ಬೆಂಗಳೂರು : ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಡೈಮಂಡ್ ಕ್ರಾಸ್" ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಅನಾವರಣವಾಯಿತು.
ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, ಟ್ರೇಲರ್‌ನಲ್ಲಿ ಕಲಾವಿದರ ಅಭಿನಯ ಗೊತ್ತಾಗುತ್ತಿಲ್ಲ. ಅದಕ್ಕೆ ಸಿನಿಮಾ ನೋಡಬೇಕು. ಆದರೆ ತಂತ್ರಜ್ಞರ ಕೈಚಳಕ ಎದ್ದು ಕಾಣುತ್ತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಇನ್ನು ನಾಗತಿಹಳ್ಳಿ ಸರ್ ನನಗೆ ವಿಷ್ಣುವರ್ಧನ್ ಅವರ ಜೊತೆ ನಟಿಸಲು ಅವಕಾಶ ಕೊಟ್ಟವರು. ಅವರಿಗೆ ನನ್ನ ಅನಂತ ಧನ್ಯವಾದ ಎಂದರು.
ಇದನ್ನೂ ಓದಿ : ಕೆಜಿಎಫ್ 2 ಚಿತ್ರ ನನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನೆನಪಿಸಿತು - ಸಂಜಯ್ ದತ್
ನಾನು ಒಂದು ಫೋನ್ ಮಾಡಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕು ಎಂದು ಕೇಳಿದೆ ಅಷ್ಟೇ. ಆಯ್ತು ಅಂತ ಬಂದಿದ್ದಾರೆ ಕಿಚ್ಚ ಸುದೀಪ್. ಅವರಿಗೆ ಮೊದಲು ಧನ್ಯವಾದ. ಸುದೀಪ್ ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿ. ಅಂತಹವರು ಈ ಟ್ರೇಲರ್ ಬಿಡುಗಡೆ ಮಾಡಿದ್ದು ಸಂತೋಷ. ಈ ಚಿತ್ರದ ನಿರ್ದೇಶಕ ರಾಮ್ ದೀಪ್ ನನ್ನ ಅಕ್ಕನ ಮಗ. ಸಂಗೀತ ನಿರ್ದೇಶಕ ಲೇಖನ್ ನನ್ನ ತಂಗಿಯ ಮಗ. ಚಿತ್ರದಲ್ಲಿ ಅಭಿನಯಿಸಿರುವ ಹಾಗೂ ಕಾರ್ಯನಿರ್ವಹಿಸಿರುವ ಬಹುತೇಕರು ನಮ್ಮ ಟೆಂಟ್ ಸಿನಿಮಾ ಶಾಲೆಯವರು. ಎಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಗತಿಹಳ್ಳಿ ಚಂದ್ರಶೇಖರ್.
"ನನ್ನ ಲೈಫಲಿ" ಚಿತ್ರದ ನಂತರ ಈ ಚಿತ್ರ ನಿರ್ದೇಶಿಸಿದ್ದೇನೆ. ಸೈಬರ್ ಕ್ರೈಮ್ ಕಥಾಹಂದರದ ಸಿನಿಮಾ ಇದು. ಈಗಿನ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬಳಸಿಕೊಳ್ಳಬಹುದು? ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟ್ಟಿದ್ದೇನೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು ನಿರ್ದೇಶಕ ರಾಮ್ ದೀಪ್.
ರೋಜರ್ ನಾರಾಯಣ್, ರಜತ್ ಅಣ್ಣಪ್ಪ, ಮನು ಕೆ.ಎಂ. ಹಾಗೂ ರೂಪಿಕಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲೇಖನ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಅನಿಶ್ ಚೆರಿಯನ್ ಅವರದು. ರಾಮಚಂದ್ರ ಬಾಬು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ, ಸಂಕಲನ ಮಾಡಿದ್ದಾರೆ. ಮಹಾಲಿಂಗಪ್ಪ, ಬಸವರಾಜ ಗೌಡ, ದೀಪು ಎನ್. ಕುಮಾರ್, ಪ್ರಸನ್ನ ಕುಮಾರ್ ಹಾಗೂ ರಾಮಚಂದ್ರ ಬಾಬು "ಡೈಮಂಡ್ ಕ್ರಾಸ್" ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ : ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.