KGF Chapter 2 Records: ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ಕೆಜಿಎಫ್ ಚಾಪ್ಟರ್​ 2

KGF 2 Records: ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ಹವಾ ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಈ ಸಿನಿಮಾ ಮುಟ್ಟಿದ್ದೆಲ್ಲ ರೆಕಾರ್ಡ್​ ಆಗುತ್ತಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 29 ದಾಖಲೆಗಳನ್ನು ಬರೆದಿದೆ.  

Written by - Chetana Devarmani | Last Updated : Apr 19, 2022, 01:26 PM IST
  • ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ಕೆಜಿಎಫ್ ಚಾಪ್ಟರ್​ 2
  • ಬಿಡುಗಡೆಗೆ ಮೊದಲೇ ಸಖತ್‌ ಹವಾ ಸೃಷ್ಟಿಸಿದ್ದ ಸಿನಿಮಾ
  • ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2
KGF Chapter 2 Records: ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ  ಕೆಜಿಎಫ್ ಚಾಪ್ಟರ್​ 2  title=
ಕೆಜಿಎಫ್ ಚಾಪ್ಟರ್​ 2

ಬಿಡುಗಡೆಗೆ ಮೊದಲೇ ಸಖತ್‌ ಹವಾ ಸೃಷ್ಟಿಸಿತ್ತು ಕೆಜಿಎಫ್ 2. ರಿಲೀಸ್‌ಗೂ ಮೊದಲೇ ಬಾಕ್ಸ್‌ ಆಫೀಸ್‌ ಕೊಳ್ಳೆಹೊಡೆಯುವ ಜೊತೆ ಹಲವು ದಾಖಲೆ ಬರೆಯಲಿದೆ ಎಂಬುದನ್ನು ಊಹಿಸಲಾಗಿತ್ತು. ಏ.14ರ ಗುರುವಾರ ಬಿಡುಗಡೆಯಾದ ಕೆಜಿಎಫ್ 2 ದಿನದಿಂದ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ ತನ್ನ ನಾಗಲೋಟವನ್ನು ದಾಖಲಿಸುತ್ತಲೇ ಇದೆ.

ಇದನ್ನೂ ಓದಿ: The Kashmir Files:ಅತೀ ಶೀಘ್ರದಲ್ಲೇ OTT ಅಲ್ಲಿ ದಿ ಕಾಶ್ಮೀರ ಫೈಲ್ಸ್‌ ರಿಲೀಸ್‌!

ಕನ್ನಡ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಈ ರೀತಿ ಹವಾ ಮಾಡುತ್ತಿರುವುದು ಅನೇಕ ಸಿನಿಮಾ ರಂಗದ ನಿರ್ಮಾಪಕರಿಗೆ ಹೊಸದೊಂದು ಮಾರ್ಗ ಕಾಣಿಸಿದಂತಾಗಿದೆ. ಈ ಸಿನಿಮಾ ಮುಟ್ಟಿದ್ದೆಲ್ಲ ರೆಕಾರ್ಡ್​ ಆಗುತ್ತಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 29 ದಾಖಲೆಗಳನ್ನು ಬರೆದಿದೆ.  

ಕೆಜಿಎಫ್ ಚಾಪ್ಟರ್ 2 ಸ್ಯಾಂಡಲ್​ವುಡ್​ ಹಾಗೂ ಬಾಲಿವುಡ್​ನಲ್ಲಿ ಹಲವು ದಾಖಲೆಗಳನ್ನು‌ ತನ್ನದಾಗಿಸಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿಈ ಚಿತ್ರ ಬಾಲಿವುಡ್​ ಮಾರುಕಟ್ಟೆಯಿಂದ 300 ಕೋಟಿ ಕಮಾಯಿ ಮಾಡಲಿದೆ ಎಂಬುದು ಅನೇಕರ ಊಹೆಯಾಗಿದೆ.  

29 ದಾಖಲೆ ಬರೆದ  ಕೆಜಿಎಫ್ ಚಾಪ್ಟರ್​ 2:

  1. ಬಾಲಿವುಡ್‌ನಲ್ಲಿ ರೆಕಾರ್ಡ್ ಓಪನರ್ ಸಿನಿಮಾ
  2. ಬಾಲಿವುಡ್‌ನಲ್ಲಿ ಒಂದೇ ದಿನ ಅತಿಹೆಚ್ಚು ಗಳಿಕೆ
  3. ಬಾಲಿವುಡ್ ಬಾಕ್ಸ್​ ಆಫೀಸ್​ನಲ್ಲಿ 2ನೇ ದಿನ ಅತಿ ಹೆಚ್ಚು ಕಲೆ ಹಾಕಿದ ಚಿತ್ರ
  4. ಹಿಂದಿಯಲ್ಲಿ ರೆಕಾರ್ಡ್ ವೀಕೆಂಡ್ ಕಲೆಕ್ಷನ್ ಮಾಡಿದ ಚಿತ್ರ
  5. ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಭಾನುವಾರ ಅತಿ ಹೆಚ್ಚು ಕಲೆಕ್ಷನ್‌ 
  6. ಹಿಂದಿ ಬೆಲ್ಟ್​ನಲ್ಲಿ 4 ದಿನಗಳಲ್ಲಿ ಹೆಚ್ಚು ಮೊತ್ತ ಗಳಿಸಿದ ಫಿಲ್ಮ್‌
  7. ಕರ್ನಾಟಕದಲ್ಲಿ ರೆಕಾರ್ಡ್ ಓಪನರ್ ಸಿನಿಮಾ
  8. ಕರ್ನಾಟಕದಲ್ಲಿ ವೀಕೆಂಡ್‌ನಲ್ಲಿ ದಾಖಲೆಯ ಕಲೆಕ್ಷನ್ 
  9. ಕರ್ನಾಟಕದಲ್ಲಿ 2ನೇ ದಿನ ಅತಿ ಹೆಚ್ಚು ಗಳಿಕೆ
  10. ಕರ್ನಾಟಕದಲ್ಲಿ 3ನೇ ದಿನ ಅತಿ ಹೆಚ್ಚು ಕಲೆಕ್ಷನ್
  11. ಕರ್ನಾಟಕದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ
  12. ಕರ್ನಾಟಕದಲ್ಲಿ ಭಾನುವಾರ ಅತಿ ಹೆಚ್ಚು ಕಲೆಕ್ಷನ್
  13. ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ಚಿತ್ರ
  14. ಕೇರಳದಲ್ಲಿ ರೆಕಾರ್ಡ್​ ಓಪನಿಂಗ್ ಸಿನಿಮಾ
  15. ಕೇರಳದಲ್ಲಿ ಮೂರನೇ ದಿನ ಅತಿ ಹೆಚ್ಚು ಕಲೆಕ್ಷನ್
  16. ಕೇರಳದಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಚಿತ್ರ
  17. ಕೇರಳದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ
  18. ಕೇರಳದಲ್ಲಿ ಎರಡನೇ ದಿನ ಅತಿ ಹೆಚ್ಚು ದುಡ್ಡು ಮಾಡಿದ ಚಿತ್ರ
  19. ಕೇರಳದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಕೊಳ್ಳೆಹೊಡೆದ ಸಿನಿಮಾ
  20. ಕೇರಳದಲ್ಲಿ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ 
  21. ತೆಲುಗಿನಲ್ಲಿ ರೆಕಾರ್ಡ್ ಓಪನಿಂಗ್ ಕಂಡ ಸಿನಿಮಾ
  22. ಟಾಲಿವುಡ್​ನಲ್ಲಿ ನಾಲ್ಕನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
  23. ಟಾಲಿವುಡ್​ನಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಫಿಲ್ಮ್‌
  24. ಟಾಲಿವುಡ್​ನಲ್ಲಿ ಎರಡನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
  25. ವೀಕೆಂಡ್‌ನಲ್ಲಿ ಟಾಲಿವುಡ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಚಿತ್ರ
  26. ಟಾಲಿವುಡ್​ನಲ್ಲಿ ಮೂರನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
  27. ಟಾಲಿವುಡ್​ನಲ್ಲಿ ಸಂಡೇ ಕಲೆಕ್ಷನ್​ನಲ್ಲಿ ಮೊದಲ ಸ್ಥಾನ ಪಡೆದ ತೆಲುಗೇತರ ಸಿನಿಮಾ
  28. ಭಾರತದಲ್ಲಿ ಐಮ್ಯಾಕ್ಸ್ ಕಲೆಕ್ಷನ್​ನಲ್ಲಿ ರೆಕಾರ್ಡ್‌
  29. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ

ಇದನ್ನೂ ಓದಿ: ಕೆಜಿಎಫ್‌2 ನಲ್ಲಿ ಮಾಯವಾದ ಕೆಜಿಎಫ್‌1 ರ ಈ 4 ಪಾತ್ರಗಳು!

ಗಲ್ಲಾಪೆಟ್ಟಿಗೆಯಲ್ಲಿ ಕೆಜಿಎಫ್ ಚಿತ್ರವು ಇದುವರೆಗೆ ಎಲ್ಲಾ ಭಾಷೆಯ ಆವೃತ್ತಿಗಳಲ್ಲಿ ಕೇವಲ ನಾಲ್ಕನೇ ದಿನಕ್ಕೆ ಬರೋಬ್ಬರಿ 552 ಕೋಟಿ.ರೂ ಗಳನ್ನು ಬಾಚಿಕೊಂಡಿದೆ. ಇದಲ್ಲದೆ, ಸಿನಿಮಾ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ವಾರಾಂತ್ಯದಲ್ಲಿ ವಿಶ್ವದಲ್ಲೇ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. 

ಇನ್ನೊಂದು ವಿಶೇಷವೆಂದರೆ ಈ ಸಿನಿಮಾ ಎಪ್ರಿಲ್ 15 ರಿಂದ 17 ರ ವರೆಗೆ ಜಾಗತಿಕ ಟಾಪ್ 10 ಚಲನಚಿತ್ರಗಳ ಕಾಮ್‌ಸ್ಕೋರ್ ಪಟ್ಟಿಯು ಕೆಜಿಎಫ್ 2 ಅನ್ನು ಎರಡನೇ ಸ್ಥಾನದಲ್ಲಿದೆ ಎನ್ನಲಾಗಿದೆ. ಕಾಮ್‌ಸ್ಕೋರ್ ಒಂದು ಅಮೇರಿಕನ್ ಮಾಧ್ಯಮ ಮಾಪನ ಮತ್ತು ವಿಶ್ಲೇಷಣಾ ಕಂಪನಿಯಾಗಿದ್ದು ಅದು ಮಾರುಕಟ್ಟೆ ಡೇಟಾ ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವೂ ಕೆಜಿಎಫ್ 1 ರ ಮುಂದಿನ ಅನುಸರಣೆಯಾಗಿದ್ದು, ಗ್ಯಾಂಗ್ ಸ್ಟಾರ್ ಆಗಿರುವ ರಾಕಿ ಕೆಜಿಎಫ್ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದು ಸಾವನ್ನಪ್ಪುವುದನ್ನು ಕೆಜಿಎಫ್ 2 ಭಾಗವು ಹೇಳುತ್ತದೆ.ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್,ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News