ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ "ನಾಗಪಂಚಮಿ"..!

Nagapanchami Serial : ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಖಾಸಗಿ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ "ನಾಗಪಂಚಮಿ". 

Written by - Savita M B | Last Updated : Jul 28, 2023, 02:35 PM IST
  • ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ 'ಪಂಚಮಿ' ಜನಿಸಿರುತ್ತಾಳೆ.
  • ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ.
  • ಮೋಕ್ಷನ ಕುಟುಂಬವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದೇ 'ನಾಗಪಂಚಮಿ' ಧಾರಾವಾಹಿಯ ಕಥಾಹಂದರ.
ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ "ನಾಗಪಂಚಮಿ"..!  title=

Nagapanchami : ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ 'ಪಂಚಮಿ' ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಪಂಚಮಿಯನ್ನು ಅನಿಷ್ಟವೆಂದು ದೊಷಿಸುತ್ತಿದ್ದರೆ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ. 

ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ. ಇನ್ನು ಕಥಾನಾಯಕ ಮೋಕ್ಷ, ಈತನ ಕುಟುಂಬ ವಂಶ ಪಾರಂಪರೆಯಿಂದ ಅಲ್ಪಾಯುಷ್ಯರಾಗಿ ಮುಂದುವರಿಯುವಂತೆ ಶಾಪಗ್ರಸ್ತವಾಗಿರುತ್ತದೆ.

ನಾಗದೇವತೆಯ ಆರಾಧನೆಯನ್ನು ಮಾಡಿಕೊಂಡು ಬಂದಿರುವ ಪಂಚಮಿ, ಮೋಕ್ಷನ ಕುಟುಂಬವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದೇ 'ನಾಗಪಂಚಮಿ' ಧಾರಾವಾಹಿಯ ಕಥಾಹಂದರ.

ಇದನ್ನೂ ಓದಿ-Chaya Singh:ಅಮೃತಧಾರೆ ಸೀರಿಯಲ್ ಭೂಮಿಕಾಳ ರಿಯಲ್ ವಯಸ್ಸೆಷ್ಟು ಗೊತ್ತಾ?

'ನಾಗಪಂಚಮಿ' ಧಾರಾವಾಹಿಯು ಅದ್ಧೂರಿ ತಾರಾಬಳಗವನ್ನು ಹೊಂದಿದ್ದು. ಪೃಥ್ವಿ ಶೆಟ್ಟಿ, ದರ್ಶಿನಿ ಗೌಡ, ಚೈತ್ರ ಹಳ್ಳಿಕೆರೆ, ಸುನಿಲ್ ಪುರಾಣಿಕ್, ಪ್ರಿಯಾಂಕಾ ಶಿವಣ್ಣ, ಮೇಘನಾ ಖುಷಿ, ಪ್ರೀತಿ ಶ್ರೀನಿವಾಸ್ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಮಧ್ಯಾಹ್ನದ ಮನರಂಜನೆಯಲ್ಲಿ ಶುರುವಾಗ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ "ನಾಗಪಂಚಮಿ" ಇದೇ ಜುಲೈ 31 ರಿಂದ ಸೋಮವಾರದಿಂದ - ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ  ಸ್ಟಾರ್ ಸುವರ್ಣ ವಾಹಿನಿಯಲ್ಲಿ.

ವೀಕ್ಷಕರ ಗಮನಕ್ಕೆ,
"ಬದಲಾದ ಸಮಯದಲ್ಲಿ" ಬರ್ತಿದೆ ಇಡೀ ದೇಶ ಗೆದ್ದ ಗೃಹಿಣಿಯ ಕಥೆ "ಅನುಪಮ" ಇದೇ ಸೋಮವಾರದಿಂದ ಬೆಳಗ್ಗೆ 11.30 ಕ್ಕೆ ಹಾಗು ರಾತ್ರಿ 10.30 ಕ್ಕೆ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ-ಕಿಡಿಗೇಡಿಗಳಿಂದ ಪ್ರಭಾಸ್ ಫೇಸ್‌ಬುಕ್ ಹ್ಯಾಕ್...ತಕ್ಷಣವೇ ಎಚ್ಚೆತ್ತುಕೊಂಡ ಡಾರ್ಲಿಂಗ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News