ಮಹೇಶ್ ಬಾಬುಗೆ ಅತ್ಯುತ್ತಮ ನಟನೆಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ !

ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ಭಾರತ್ ಆನೆ ನೇನು ಚಿತ್ರದ 'ಅತ್ಯುತ್ತಮ ನಟನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (ದಕ್ಷಿಣ) ಗೆದ್ದಿದ್ದಾರೆ.

Last Updated : Sep 23, 2019, 08:20 PM IST
ಮಹೇಶ್ ಬಾಬುಗೆ ಅತ್ಯುತ್ತಮ ನಟನೆಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ! title=
file photo

ನವದೆಹಲಿ: ಸೂಪರ್ ಸ್ಟಾರ್ ಮಹೇಶ್ ಬಾಬು ಇತ್ತೀಚೆಗೆ ಭಾರತ್ ಆನೆ ನೇನು ಚಿತ್ರದ 'ಅತ್ಯುತ್ತಮ ನಟನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (ದಕ್ಷಿಣ) ಗೆದ್ದಿದ್ದಾರೆ.

ಇತ್ತೀಚಿಗೆ ಹೈದರಾಬಾದ್ ದಲ್ಲಿ ದಕ್ಷಿಣದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು. ಮಹೇಶ್ ಬಾಬು ಅವರ ಬದಲಿಗೆ ಅವರ ಪತ್ನಿ ನಮ್ರತಾ ಶಿರೋಡ್ಕರ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಮಹೇಶ್ ಬಾಬು ಅವರು ಭಾರತ್ ಆನೆ ನೇನು ಚಿತ್ರದಲ್ಲಿನ ಅಭಿನಯಕ್ಕೆ ಪ್ರೇಕ್ಷಕರ ಮೆಚ್ಚುಗೆ ಪಡೆದದ್ದಲ್ಲದೆ ಚಿತ್ರ ವಿಮರ್ಶಕರ ಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೂಡ ಸಾಕಷ್ಟು ಸದ್ದು ಮಾಡಿದೆ.

ಮಹೇಶ್ ಬಾಬು ಅವರು ತೆಲುಗು ಚಿತ್ರರಂಗದಲ್ಲಿ ಬೇಡಿಕೆಯಿರುವ ನಟರಲ್ಲಿ ಒಬ್ಬರು ಮತ್ತು ಅವರ ಜನಪ್ರಿಯತೆಯು ಕೇವಲ ಪ್ಯಾನ್ ಇಂಡಿಯಾಗೆ ಮಾತ್ರ ಸೀಮಿತವಾಗಿಲ್ಲ  ಪ್ರಪಂಚದಾದ್ಯಂತ ಅವರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಮಹೇಶ್ ಬಾಬು ಅವರ 26 ನೇ ಚಿತ್ರ ಸರಿಲೆರು ನೀಕೆವ್ರು  2020ರಲ್ಲಿ ಚಿತ್ರಮಂದಿರಕ್ಕೆ ಬರಲಿದ್ದು, ಅಭಿಮಾನಿಗಳು ಈ ಅದ್ದೂರಿ ಸಿನಿಮಾಗೆ ಕಾತುರದಿಂದ ಕಾಯುತ್ತಿದ್ದಾರೆ. 

Trending News