Pavitra Lokesh: ನರೇಶ್ ನನ್ನ ಸಂಗಾತಿ ಮಾತ್ರವಲ್ಲ.. ಪವಿತ್ರಾ ಲೋಕೇಶ್ ಕುತೂಹಲಕಾರಿ ಪ್ರತಿಕ್ರಿಯೆ!

Pavitra Lokesh Comments on Naresh: ಪವಿತ್ರಿ ಲೋಕೇಶ್ ಮತ್ತು ನರೇಶ್ ನಡುವಿನ ಪ್ರೇಮ ಪ್ರಕರಣ ಗಲಾಟೆ ಸೃಷ್ಟಿಸಿದ್ದನ್ನು ಇನ್ನೂ ಯಾರೂ ಮರೆತಿಲ್ಲ. ಇತ್ತೀಚೆಗಷ್ಟೇ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿರುವ ಪವಿತ್ರಾ ಲೋಕೇಶ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.  

Written by - Chetana Devarmani | Last Updated : May 22, 2023, 05:21 PM IST
  • ಪವಿತ್ರಿ ಲೋಕೇಶ್ ಮತ್ತು ನರೇಶ್
  • ನರೇಶ್ ನನ್ನ ಸಂಗಾತಿ ಮಾತ್ರವಲ್ಲ..
  • ಪವಿತ್ರಾ ಲೋಕೇಶ್ ಕುತೂಹಲಕಾರಿ ಪ್ರತಿಕ್ರಿಯೆ!
Pavitra Lokesh: ನರೇಶ್ ನನ್ನ ಸಂಗಾತಿ ಮಾತ್ರವಲ್ಲ.. ಪವಿತ್ರಾ ಲೋಕೇಶ್ ಕುತೂಹಲಕಾರಿ ಪ್ರತಿಕ್ರಿಯೆ!  title=

Pavitra Lokesh Comments on Naresh: ಇತ್ತೀಚೆಗಿನ ದಿನಗಳಲ್ಲಿ ಪವಿತ್ರಿ ಲೋಕೇಶ್ ಮತ್ತು ನರೇಶ್ ನಡುವಿನ ಲವ್ ಅಫೇರ್ ನಷ್ಟು ಯಾವುದೇ ಅಫೇರ್ ವೈರಲ್ ಆಗಿಲ್ಲ ಎಂದೇ ಹೇಳಬಹುದು. ಪವಿತ್ರಾ ಲೋಕೇಶ್ ಅವರಿಗೆ ಮೊದಲೇ ಮದುವೆಯಾಗಿತ್ತು. ಆದರೆ ಭಿನ್ನಾಭಿಪ್ರಾಯದಿಂದ ಪತಿ ಸುಚೇಂದ್ರ ಪ್ರಸಾದ್ ಅವರಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ನರೇಶ್ ಕೂಡ ಈ ಹಿಂದೆ ಮೂರು ಮದುವೆಯಾಗಿದ್ದರು. ಅವರು ತನ್ನ ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಆದರೆ ತನ್ನ ಮೂರನೇ ಹೆಂಡತಿಗೆ ವಿಚ್ಛೇದನ ನೀಡಲಿಲ್ಲ. ವಿಚ್ಛೇದನ ನೀಡದಿದ್ದರೂ ಆಕೆಯಿಂದ ದೂರ ಉಳಿದಿದ್ದಾರೆ. ಆದರೆ ಪವಿತ್ರ ಲೋಕೇಶ್ ಮತ್ತು ನರೇಶ್ ನಡುವೆ ಪ್ರೀತಿ ಆರಂಭವಾಗಿದೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ದೊಡ್ಡ ಗಲಾಟೆ ಸೃಷ್ಟಿಸಿದ್ದ ವಿಚಾರ ಎಲ್ಲರಿಗೂ ತಿಳಿದಿದೆ.

ಇದನ್ನೂ ಓದಿ: 'One Breakfast...' ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಪ್ರೀತಿ ಶುರುವಾಗಿದ್ದೇ ಇಲ್ಲಿಂದ.. ಕೊನೆಗೂ ಬಾಯಿಬಿಟ್ಟ ನಟಿ!

ನರೇಶ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಮದುವೆ ಎಂಬ ಸಿನಿಮಾ ಕೂಡ ಮಾಡುತ್ತಿದ್ದಾರೆ. ಎಂಎಂಎಸ್ ರಾಜು ನಿರ್ದೇಶನದ ಈ ಚಿತ್ರವನ್ನು ನರೇಶ್ ಅವರೇ ನಿರ್ಮಿಸಿದ್ದಾರೆ. ಇದೀಗ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈ ಜೋಡಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪವಿತ್ರಾ ಲೋಕೇಶ್ ಇದೇ ವಿಷಯದ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದರು.

ನರೇಶ್ ತನ್ನ ಸಂಗಾತಿ ಮಾತ್ರವಲ್ಲದೆ ತನ್ನ ಸಪೋರ್ಟ್‌ ಸಿಸ್ಟಮ್‌ ಕೂಡ ಹೌದು ಎಂದು ಅವರು ಹೇಳಿದರು. ವಾಸ್ತವವಾಗಿ, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಿಲ್ಲ, ಆದರೆ ಅವರು ರಹಸ್ಯವಾಗಿ ಮದುವೆಯಾಗಿದ್ದಾರಾ ಎಂಬ ಅನುಮಾನ ಬರುವಂತೆ ಮಾತನಾಡಿದರು. ತಾವಿಬ್ಬರೂ ಬಹಳ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು, ಎಂತಹ ಪರಿಸ್ಥಿತಿ ಬಂದರೂ ಸದಾ ಒಬ್ಬರ ಪರ ಇನ್ನೊಬ್ಬರು ನಿಲ್ಲುತ್ತೇವೆ ಎಂದರು. ಈ ಸಂದರ್ಭದಲ್ಲಿ ಪವಿತ್ರಿ ಲೋಕೇಶ್ ಅವರು ತಮ್ಮ ಸಂಬಂಧದ ಬಗ್ಗೆ ನಡೆಯುತ್ತಿರುವ ಟ್ರೋಲಿಂಗ್ ನನಗೆ ತುಂಬಾ ನೋವನ್ನುಂಟು ಮಾಡುತ್ತಿದೆ ಎಂದು ಸಹ ಹೇಳಿದರು. 

ಇದನ್ನೂ ಓದಿ:  ವರುಣ್ ಧವನ್‌ ಜೊತೆ ಸಮಂತಾ ರೋಮ್ಯಾನ್ಸ್‌! ಹಾಟ್‌ ಬೆಡ್‌ ರೂಮ್‌ ದೃಶ್ಯ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News