ಕ್ರಾಂತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ DBoss..!

ಈಗಾಗಲೇ ಅಲ್ಬಮ್ ಸಾಂಗ್ ಮೂಲಕ ಸಾಕಷ್ಟು ಹವಾ ಎಬ್ಬಿಸಿರುವ ಕ್ರಾಂತಿ ಈಗ ನಾಳೆ ಅದರ ಟ್ರೈಲರ್ ಅನಾವರಣದ ಮೂಲಕ ಅದು ಇನ್ನಷ್ಟು ಕೂತುಹಲವನ್ನು ಹೆಚ್ಚಿಸುವುದಂತೂ ಪಕ್ಕಾ ಆಗಿದೆ.

Written by - Zee Kannada News Desk | Last Updated : Jan 6, 2023, 08:02 PM IST
  • ನಟಿ ರಚಿತಾ ರಾಮ್ ಹಾಗೂ ಚಿತ್ರದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ
  • ನಾಳೆ ಡಿಬಿಟ್ಸ್ ಯುಟ್ಯೂಬ್ ನಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ ಸಂಜೆ 7.30 ಕ್ಕೆ ಬಿಡುಗಡೆಯಾಗುವ ಸಮಯ ಬಂದಿದೆ
  • ಎಂದೆಂದಿಗೂ ನಿಮ್ಮ ಪ್ರೀತಿ-ಅಭಿಮಾನಕ್ಕೆ ಸದಾ ಚಿರಋಣಿ ಈ ದಾಸ “ ಎಂದು ಅವರು ಬರೆದುಕೊಂಡಿದ್ದಾರೆ
ಕ್ರಾಂತಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ DBoss..! title=

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ ಈಗ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿಯ ಬಗ್ಗೆ ಈಗ ಹೊಸದೊಂದು ಅಪ್ಡೇಟ್ ನೀಡಿದ್ದಾರೆ.

ಈಗಾಗಲೇ ಅಲ್ಬಮ್ ಸಾಂಗ್ ಮೂಲಕ ಸಾಕಷ್ಟು ಹವಾ ಎಬ್ಬಿಸಿರುವ ಕ್ರಾಂತಿ ಈಗ ನಾಳೆ ಅದರ ಟ್ರೈಲರ್ ಅನಾವರಣದ ಮೂಲಕ ಅದು ಇನ್ನಷ್ಟು ಕೂತುಹಲ ಹೆಚ್ಚಿಸುವುದಂತೂ ಪಕ್ಕಾ ಆಗಿದೆ.ಈಗ ಚಿತ್ರದ ಟ್ರೈಲರ್ ಬಿಡುಗಡೆ ಕುರಿತಾದ ಅಪ್ಡೇಟ್ ವೊಂದನ್ನು ಹಂಚಿಕೊಂಡಿರುವ ದರ್ಶನ್ “ ಕ್ರಾಂತಿ ಚಿತ್ರದ ಅಲ್ಬಮ್ ಗೆ ತೋರಿಸಿರುವ ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು. ನಾಳೆ ಡಿಬಿಟ್ಸ್ ಯುಟ್ಯೂಬ್ ನಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ ಸಂಜೆ 7.30 ಕ್ಕೆ ಬಿಡುಗಡೆಯಾಗುವ ಸಮಯ ಬಂದಿದೆ” ಎಂದೆಂದಿಗೂ ನಿಮ್ಮ ಪ್ರೀತಿ-ಅಭಿಮಾನಕ್ಕೆ ಸದಾ ಚಿರಋಣಿ ಈ ದಾಸ “ ಎಂದು ಅವರು ಬರೆದುಕೊಂಡಿದ್ದಾರೆ.

ಕ್ರಾಂತಿ ಚಿತ್ರದ ಟ್ರೈಲರ್ ಒರಿಯನ್ ಮಾಲ್ ನಲ್ಲಿ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ವಿ ,ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಹಾಗೂ ಉಮಾಶ್ರೀ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಟಿ ರಚಿತಾ ರಾಮ್ ಹಾಗೂ ಚಿತ್ರದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News