ಪ್ರಧಾನಿ ಆಗುವುದು ನನ್ನ ಗುರಿ: ಹುಚ್ಚ ವೆಂಕಟ್

ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿಯಲ್ಲಿರುವ ನಟ ಹುಚ್ಚ ವೆಂಕಟ್ ಇದೀಗ ದೇಶದ ಪ್ರಧಾನಿ ಆಗುವುದು ತಮ್ಮ ಗುರಿ ಎಂದು ಹೇಳಿದ್ದಾರೆ. 

Last Updated : Apr 11, 2018, 04:40 PM IST
ಪ್ರಧಾನಿ ಆಗುವುದು ನನ್ನ ಗುರಿ: ಹುಚ್ಚ ವೆಂಕಟ್  title=

ಮಂಗಳೂರು : ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿಯಲ್ಲಿರುವ ನಟ ಹುಚ್ಚ ವೆಂಕಟ್ ಇದೀಗ 
ದೇಶದ ಪ್ರಧಾನಿ ಆಗುವುದು ತಮ್ಮ ಗುರಿ ಎಂದು ಹೇಳಿದ್ದಾರೆ. 

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಹುಚ್ಚ ವೆಂಕಟ್, ಈ ಬಾರಿ ವಿಧಾನಸಭೆ ಚುನಾವಣೆಗೆ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇತರ ರಾಜಕೀಯ ಪಕ್ಷಗಳಂತೆ ಮತದಾರರಿಗೆ ಸೀರೆ, ಹಣ, ಸಾರಾಯಿ ಮೊದಲಾದ ಆಮಿಷಗಳನ್ನು ಒಡ್ಡದೆ, ಮನೆ ಮನೆಗೆ ಪ್ರಚಾರಕ್ಕೆ ಹೋಗದೆ, ಜನರಿಗೆ ಕೈ ಮುಗಿದು ಮತ ಕೇಳದೆ, ಆ ಕ್ಷೇತ್ರಕ್ಕೆ ಏನು ಮಾಡಬೇಕು ಎಂದು ತಿಳಿದುಕೊಂಡು ಆ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸುತ್ತೇನೆ ಎಂದು ಹೇಳಿದರೂ. ಈ ಮೂಲಕ ತಮ್ಮ ರಾಜಕೀಯ ಪ್ರವೇಶವನ್ನು ವೆಂಕಟ್ ಘೋಷಿಸಿದರು. 

ಮುಂದುವರೆದು, ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ, ಖಂಡಿತಾ ತಾವು ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಲೋಕಸಭಾ ಚುನಾವಣೆಗೆ ನಿಂತು ಪ್ರಧಾನಮಂತ್ರಿ ಆಗುವುದೇ ನನ್ನ ಮುಖ್ಯ ಗುರಿ. "ಈ ಕ್ಷೇತ್ರದಲ್ಲಿಯೇ ನನ್ನ ತಂದೆ, ಅಜ್ಜ ಪಿಡಬ್ಲ್ಯೂಡಿ ಕಂಟ್ರಾಕ್ಟ್‌ರ್ ಆಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನನ್ನ ಹುಟ್ಟೂರು ಕೂಡ ಇದೆ ಆಗಿದೆ. ಈ ಕ್ಷೇತ್ರಕ್ಕೆ ಗೆದ್ದ ಬಳಿಕ ಏನಾದರೂ ಮಾಡಬೇಕು ಅಂದುಕೊಂಡಿದ್ದೇನೆ. ನನ್ನ ಗುರಿ ಪ್ರಧಾನ ಮಂತ್ರಿ ಆಗೋದು. ಈಗಿನಿಂದಲೇ ಪ್ರಯತ್ನ ಪಟ್ಟರೆ ಒಂದು ದಿನ ಖಂಡಿತ ಪ್ರಧಾನಿ ಆಗುತ್ತೇನೆ' ಎನ್ನುವ ಮೂಲಕ ಹುಚ್ಚ ವೆಂಕಟ್ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಇಂಗಿತವನ್ನು ಹುಚ್ಚ ವೆಂಕಟ್ ವ್ಯಕ್ತಪಡಿಸಿದರು. 

ಐದು ದಿನಗಳ ಹಿಂದೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಯುಟ್ಯೂಬ್'ನಲ್ಲಿ ಒಂದು ವೀಡಿಯೋ ಅಪ್ಲೋಡ್ ಮಾಡಿದ್ದ ಹುಚ್ಚ ವೆಂಕಟ್, ಮುನಿರತ್ನಂ ಅವರು ಮತಕ್ಕಾಗಿ ಹಣ ಹಂಚುತ್ತಾರೆ ಎಂದು ಆರೋಪಿಸಿದ್ದರು. ತಾವು ಕನ್ನಡಿಗರ ಪರ ಕೆಲಸ ಮಾಡುವುದಾಗಿಯೂ, ಯಾವುದೇ ಕುಕ್ಕರ್, ಸೀರೆ, ಹಣ ಹಂಚಲ್ಲ, ಹುಡುಗರನ್ನು ಕರೆದುಕೊಂಡು ಬಂದು ವಿಷಲ್ ಹೊಡೆಸಲ್ಲ, ಡ್ಯಾನ್ ಮಾಡಿಸಲ್ಲ. ನನ್ನನು ಚುನಾವಣೆಯಲ್ಲಿ ಗೆಲ್ಲಿಸಿ. ನೀವು ಮತ ಹಾಕದೇ ಬೇರೆಯವರನ್ನು ಗೆಲ್ಲಿಸಿದರೆ ನೀವು ಕುಕ್ಕರ್, ಸೀರೆ ಈಸ್ಕೊಂಡಿದ್ದೀರಿ ಎಂದರ್ಥ" ಎಂದು ಹೇಳಿದ್ದರು. 

"ನಾನು ಪ್ರಾಮಾಣಿಕವಾಗಿ ಸಮಾಜದ ಜನತೆಗಾಗಿ ದುಡಿಯುತ್ತೇನೆ. ಹಾಗಾಗಿ ಎಲ್ಲರೂ ನಂಗೆ ಮತ ಹಾಕಿ" ಎಂದು ವೆಂಕಟ್ ಹೇಳಿದ್ದಾರೆ.

Trending News