ನವದೆಹಲಿ: ಲಾರಾ ದತ್ತಾ (Lara Dutta) ಮಿಸ್ ಯೂನಿವರ್ಸ್ 2021 ಹರ್ನಾಜ್ ಸಂಧು ಅವರನ್ನು (Harnaaz Sandhu) ಅಭಿನಂದಿಸಿದ್ದಾರೆ. ಭಾನುವಾರ ಇಸ್ರೇಲ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 (Miss Universe 2021) ಸೌಂದರ್ಯ ಸ್ಪರ್ಧೆಯ ವಿಜೇತರಾಗಿ ಭಾರತದ ಹರ್ನಾಜ್ ಸಂಧು ಹೊರಹೊಮ್ಮಿದ್ದಾರೆ.
ಸೌಂದರ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಭುವನ ಸುಂದರಿ ಸ್ಪರ್ಧೆಯಲ್ಲಿ 80 ದೇಶಗಳ ಸುಂದರಿಯರನ್ನು ಹಿಂದಿಕ್ಕಿ ಹೊರ್ನಾಜ್ ಸಂಧು ಕಿರೀಟವನ್ನು ಗೆದ್ದರು. ಆ ಮೂಲಕ ಭುವನ ಸುಂದರಿ ಕಿರೀಟಕ್ಕಾಗಿ 21 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿತು.
ಸುಶ್ಮಿತಾ ಸೇನ್ 1994 ರಲ್ಲಿ ಭುವನ ಸುಂದರಿ ಕಿರೀಟವನ್ನು ಪಡೆದರು ಮತ್ತು 2000 ರಲ್ಲಿ ಲಾರಾ ದತ್ತಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 2021 ರ ಭುವನ ಸುಂದರಿ ಆಗಿರುವ ಹರ್ನಾಜ್ ಸಂಧುಗೆ ಅಭಿನಂದನೆಯಾ ಮಹಾಪೂರವೇ ಹರಿದು ಬರುತ್ತಿದೆ.
ಬಾಲಿವುಡ್ ನಟಿ ಲಾರಾ ದತ್ತಾ ಮಿಸ್ ಯೂನಿವರ್ಸ್ 2021 ಹರ್ನಾಜ್ ಸಂಧು ಅವರನ್ನು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಅಭಿನಂದಿಸಿದ್ದಾರೆ (Lara Dutta congratulates Harnaaz Sandhu). "ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಹರ್ನಾಜ್ ಕೌರ್ ಸಂಧುಗೆ ಅಭಿನಂದನೆಗಳು. ನಮ್ಮ ಕ್ಲಬ್‌ಗೆ ಸುಸ್ವಾಗತ. ಈ ಸಮಯಕ್ಕಾಗಿ ನಾವು 21 ವರ್ಷಗಳಿಂದ ಕಾಯುತ್ತಿದ್ದೇವೆ. ನೀವು ನಮಗೆ ತುಂಬಾ ಹೆಮ್ಮೆ ತಂದಿದ್ದೀರಿ. ಶತಕೋಟಿ ಕನಸುಗಳು ನನಸಾಗಿವೆ." ಎಂದು ಲಾರಾ ದತ್ತಾ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. #MissDivaOrg ಮತ್ತು #MissUniverse ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ಸೇರಿಸಲಾಗಿದೆ.
Congratulations @HarnaazSandhu03 !!!! Welcome to the club!!! We’ve waited 21 long years for this!!! You make us SO SO proud!!! A billion dreams come true!!! @MissDivaOrg @MissUniverse
— Lara Dutta Bhupathi (@LaraDutta) December 13, 2021
17ನೇ ವಯಸ್ಸಿನಲ್ಲಿ ಮಾಡೆಲಿಂಗ್ ಆರಂಭಿಸಿದ ಹರ್ನಾಜ್ ಸಂಧು ಇದುವರೆಗೆ ನಾಲ್ಕು ಸೌಂದರ್ಯ ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾರೆ. ಅವರು 2017 ರಲ್ಲಿ 'ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ', 2018 ರಲ್ಲಿ 'ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್', 2019 ರಲ್ಲಿ 'ಫೆಮಿನಾ ಮಿಸ್ ಇಂಡಿಯಾ ಪಂಜಾಬ್' ಮತ್ತು 2021 ರಲ್ಲಿ 'ಮಿಸ್ ಯೂನಿವರ್ಸ್ ಇಂಡಿಯಾ' ಕೀರ್ತಿಗೆ ಪಾತ್ರರಾಗಿದ್ದಾರೆ.
Asia's sleeping Giant is finally back in Miss Universe!! ✨👑🇮🇳
Sushmita Sen 1994
Lara Dutta 2000
Harnaaz Sandhu 2021#MissUniverse#HarnaazSandhu#MissUniverseindia pic.twitter.com/TfCsUJT5MH— 𝘽𝙖𝙨𝙩𝙘𝙝𝙞𝙚𝙚⁴⁸ | ❤️💙💛💜🖤 (@CJuszep) December 13, 2021
ಇದನ್ನೂ ಓದಿ: ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ: ಯಾರು ಹರ್ನಾಜ್ ಸಂಧು? ಜಡ್ಜ್ ಗಳ ಮನಗೆದ್ದ ಈ ಉತ್ತರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.