Navaratri Special: ಕಾಂತಾರ ಥೀಮ್‌ನಲ್ಲಿ ರಾರಾಜಿಸಿದ ದುರ್ಗಾ ಮಾತೆ..! ವಿಡಿಯೋ ವೈರಲ್‌

Durga Mata in Kantara Theme: ಕಾಂತಾರ ಸಿನಿಮಾ ಪ್ರಭಾರ ಜೋರಾಗಿಯೇ ಆಗಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರು, ಇನ್ನು ಆ ಸಿನಿಮಾ ಹವಾ ಕಡಿಮೆಯಾಗಿಲ್ಲ. ಕಾಂತಾರದ ಚಿತ್ರದ ಪಂಜುರ್ಲಿ ದೈವದ ಪ್ರೇರಣೆಯಿಂದ ದೇವರ ಪೂಜೆಯು ನಡೆಯುತ್ತಿದೆ. ಸದ್ಯ ಇದರ ಪ್ರೇರಣೆಯಿಂದ ದುರ್ಗಾ ಪೂಜೆಯು ನಡೆಯುತ್ತಿದೆ.   

Written by - Savita M B | Last Updated : Oct 20, 2023, 06:20 PM IST
  • ಕಾಂತಾರ ಸಿನಿಮಾ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಗೆ ಬಹು ದೊಡ್ಡ ಹೆಸರು ತಂದುಕೊಟ್ಟಿದೆ
  • ಈ ಚಿತ್ರ ಪಂಜುರ್ಲಿ ದೈವದ ದಂತ ಕಥೆಯಾಗಿದೆ.
  • ಈ ಬಾರಿ ಕಾಂತಾರ ಥೀಮ್‌ನಲ್ಲಿ ದುರ್ಗಾ ಪೂಜೆ ಮಾಡಿದ್ದಾರೆ.
Navaratri Special: ಕಾಂತಾರ ಥೀಮ್‌ನಲ್ಲಿ ರಾರಾಜಿಸಿದ ದುರ್ಗಾ ಮಾತೆ..! ವಿಡಿಯೋ ವೈರಲ್‌  title=

Navaratri: ಕಾಂತಾರ ಸಿನಿಮಾ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಗೆ ಬಹು ದೊಡ್ಡ ಹೆಸರು ತಂದುಕೊಟ್ಟಿದೆ. ಈ ಚಿತ್ರ ಪಂಜುರ್ಲಿ ದೈವದ ದಂತ ಕಥೆಯಾಗಿದೆ. ಅಲ್ಲದೇ ಈ ಸಿನಿಮಾ ರಿಲೀಸ್‌ ಆದ ನಂತರ ಎಷ್ಟೋ ಜನ ಕಾಂತಾರ ಗೆಟಪ್‌ನಲ್ಲೂ ಸಹ ಕಾಣಿಸಿಕಂಡಿದ್ದಾರೆ. ಸದ್ಯ ಕಾಂತಾರ ಸಿನಿಮಾ ಒಳ್ಳೆಯ ಸಕ್ಸಸ್‌ ಕೊಟ್ಟಿದ್ದು, ಇದೀಗ ಕಾಂತಾರ ಚಿತ್ರದ ಎರಡನೇಯ ಭಾಗಕ್ಕೆ ತಯಾರಿಯ ಕೆಲಸಗಳು ನಡಿತಿವೆ. 

ಈ ವರ್ಷದ ಗಣಪತಿ ಹಬ್ಬದ ಸಮಯದಲ್ಲೂ ಸಹ ಗಣೇಶನ ಮೂರ್ತಿ ಪಂಜುರ್ಲಿ ದೈವದಂತೆ ಮಾಡಲಾಗಿತ್ತು. ಅದೇ ರೀತಿ ಈ ಸಿನಿಮಾದಿಂದ ಪ್ರೇರಿತರಾಗಿ ಪಶ್ಚಿಮ ಬಂಗಾಳ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಮಾಡಲಾಗಿದೆ. ಬೀದಿ ಬೀದಿಗಳಲ್ಲಿ ದೀಪ ಹಚ್ಚಿ ದುರ್ಗಾ ಪೂಜೆ ಮಾಡಲಾಗಿತ್ತು. ನವರಾತ್ರಿಯ ವೇಳೆ ಉತ್ತರ ಭಾರತದಲ್ಲಿ ದುರ್ಗಾ ದೇವಿ ಪೂಜೆ ಮಾಡುವುದು ಅಲ್ಲಿಯ ಸಂಪ್ರದಾಯವಾಗಿದೆ. ಆದರೆ ಈ ಬಾರಿ ಅಲ್ಲಿಯ ಜನರ ನವರಾತ್ರಿ ಪೂಜೆ ವಿಶೇಷವಾಗಿದೆ.

ಇದನ್ನೂ ಓದಿ-ಸಿನಿಪ್ರಿಯರಿಗೆ ಭರ್ಜರಿ ಆಫರ್‌ ಕೊಟ್ಟ ಪಿವಿಆರ್

ಹೌದು.. ಈ ವರ್ಷವು ಕೊಲ್ಕತ್ತಾದಲ್ಲಿ ವಿಶೇಷವಾಗಿದೆ. ಈ ಬಾರಿ ಕಾಂತಾರ ಥೀಮ್‌ನಲ್ಲಿ ದುರ್ಗಾ ಪೂಜೆ ಮಾಡಿದ್ದಾರೆ. ಗಣಪತಿ ಹಬ್ಬದ ಸಮಯದಲ್ಲಿ ಹೇಗೆ ಪಂಜುರ್ಲಿ ದೈವದ ರೀತಿ ಮೂರ್ತಿ ಹೇಗೆ ತಯಾರಿಸಲಾಯಿತಯ, ಅದೇ ರೀತಿ ದುರ್ಗಾ ಮೂರ್ತಿಯನ್ನು ಸಹ ಮಾಡಲಾಯಿತು. ಈ ಪಂಜುರ್ಲಿ ದೈವದ ಥೀಮ್‌ ರೀತಿಯಲ್ಲಿರು ದುರ್ಗಾ ಪೂಜೆ ಮಾಡಿದ್ದು, ಈ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 

ಅನೇಕರು ಕಾಂತಾರ ಚಿತ್ರದ ಪ್ರಭಾವವನ್ನು ಹೊಗಳಿದ್ದಾರೆ. ಕಾಂತಾರ ಸಿನಿಮಾ ಕರ್ನಾಟಕ ಮಾತ್ರವಲ್ಲದೆ, ಭಾರತ ಹಾಗು ವಿಶ್ವಾದ್ಯಂತ ಪ್ರಭಾವ ಬೀರಿದೆ. ಪಂಜುರಿ ದೈವದ ಮಹತ್ವ ವಿಶ್ವದೆಡೆಗೆ ಸಾರಿದೆ. ಈ ಸಿನಿಮಾದ ಪ್ರಭಾವ ವಿಶ್ವದ್ಯಾದಂತ ತಲುಪಿದ್ದು, ಕನ್ನಡಿಗರಿಗೆ ಖುಷಿಯ ವಿಷಯವಾಗಿದೆ.

ಇದನ್ನೂ ಓದಿ-Pooja Hegde: ಪಿಂಕ್ ಬಿಕಿನಿಯಲ್ಲಿ ಪೂಜಾ ಹೆಗ್ಡೆ ಫೋಟೋಸ್‌ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News