LEO OTT: ಬಿಡುಗಡೆಯಾದ ಒಂದು ತಿಂಗಳೊಳಗೆ ಡಿಜಿಟಲ್‌ ವೇದಿಕೆ ಪ್ರವೇಶಿಸಿದ ವಿಜಯ್‌ ಸಿನಿಮಾ!

Leo OTT Release Date: ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅಭಿನಯದ ಇತ್ತೀಚಿನ ಚಿತ್ರ ಲಿಯೋ ಬಿಡುಗಡೆಯಾಗಿ ಭರ್ಜರಿ ಸೌಂಡ್‌ ಮಾಡುತ್ತಿದೆ. ಈ ನಡುವೆ ಸಿನಿಮಾ OTT ವೇದಿಕೆಗೆ ಪ್ರವೇಶಿಸಿದೆ..  

Written by - Savita M B | Last Updated : Nov 5, 2023, 08:46 PM IST
  • ಲಿಯೋ ಚಿತ್ರ ಭಾಕ್ಸಾಪೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ
  • ಬಿಡುಗಡೆಯಾಗಿ ಒಂದು ತಿಂಗಳಲ್ಲಿಯೇ ಡಿಜಿಟಲ್‌ ವೇದಿಕೆ ಪ್ರವೇಶಿಸಿದೆ
  • ಇದರ ಕುರಿತ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ..
LEO OTT: ಬಿಡುಗಡೆಯಾದ ಒಂದು ತಿಂಗಳೊಳಗೆ ಡಿಜಿಟಲ್‌ ವೇದಿಕೆ ಪ್ರವೇಶಿಸಿದ ವಿಜಯ್‌ ಸಿನಿಮಾ! title=

Leo OTT: ಭಾರೀ ನಿರೀಕ್ಷೆಗಳ ನಡುವೆ ಲಿಯೋ ಚಿತ್ರವು ದಸರಾ ಉಡುಗೊರೆಯಾಗಿ ಅಕ್ಟೋಬರ್ 19 ರಂದು ಗ್ರ್ಯಾಂಡ್ ರಿಲೀಸ್ ಆಗಿತ್ತು. ಭಾಕ್ಸಾಪೀಸ್‌ನಲ್ಲಿ ಸಖತ್‌ ಗಳಿಕೆ ಮಾಡುತ್ತಿರುವ ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಲ್ಲಿಯೇ ಡಿಜಿಟಲ್‌ ವೇದಿಕೆ ಪ್ರವೇಶಿಸಿದೆ..

ಇದೀಗ ಈ ಚಿತ್ರದ OTT ಸ್ಟ್ರೀಮಿಂಗ್ ದಿನಾಂಕವನ್ನು ಅಂತಿಮಗೊಳಿಸಲಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗುತ್ತಿದೆ.. 

ಇದನ್ನೂ ಓದಿ-Parineethi Chopra: ಮದುವೆಯ ಬಳಿಕ ಮೊದಲ ಕರ್ವ ಚೌತ್‌ ಆಚರಿಸಿದ ಬಾಲಿವುಡ್‌ ನಟಿ

ಲಿಯೋ ಚಿತ್ರವು ನವೆಂಬರ್ 16 ರಂದು OTT ನಲ್ಲಿ ಸ್ಟ್ರೀಮ್ ಆಗಲಿದೆಯಂತೆ. ಈ ಸಿನಿಮಾದ OTT ಹಕ್ಕುಗಳನ್ನು ಪ್ರಮುಖ OTT ಕಂಪನಿ Netflix ಸ್ವಾಧೀನಪಡಿಸಿಕೊಂಡಿದೆ. ಇದರ ಕುರಿತ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.. 

ಒಟಿಟಿಯಲ್ಲಿ ಈ ಸಿನಿಮಾ ಸ್ವಲ್ಪ ಹೆಚ್ಚು ಅವಧಿ ಇರಲಿದೆಯಂತೆ. ಈ ಬಗ್ಗೆ ಈಗಾಗಲೇ ಚಿತ್ರದ ನಿರ್ದೇಶಕ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಆವೃತ್ತಿಯನ್ನು ಹೊರತುಪಡಿಸಿ, ಹಲವು ಬದಲಾವಣೆಗಳನ್ನು ಮಾಡಲಾಗಿದೆಯಂತೆ. ಅದರ ಭಾಗವಾಗಿ ಒಟಿಟಿಯಲ್ಲಿ ಹೊಸ ಆವೃತ್ತಿ ಬರಲಿದೆಯಂತೆ. ಥಿಯೇಟರ್‌ಗಳಲ್ಲಿ 2 ಗಂಟೆ 45 ನಿಮಿಷಗಳ ಅವಧಿಯ ಚಿತ್ರವು ಕೆಲವು ಹೊಸ ದೃಶ್ಯಗಳೊಂದಿಗೆ ಸುಮಾರು 3 ಗಂಟೆ 6 ನಿಮಿಷಗಳ ಕಾಲ ಇರಲಿದೆಯಂತೆ.

ಇದನ್ನೂ ಓದಿ-Much Awaited South Movies: ಸೌತ್ ಅಬ್ಬರಕ್ಕೆ ಬಾಲಿವುಡ್ ಬಾಕ್ಸ್ ಆಫೀಸ್ ಮತ್ತೆ ಅಲ್ಲೋಲಕಲ್ಲೋಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News