"ಟೈಮ್‌ ಒಂದು ಸಾರಿ ಡಿಸೈಡ್‌ ಮಾಡಿದ್ರೆ ಏನೂ ಮಾಡೋಕೆ ಆಗೊಲ್ಲ" 'ಬ್ಯಾಂಗ್' ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ..!

Kiccha Sudeep : ಶಾನ್ವಿ ಶ್ರೀವಾತ್ಸವ್‌ ನಾಯಕಿಯಾಗಿ ನಟಿಸಿರುವ 'ಬ್ಯಾಂಗ್‌' ಸಿನಿಮಾದ ಟ್ರೇಲರ್‌ಗೆ ಕಿಚ್ಚ ಸುದೀಪ್‌ ಹಿನ್ನೆಲೆ ಧ್ವನಿ ನೀಡಿದ್ದಾರೆ. ಟ್ರೇಲರ್‌ ವೀಕಿಸಿದ ಅಭಿಮಾನಿಗಳು ಆರಂಭದಲ್ಲಿ ಕಿಚ್ಚನ ಧ್ವನಿ ಕೇಳಿ ಫುಲ್‌ ಖುಷ್‌ ಆಗಿ, ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ.  

Written by - Savita M B | Last Updated : Aug 1, 2023, 01:35 PM IST
  • 'ಬ್ಯಾಂಗ್‌' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ.
  • ಈ ಡಾರ್ಕ್ ಕಾಮಿಡಿ ಆಕ್ಷನ್ ಸಿನಿಮಾದಲ್ಲಿ ಶಾನ್ವಿ ಶ್ರೀವಾತ್ಸವ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • ಇದೀಗ ಬ್ಯಾಂಗ್‌ ಚಿತ್ರಕ್ಕೆ ಸ್ಟಾರ್‌ ನಟರೊಬ್ಬರು ಕೈಜೋಡಿಸಿದ್ದಾರೆ.
"ಟೈಮ್‌ ಒಂದು ಸಾರಿ ಡಿಸೈಡ್‌ ಮಾಡಿದ್ರೆ ಏನೂ ಮಾಡೋಕೆ ಆಗೊಲ್ಲ" 'ಬ್ಯಾಂಗ್' ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ..!  title=

Baang Film : ಗಣೇಶ್‌ ಪರಶುರಾಮ್‌ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ 'ಬ್ಯಾಂಗ್‌' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಆಗಸ್ಟ್‌ನಲ್ಲಿ ಈ ಚಿತ್ರ ತೆರೆಕಾಣಲಿದ್ದು, ಈ ಡಾರ್ಕ್ ಕಾಮಿಡಿ ಆಕ್ಷನ್ ಸಿನಿಮಾದಲ್ಲಿ  ಶಾನ್ವಿ ಶ್ರೀವಾತ್ಸವ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಬ್ಯಾಂಗ್‌ ಚಿತ್ರಕ್ಕೆ ಸ್ಟಾರ್‌ ನಟರೊಬ್ಬರು ಕೈಜೋಡಿಸಿದ್ದಾರೆ. 

ಹೌದು 'ಬ್ಯಾಂಗ್' ಸಿನಿಮಾದ ಟ್ರೇಲರ್‌ಗೆ ಕಿಚ್ಚ ಸುದೀಪ್ ಧ್ವನಿ ನೀಡಿ ಚಿತ್ರತಂಡದ ನಿರೀಕ್ಷೆ ಮತ್ತು ಖುಷಿಯನ್ನು ಹೆಚ್ಚಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಸಿನಿಮಾ ನಿರ್ದೇಶಕ ಗಣೇಶ್ ಪರಶುರಾಮ್ "ನಾವೆಲ್ಲರೂ ಕಿಚ್ಚ ಸುದೀಪ್‌ ಅವರ ಸಿನಿಮಾಗಳನ್ನು ನೋಡಿ ಬೆಳೆದವರು. ಮೊದಲ ದಿನವೇ ಅವರ ಚಿತ್ರಗಳನ್ನು ನೋಡಿ ವಿಜೃಂಭಿಸಿದವರು. ಇದೀಗ ಅವರು ನಮ್ಮ ಸಿನಿಮಾಗೆ ಕೈ ಜೋಡಿಸಿದ್ದು, ನಮ್ಮ ಬಹಳ ವರ್ಷಗಳ ಕನಸು ನನಸಾದಂತೆ ಫೀಲ್‌ ಆಗುತ್ತಿದೆ.

ಇದನ್ನೂ ಓದಿ-Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'

ಚಿತ್ರದಲ್ಲಿನ ಕಿಚ್ಚ ಅವರ ಉಪಸ್ಥಿತಿಯನ್ನು ಅಭಿಮಾನಿಗಳು ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ. ಈ ಕನಸು ನನಸಾಗಲು ಕಾರಣವಾದ ಶಾನ್ವಿ ಶ್ರೀವಾತ್ಸವ್‌ ಅವರಿಗೆ ಧನ್ಯವಾದಗಳು..ಹೊಸ ತಂಡವನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಸುದೀಪ್ ಅವರಿಗೂ ಧನ್ಯವಾದಗಳು" ಎಂದು ಧನ್ಯವಾದ ಅರ್ಪಿಸಿದ್ದಾರೆ. 

'ಬ್ಯಾಂಗ್' ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಮತ್ತು ಉದಯ್ ಲೀಲಾ ಛಾಯಾಗ್ರಹಣವಿದ್ದು, ಚಿತ್ರ 2 ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಜೊತೆಗೆ ಉತ್ತಮ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿವೆ. ಇನ್ನು ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಸಿನಿಮಾ ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ 

ಇದನ್ನೂ ಓದಿ-ಡಿವೋರ್ಸ್‌ ವದಂತಿ ಮಧ್ಯೆ "ಒಂದಾನೊಂದು ಕಾಲದಲ್ಲಿ" ಅಂತಲೇ ಬೋಲ್ಡ್ ಫೋಟೊ ಶೇರ್ ಮಾಡಿದ ದೀಪಿಕಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News