ಸಿಂಪಲ್ ಹುಡ್ಗ ನವೀನ್ ಸಜ್ಜುಗೆ ಸಿಕ್ತು ಬಿಗ್ ಬಾಸ್ ಫಿನಾಲೆ ಟಿಕೆಟ್..!

 6ನೇ ಸೀಸನ್ನಿನ ಬಿಗ್ ಬಾಸ್ ಶೋ ಈಗ ಅಂತಿಮ ಹಂತಕ್ಕೆ ಬಂದಿದೆ, ಮನರಂಜನೆ, ಹಾಡು, ಕುಣಿತ, ಮನೆಯೊಳಗಿನ ರಾಜಕೀಯ ಹೀಗೆ ನಾನಾ ರೀತಿಯ ವೈಶಿಷ್ಟ್ಯತೆಗಳೊಂದಿಗೆ ಬಿಗ್ ಬಾಸ್ ಪ್ರತಿಸಾರಿ  ಗಮನ ಸೆಳೆಯುತ್ತದೆ.ಇಂತಹ ಬಿಗ್ ಬಾಸ್ ಮನೆಯಲ್ಲಿ ಈಗ ನವೀನ್ ಸಜ್ಜು ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Last Updated : Jan 13, 2019, 05:53 PM IST
ಸಿಂಪಲ್ ಹುಡ್ಗ ನವೀನ್ ಸಜ್ಜುಗೆ ಸಿಕ್ತು ಬಿಗ್ ಬಾಸ್ ಫಿನಾಲೆ ಟಿಕೆಟ್..!  title=
Photo courtesy: Facebook

ಬೆಂಗಳೂರು: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಅತಿ ಮೆಚ್ಚುಗೆ ಪಾತ್ರವಾಗಿರುವ ಶೋ ಎಂದರೆ ಅದು ನಿಸ್ಸಂದೇಹವಾಗಿ ಬಿಗ್ ಬಾಸ್ ಎನ್ನಬಹುದು. 6ನೇ ಸೀಸನ್ನಿನ ಬಿಗ್ ಬಾಸ್ ಶೋ ಈಗ ಅಂತಿಮ ಹಂತಕ್ಕೆ ಬಂದಿದೆ, ಮನರಂಜನೆ, ಹಾಡು, ಕುಣಿತ, ಮನೆಯೊಳಗಿನ ರಾಜಕೀಯ ಹೀಗೆ ನಾನಾ ರೀತಿಯ ವೈಶಿಷ್ಟ್ಯತೆಗಳೊಂದಿಗೆ ಬಿಗ್ ಬಾಸ್ ಪ್ರತಿಸಾರಿ ಗಮನ ಸೆಳೆಯುತ್ತದೆ. ಇಂತಹ ಬಿಗ್ ಬಾಸ್ ಮನೆಯಲ್ಲಿ ಈಗ ನವೀನ್ ಸಜ್ಜು ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಆದರೆ,ಈ ಹಂತಕ್ಕೆ ಅವರು ಬೆಳೆದ ಬಂದದ್ದು ಅಷ್ಟು ಸುಲಭವೇನು ಆಗಿರಲಿಲ್ಲ ಎದೆಯೊಳಗಿನ ತಮ ತಮಟೆ ಎನ್ನುತ್ತಲೇ ಚಂದನವನಕ್ಕೆ ನವೀನ್ ಸಜ್ಜು ಕಾಲಿಟ್ಟಾಗ ಇನ್ನು ಆರ್ಕೆಸ್ಟ್ರಾದಲ್ಲಿ ಹಾಡು ಹಾಡುತ್ತಿದ್ದರು.ಮುಂದೆ ಅವರ ಕನಕ ಚಿತ್ರದಲ್ಲಿನ ಎಣ್ಣೆ ನಮ್ದು ಊಟ ನಿಮ್ಮದು ಎನ್ನುವ ಹಾಡು ಸಾಕಷ್ಟು ಜನಪ್ರಿಯತೆ ಪಡೆಯಿತು. ಈ ಎಲ್ಲ ಹಿನ್ನಲೆಯೊಂದಿಗೆ ಬಿಗ್ ಬಾಸ್ ಗೆ ಕಾಲಿಟ್ಟಿದ್ದ ನವೀನ್ ಸಜ್ಜು, ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ವಿಶಿಷ್ಟ ಧ್ವನಿಯಲ್ಲಿ ಪ್ರತಿದಿನ ಗಮನ ಸೆಳೆಯುತ್ತಿದ್ದರು.ಬಿಗ್ ಬಾಸ್ ಮನೆಯಲ್ಲಿನ ತಂತ್ರ ಕುತಂತ್ರಕ್ಕೆ ತಲೆ ಕೆಡಿಸಿಕೊಳ್ಳದೆ ಸಹಜವಾಗಿ ಕೊಟ್ಟಿರುವ ಟಾಸ್ಕ್ ಗಳನ್ನು ನವೀನ್ ಸಜ್ಜು ಮುಗಿಸುತ್ತಿದ್ದ ರೀತಿ ಎಲ್ಲರ ಗಮನ ಸೆಳೆದಿತ್ತು. ಇದರಿಂದಾಗಿ ಅವರು ಈಗ ನೇರವಾಗಿ ಬಿಗ್ ಬಾಸ್ ಫೈನಲ್ ಟಿಕೆಟ್ ಗಳಿಸಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ಪ್ರಾರಂಭವಾದ ದಿನದಿಂದಲೂ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಂದಿರುವ ನವೀನ್ ಸಜ್ಜು ವಿಧ್ಯೆಗೆ ವಿನಯವೇ ಭೂಷಣ ಎನ್ನುವ ಹಾಗೆ ತನ್ನಲ್ಲಿರುವ ಕಲೆಯನ್ನು ಅಷ್ಟೇ ವಿನಯದಿಂದಲೇ ವ್ಯಕ್ತಪಡಿಸುವ ಮೂಲಕ ಕನ್ನಡ ನಾಡಿನ ಜನರ ಪ್ರೀತಿ ಪಾತ್ರರಾಗಿದ್ದಾರೆ. ಈ ಕಾರಣದಿಂದಲೇ ಅವರಿಗೆ ಬಿಗ್ ಬಾಸ್ ಫಿನಾಲೆ ಟಿಕೆಟ್ ಕೂಡ ದೊರೆತಿದೆ. ಇನ್ನುಆರನೇ ಸೀಸನ್ ಗೆ ಕೆಲವೇ ದಿನಗಳು ಬಾಕಿ ಇವೆ, ಸ್ಪರ್ಧೆಯಂತೂ ಜೋರಾಗಿಯೇ ನಡೆದಿದೆ. ನವೀನ್ ಸಜ್ಜು ನೇರವಾಗಿ ಫಿನಾಲೆ ಟಿಕೆಟ್ ಗಳಿಸಿರುವ ಕಾರಣ ಉಳಿದಿರುವ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ, ಇನ್ನು ಬಿಗ್ ಬಾಸ್ ಗೆಲ್ಲುವುದಕ್ಕೆ ಒಂದೇ ಹೆಜ್ಜೆ ಬಾಕಿ ಅಷ್ಟೇ, ಸದ್ಯ ಈಗಿರುವ ರೀತಿಯಲ್ಲಿ ನವೀನ್ ಸಜ್ಜು ಮುಂದುವರೆದಿದ್ದೆ ಆದಲ್ಲಿ ಈ ಬಾರಿಯ ಬಿಗ್ ಬಾಸ್ ಪಟ್ಟ ಅವರಿಗೆ ಖಂಡಿತ ಕಷ್ಟವಾಗಲಾರದು. 

Trending News