Nawazuddin Haddi Look : "ಮಂಗಳಮುಖಿಯರದ್ದು ವಿಚಿತ್ರ ಲೋಕ.." ತಮ್ಮ ಅನುಭವ ಹಂಚಿಕೊಂಡ ನವಾಜುದ್ದೀನ್!

Nawazuddin Haddi Look : ವಿಭಿನ್ನ ಪಾತ್ರಗಳ ಮೂಲಕವೇ ಜನರ ಮನಸೆಳೆದಿರುವ ನಟ ನವಾಜುದ್ದೀನ್‌ ಸಿದ್ದೀಕಿ, ಇದೀಗ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ನವಾಜುದ್ದೀನ್‌ ಎತ್ತಿದ ಇದೀಗ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಸವಾಲೆನಿಸುವ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. 

Written by - Chetana Devarmani | Last Updated : Nov 19, 2022, 09:43 PM IST
  • "ಮಂಗಳಮುಖಿಯರದ್ದು ವಿಚಿತ್ರ ಲೋಕ.."
  • ತಮ್ಮ ಅನುಭವ ಹಂಚಿಕೊಂಡ ನವಾಜುದ್ದೀನ್!
  • ವಿಭಿನ್ನ ಪಾತ್ರಗಳ ಮೂಲಕವೇ ಮನಸೆಳೆದಿರುವ ನಟ
Nawazuddin Haddi Look : "ಮಂಗಳಮುಖಿಯರದ್ದು ವಿಚಿತ್ರ ಲೋಕ.." ತಮ್ಮ ಅನುಭವ ಹಂಚಿಕೊಂಡ ನವಾಜುದ್ದೀನ್!  title=
ನವಾಜುದ್ದೀನ್

Nawazuddin Haddi Look : ವಿಭಿನ್ನ ಪಾತ್ರಗಳ ಮೂಲಕವೇ ಜನರ ಮನಸೆಳೆದಿರುವ ನಟ ನವಾಜುದ್ದೀನ್‌ ಸಿದ್ದೀಕಿ, ಇದೀಗ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ನವಾಜುದ್ದೀನ್‌ ಎತ್ತಿದ ಇದೀಗ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಸವಾಲೆನಿಸುವ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಅವರ ಮುಂಬರುವ ಚಿತ್ರ ಹಡ್ಡಿಯಲ್ಲಿ ತುಂಬಾ ಡಿಫರಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಅವರು ಹಸಿರು ಸೀರೆಯನ್ನು ಧರಿಸಿದ್ದರೆ, ಇನ್ನೊಂದು ಪೋಸ್ಟರ್ ಅವರನ್ನು ಸೀಕ್ವಿನ್ಡ್ ಸಿಲ್ವರ್ ಗೌನ್‌ನಲ್ಲಿ ತೋರಿಸಲಾಗಿದೆ.  

ಇದನ್ನೂ ಓದಿ : What An Idea.! ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ

ಹಡ್ಡಿ ಸಿನಿಮಾದಲ್ಲಿ ಟ್ರಾನ್ಸ್‌ಜೆಂಡರ್‌ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ನಟಿಸುತ್ತಿದ್ದು, ಈಗಾಗಲೇ ಆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಬೂದು ಬಣ್ಣದ ಗೌನ್ ಧರಿಸಿ ನೀಳ ಕೂದಲು ಮತ್ತು ಮಿರ ಮಿರ ಮೇಕಪ್‌ನಲ್ಲಿ ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ. ಇದೀಗ ಸಿನಿಮಾದ ಮತ್ತೊಂದು ಲುಕ್‌ ವೈರಲ್‌ ಆಗುತ್ತಿದ್ದು, ಜನರ ಗಮನ ಸೆಳೆಯುತ್ತಿದೆ. 

 

 

ಈ ಬಗ್ಗೆ ಮಾತನಾಡಿರುವ ನವಾಜುದ್ದೀನ್‌ ಸಿದ್ದಿಕಿ, "ಮಂಗಳಮುಖಿಯರದ್ದು ವಿಚಿತ್ರ ಲೋಕ. ಈ ಸಿನಿಮಾ ಮಾಡುವಾಗ ನನಗೆ ಒಂದು ಹೊಸ ಪ್ರಪಂಚವೇ ಪರಿಚಯವಾಯಿತು. ಹಡ್ಡಿ ಸಿನಿಮಾ ಸಲುವಾಗಿ ಸಾಕಷ್ಟು ತೃತೀಯಲಿಂಗಿಗಳ ಜೊತೆ ಕೆಲಸ ಮಾಡುವ ಸಂದರ್ಭ ದೊರೆಯಿತು. ಜಗತ್ತನ್ನು ನೋಡುವ ಅವರ ವಿಧಾನ ಎಲ್ಲರಿಗಿಂತ ತುಂಬಾ ವಿಭಿನ್ನ. ಅವರ ಜೊತೆ ಕೆಲಸ ಮಾಡಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Shraddha Murder: ಶ್ರದ್ಧಾ ಹತ್ಯೆ ಪ್ರಕರಣದ ಕುರಿತು ಸಿನಿಮಾ ಮಾಡಲು ಸಜ್ಜಾದ್ರು ಈ ನಿರ್ದೇಶಕ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News