಿನಗಳಲ್ಲಿರುವ ಎಲ್ಲ ಸಿನಿಮಾ ತಾರೆಯರ ವಿರುದ್ಧ ಹರಿಹಾಯ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರವಾಸದ ಪೋಟೋಗಳನ್ನು ಶೇರ್ ಮಾಡುತ್ತಾ ಮಸ್ತಿ ಮಾಡುವ ನಟ ನಟಿಯರ ವಿರುದ್ಧ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಆಕ್ರೋಶ ವ್ಯಕ್ತಪಡಿಸುತ್ತಾ ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.ದೇಶದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದಿದ್ದಾರೆ.

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ನವಾಜುದ್ದೀನ್ ಸಿದ್ದಿಕಿ, "ಈ ಮನರಂಜನಾ ಸೆಲೆಬ್ರಿಟಿಗಳು ರಜೆಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಈ ಸಮಯದಲ್ಲಿ ಜಗತ್ತು ಭೀಕರ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ...ಲೋಗೊನ್ ಕೆ ಪಾಸ್ ಖಾನಾ ನಹಿನ್ ಹೈ ಔರ್ ಆಪ್ ಪೈಸ್ ಫೆಂಕ್ ರಹೇ ಹೋ. ಕುಚ್ ತೋ ಶಾರ್ಮ್ ಕರೋ. " ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: IPL 2021: ಮೊದಲ ಪಂದ್ಯದಲ್ಲೇ ಸೋಲುಂಡ ಬಳಿಕ ಧೋನಿಗೆ ಎದುರಾಯಿತು ಮತ್ತೊಂದು ಕಂಟಕ

"ಆದರೆ ಅವರು (ಸೆಲೆಬ್ರಿಟಿಗಳು) ಇನ್ನೇನು ಮಾತನಾಡುತ್ತಾರೆ? ನಟನೆ?  ಲೋಗೊನ್ ನೆ ಮಾಲ್ಡೀವ್ಸ್ ಕೋ ತಮಾಸಹಾ ಬನ ರಾಖಾ ಹೈ. ಪ್ರವಾಸೋದ್ಯಮದೊಂದಿಗೆ ಅವರ ವ್ಯವಸ್ಥೆ ಏನು ಎಂದು ನನಗೆ ತಿಳಿದಿಲ್ಲ, ಆದರೆ ಮಾನವೀಯತೆಯ ಸಲುವಾಗಿ, ದಯವಿಟ್ಟು ಈ ರಜಾದಿನಗಳನ್ನು ನೀವೇ ಇಟ್ಟುಕೊಳ್ಳಿ. ಎಲ್ಲೆಡೆ ತೊಂದರೆಗಳಿವೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಅಂತಕರಣವಿರಲಿ " ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಟನಾದವನಿಗೆ ಯಾವುದೇ ಸ್ವಂತ ರಾಜಕೀಯ ಸಿದ್ಧಾಂತವಿಲ್ಲ-ನವಾಜುದ್ದೀನ್ ಸಿದ್ದಿಕಿ

ಮಾಲ್ಡೀವ್ಸ್ ಗೆ ರಜೆಯ ಮೇಲೆ ಹೋಗುತ್ತೀರಾ ಎಂದು ಕೇಳಿದಾಗ, ನವಾಜ್, "ಇಲ್ಲ, ನಾನು ನನ್ನ ಕುಟುಂಬದೊಂದಿಗೆ ನನ್ನ ಬುಧಾನಾದಲ್ಲಿದ್ದೇನೆ, ಅದೇ ನನ್ನ ಮಾಲ್ಡೀವ್ಸ್" ಎಂದು ಹೇಳಿದರು.

ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಜಾನ್ವಿ ಕಪೂರ್, ದಿಶಾ ಪಟಾನಿ, ಟೈಗರ್ ಶ್ರಾಫ್, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದ ಹಲವಾರು ಖ್ಯಾತನಾಮರು ಮಾಲ್ಡೀವ್ಸ್ಗೆ ರಜೆಗಾಗಿ ತೆರಳಿದವರಲ್ಲಿ ಪ್ರಮುಖರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News