KGF Chapter 2: ಬಿಡುಗಡೆಯಾಗುತ್ತಿದ್ದಂತೆ ಟ್ರೆಂಡ್ ಸೃಷ್ಟಿಸಿದೆ ಈ ಚಿತ್ರದ ಫಸ್ಟ್ ಲುಕ್

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'KGF CHAPTER 2' ಚಿತ್ರದ ಅದ್ಧೂರಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ ಬಿಡುಗಡೆಯಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಭಾರಿ ವೈರಲ್ ಆಗಿದೆ.  

Written by - Nitin Tabib | Last Updated : Dec 22, 2019, 01:10 PM IST
KGF Chapter 2: ಬಿಡುಗಡೆಯಾಗುತ್ತಿದ್ದಂತೆ ಟ್ರೆಂಡ್ ಸೃಷ್ಟಿಸಿದೆ ಈ ಚಿತ್ರದ ಫಸ್ಟ್ ಲುಕ್ title=

ನವದೆಹಲಿ: 70ರ ದಶಕದ ಬಾಲಿವುಡ್ ನ ಆಂಗ್ರಿ ಹಾಗೂ ಡೆಯರಿಂಗ್ ನಾಯಕರನ್ನು ಮೆಚ್ಚುವವರಿಗೆ ಡಿಸೆಂಬರ್ 2018 ಹೊಸವರ್ಷದ ಕೊಡುಗೆಯ ರೂಪದಲ್ಲಿ ಸೂಪರ್ ಸ್ಟಾರ್ ಯಶ್ ಅಭಿನಯದ 'KGF' ನೀಡಿತ್ತು. ಆ ಬಳಿಕ ಈ ಚಿತ್ರದ ಎರಡನೇ ಅವತರಿಣಿಕೆ ಅಂದರೆ  'KGF CHAPTER 2' ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಈ ಅವತರಿಣಿಕೆಯ ಅದ್ಧೂರಿ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಳೆದ ವರ್ಷ ಬಿಡುಗಡೆಗೊಂಡ ಯಶ್ ಅಭಿನಯದ 'KGF CHAPTER 1' ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿತ್ತು. ಅಷ್ಟೇ ಅಲ್ಲ ಚಿತ್ರ ವಿಮರ್ಶಕರಿಂದ ಹಾಗೂ ವೀಕ್ಷಕರಿಂದ ಈ ಚಿತ್ರಕ್ಕೆ ಸಕತ್ ರಿಸ್ಪಾನ್ಸ್ ದೊರೆತಿತ್ತು. ಸದ್ಯ ಈ ಚಿತ್ರದ ಎರಡನೇ ಅವತರಿಣಿಕೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದೆ. ಇಂದು ಚಿತ್ರ ತಂಡ ಈ ಚಿತ್ರದ ಫಸ್ಟ್ ಲುಕ್ ಜಾರಿಗೊಳಿಸಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಸೆನ್ಸೇಷನ್ ಹುಟ್ಟು ಹಾಕಲಾರಂಭಿಸಿದೆ. ಈ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ #KGFChapter2FirstLook ಟ್ರೆಂಡ್ ಸೃಷ್ಟಿಸಲಾರಂಭಿಸಿದೆ. ಈ ಪೋಸ್ಟರ್ ಅನ್ನು ಒಮ್ಮೆ ನೀವೂ ನೋಡಿ..

ಸದ್ಯ ಬಿಡುಗಡೆಯಾಗಿರುವ ಈ ಪೋಸ್ಟರ್ ನಲ್ಲಿ ಯಶ್ ಮತ್ತೊಮ್ಮೆ ತಮ್ಮ ಜಬರ್ದಸ್ತ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ ಕೈಯಲ್ಲಿ ದೊಡ್ಡದಾದ ಹಗ್ಗವಿದ್ದು, ಹಗ್ಗದ ಸಹಾಯದಿಂದ ಬೃಹತ್ ಗಾತ್ರದ ವಸ್ತುವೊಂದನ್ನು ಅವರು ನಿಲ್ಲಿಸಲು ಸಹಾಯ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಪೋಸ್ಟರ್ ನ ಅಡಿಯಲ್ಲಿ 'REBULDING AN EMPIRE' ಎಂಬ ಅಡಿಬರಹ ಬರೆಯಲಾಗಿದ್ದು, ಈ ಅವತರಿಣಿಕೆಯಲ್ಲಿ ಯಶ್ ಮೊದಲಿಗಿಂತಲೂ ಜಬರ್ದಸ್ತ್ ಭೂಮಿಕೆಯಲ್ಲಿ ಕಂಡುಬರಲಿದ್ದಾರೆ ಎಂಬುದನ್ನು ಸೂಚಿಸುತ್ತಿದೆ.

ಈ ಚಿತ್ರ ಹಿಂದಿ, ತಮಿಳ್, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಸೇರಿದಂತೆ ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending News