ʻತ್ರಿವಿಕ್ರಮʼನಿಗೆ ಕಿಚ್ಚನ ಸಾಥ್..‌ ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ ಸುದೀಪ್‌

ವಿಕ್ರಮ್‌ ರವಿಚಂದ್ರನ್‌ ನಟನೆಯ ತ್ರಿವಿಕ್ರಮ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಿಡಲ್‌ ಕ್ಲಾಸ್‌ ಹುಡುಗ ಮತ್ತು ಹೈ ಕ್ಲಾಸ್‌ ಹುಡುಗಿಯ ಲವ್‌ ಸ್ಟೋರಿ ಇರುವ ತ್ರಿವಿಕ್ರಮ ಸಿನಿಮಾವನ್ನು ಅಭಿಮಾಣಿಗಳು ಸಹ ಮೆಚ್ಚಿಕೊಳ್ಳುತ್ತಿದ್ದಾರೆ.  

Written by - Chetana Devarmani | Last Updated : Jun 27, 2022, 10:34 AM IST
  • ವಿಕ್ರಮ್‌ ರವಿಚಂದ್ರನ್‌ ನಟನೆಯ ತ್ರಿವಿಕ್ರಮ ಸಿನಿಮಾ
  • ʻತ್ರಿವಿಕ್ರಮʼನಿಗೆ ಸಾಥ್ ನೀಡಿದ ಕಿಚ್ಚ
  • ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ ಸುದೀಪ್‌
ʻತ್ರಿವಿಕ್ರಮʼನಿಗೆ ಕಿಚ್ಚನ ಸಾಥ್..‌ ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ ಸುದೀಪ್‌  title=
ತ್ರಿವಿಕ್ರಮ ಸಿನಿಮಾ

ವಿಕ್ರಮ್‌ ರವಿಚಂದ್ರನ್‌ ನಟನೆಯ ತ್ರಿವಿಕ್ರಮ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಿಡಲ್‌ ಕ್ಲಾಸ್‌ ಹುಡುಗ ಮತ್ತು ಹೈ ಕ್ಲಾಸ್‌ ಹುಡುಗಿಯ ಲವ್‌ ಸ್ಟೋರಿ ಇರುವ ತ್ರಿವಿಕ್ರಮ ಸಿನಿಮಾವನ್ನು ಅಭಿಮಾಣಿಗಳು ಸಹ ಮೆಚ್ಚಿಕೊಳ್ಳುತ್ತಿದ್ದಾರೆ.  

ಇದನ್ನೂ ಓದಿ: Gowli Movie song : ಸಖತ್ ಸೌಂಡ್ ಮಾಡ್ತಿದೆ ಶ್ರೀನಗರ ಕಿಟ್ಟಿಯ 'ಗೌಳಿ' ಸಿನಿಮಾ ಲಿರಿಕಲ್ ಸಾಂಗ್!

ಕನ್ನಡ ಸಿನಿರಂಗದಲ್ಲಿ ವೈವಿಧ್ಯಮಯ ಸಿನಿಮಾಗಳನ್ನು ತಂದ 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ ಪುತ್ರ ವಿಕ್ರಮ್ ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಗುರುತಿಸಿಕೊಂಡವರು. ಇದೀಗ ತ್ರಿವಿಕ್ರಮ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದಾರೆ. 'ತ್ರಿವಿಕ್ರಮ' ಸಿನಿಮಾಗೆ ಸಹನಮೂರ್ತಿ ನಿರ್ದೇಶನವಿದೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್‌ ಮ್ಯೂಸಿಕ್‌ ಕಂಪೀಸರ್‌ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’, ‘ಹನಿ ಬನಿ ಫೀಲ್ ಮೈ ಲವ್’ ಹಾಗೂ ‘ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್...’ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‍ಗಟ್ಟಲೆ ಹಿಟ್ಸ್ ದಾಖಲಿಸಿರುವುದು ‘ತ್ರಿವಿಕ್ರಮ’ನ ಹೆಚ್ಚುಗಾರಿಕೆಯಾಗಿದೆ.

ಇದೀಗ ತ್ರಿವಿಕ್ರಮನಿಗೆ ಕಿಚ್ಚ ಸುದೀಪ್‌ ಸಹ ಸಾಥ್‌ ನೀಡಿದ್ದಾರೆ. ತ್ರಿವಿಕ್ರಮ ಸಿನಿಮಾ ತಂಡಕ್ಕೆ ಶುಭ ಹಾರೈಸಿ ಸುದೀಪ್‌ ಟ್ವೀಟ್‌ ಮಾಡಿದ್ದು, ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ್ದಾರೆ. ಹೌದು, ರವಿಚಂದ್ರನ್‌ ಯಾವಾಗಲೂ ಕನಟ ಸುದೀಪ್‌ ಅವರು ತಮ್ಮ ಮಗ ಎಂದೇ ಕರೆದುಕೊಂಡು ಬಂದಿದ್ದಾರೆ. ಇತ್ತೀಚೆಗೆ ನಡೆದ ವಿಕ್ರಾಂತ್‌ ರೋಣ ಸಿನಿಮಾದ ಟ್ರೈಲರ್‌ ರಿಲೀಸ್‌ ಇವೇಂಟ್‌ನಲ್ಲಿ ಸಹ ಸುದೀಪ್‌ ಅವರಿಗೆ ಶುಭ ಹಾರೈಸಿದ್ದಲ್ಲದೇ, ನನ್ನ ಮಗನ ಸಿನಿಮಾ ಎಂದು ಹೇಳಿದ್ದರು. ಅದೇ ರೀತಿ ಸುದೀಪ್‌ ಸಹ ಸದಾ ರವಿಚಂದ್ರನ್‌ ಅವರನ್ನು ಗೌರವಿಸುತ್ತಾರೆ. ಅಲ್ಲದೇ ತಮ್ಮ ತಂದೆಯ ಸ್ಥಾನದಲ್ಲಿಯೇ ನೋಡುತ್ತಾರೆ. 

ಇದೀಗ ರವಿಚಂದ್ರನ್‌ ಅವರ ದ್ವತೀಯ ಪುತ್ರ ವಿಕ್ರಮ್‌ ಅವರ ತ್ರಿವಿಕ್ರಮ ಸಿನಿಮಾಗೆ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. "ಹೇ ನನ್ನ ಸಹೋದರ, ವಿಕ್ರಮ್‌ ರವಿಚಂದ್ರನ್‌ ನಿಮಗೆ ಮತ್ತು ತ್ರಿವಿಕ್ರಮ ತಂಡಕ್ಕೆ ನನ್ನ ಶುಭಾಶಯಗಳು. ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ" ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. 

ಇದನ್ನೂ ಓದಿ: Vikrant Rona: ಎಷ್ಟಾಗಲಿದೆ ʻವಿಕ್ರಾಂತ್ ರೋಣʼ ಕಲೆಕ್ಷನ್? ಕಿಚ್ಚನ ಲೆಕ್ಕಾಚಾರವೇನು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News