ಕಾಂತಾರ ಪ್ರೀಕ್ವೆಲ್‌ಗೆ ಮುಹೂರ್ತ ಫಿಕ್ಸ್‌: ವಿದೇಶದಲ್ಲಿ ಪಂಜುರ್ಲಿ ದೈವದ ಕಥೆಯ ಚಿತ್ರೀಕರಣ​!

Kantara 2: ಕಾಂತಾರ ಪ್ರೀಕ್ವೆಲ್‌ಗೆ ಭಾರಿ ತಯಾರಿ ನಡೆಯುತ್ತಿದ್ದು, ಸಿನಿಮಾದ ಮುಹೂರ್ತದ ಡೇಟ್‌ ಫಿಕ್ಸ್‌ ಆಗಿದ್ದು, ಇದೀಗ ಈ ಚಿತ್ರದ ಶೂಟಿಂಗ್‌ ಹೊರದೇಶದಲ್ಲಿ ನಡೆಯಲಿದೆಯೆಂಬ ಮಾಹಿತಿ ದೊರಕಿದೆ. ಹಾಗಾದ್ರೆ ಚಿತ್ರೀರಣದ ಮುಹೂರ್ತ ಯಾವಾಗ? ಎಲ್ಲಿ ಶೂಟೀಮಗ್‌ ನಡೆಯಲಿದೆ? ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Nov 22, 2023, 02:37 PM IST
  • ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅದು ಕಾಂತಾರ.
  • ನವೆಂಬರ್​ 27ರಂದು ಕಾಂತಾರ ಪ್ರಿಕ್ವೆಲ್ ಸೆಟ್ಟೇರುತ್ತಿದ್ದು, ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ ನೆರವೇರಲಿದೆ.
  • ಕಾಂತಾರ ಪ್ರೀಕ್ವೆಲ್​​ಗಾಗಿ ಅದ್ಭುತವಾಗಿ ಕಥೆ ಎಣೆದಿರುವ ನಟ ರಿಷಬ್ ಶೆಟ್ಟಿ, ಚಿತ್ರದ ಮುಹೂರ್ತ ಪೂಜೆ ಬಳಿಕ ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿದ್ದಾರಂತೆ.
ಕಾಂತಾರ ಪ್ರೀಕ್ವೆಲ್‌ಗೆ ಮುಹೂರ್ತ ಫಿಕ್ಸ್‌: ವಿದೇಶದಲ್ಲಿ ಪಂಜುರ್ಲಿ ದೈವದ ಕಥೆಯ ಚಿತ್ರೀಕರಣ​! title=

Kantara Prequel Date Fixed: ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ, ಎಲ್ಲೆಡೆ ಕಮಾಲ್ ಮಾಡಿದ ಕಾಂತಾರ ಸಿನಿಮಾ ಪ್ರೀಕ್ವೆಲ್‌ಗಾಗಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಪ್ಯಾನ್​ ಇಂಡಿಯಾ ಸ್ಟಾರ್​  ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಕಾಂತಾರ ಪ್ರೀಕ್ವೆಲ್​​ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಇದೀಗ ಕಾಂತಾರ 2 ಸಿನಿಮಾದ ಮುಹೂರ್ತದ ಡೇಟ್​ ಕೂಡ ಫಿಕ್ಸ್ ಆಗಿದೆ. 

ನವೆಂಬರ್​ 27ರಂದು ಕಾಂತಾರ ಪ್ರಿಕ್ವೆಲ್ ಸೆಟ್ಟೇರುತ್ತಿದ್ದು, ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ 2 ಮುಹೂರ್ತ ನೆರವೇರಲಿದೆ. ಈ ಹಿಂದೆ  ಕಾಂತಾರ ಸಿನಿಮಾ ಮುಹೂರ್ತವನ್ನು ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲೇ ನೆರವೇರಿಸಲಾಗಿದ್ದು, ಇದೀಗ ಕಾಂತಾರ 2 ಮುಹೂರ್ತ ಸಹ ಅದೇ ಜಾಗದಲ್ಲಿ ನಡೆಯಲಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಅನೇಕ ಚಂದನವನದ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಎರಡನೇ ಮಹಾಯುದ್ಧಕ್ಕೆ ಸಜ್ಜಾಗಿರುವ ಪ್ರಭಾಸ್..! ಲೇಟೆಸ್ಟ್ ಸಿನಿಮಾದ ಕ್ರೇಜಿ ಅಪ್ಡೇಟ್‌

ಕಾಂತಾರ ಪ್ರೀಕ್ವೆಲ್​​ಗಾಗಿ ಅದ್ಭುತವಾಗಿ ಕಥೆ ಎಣೆದಿರುವ ನಟ ರಿಷಬ್ ಶೆಟ್ಟಿ, ಚಿತ್ರದ ಮುಹೂರ್ತ ಪೂಜೆ ಬಳಿಕ ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿದ್ದಾರಂತೆ. ಡಿವೈನ್‌ ಸ್ಟಾರ್ ಈಗಾಗಲೇ ಶ್ರೀಲಂಕಾ, ಕರಾವಳಿ ಸುತ್ತಮುತ್ತ ಪ್ರದೇಶಗಳಲ್ಲಿ ಶೂಟಿಂಗ್‌ಗಾಗಿ  ಲೊಕೇಶನ್ ಕೂಡ ಫಿಕ್ಸ್ ಮಾಡಿದ್ದು, ಈ ಸಿನಿಮಾದ ಬಹುತೇಕ ಚಿತ್ರೀಕರಣ​ ಶ್ರೀಲಂಕಾದಲ್ಲಿಯೇ ನಡೆಯಲಿದೆ ಎನ್ನಲಾಗ್ತಿದೆ.

ರಿಷಬ್ ಶೆಟ್ರು ಈಗಾಗಲೇ ಸಿನಿಮಾದ ಪಾತ್ರಕ್ಕಾಗಿಯೇ ಎಲ್ಲ ತಯಾರಿ ಆರಂಭಿಸಿ, ಲಾಂಗ್ ಹೇರ್ ಸಹ ಬಿಟ್ಟಿದ್ದಾರೆ. ಚಿತ್ರಕ್ಕಾಗಿ ಹಾರ್ಸ್ ರೈಡಿಂಗ್ ಕೂಡ ಕಲಿಯುತ್ತಿದ್ದು, ಸಿನಿಮಾದ ಪಾತ್ರಕ್ಕಾಗಿಯೆ ಇನ್ನು ಏನೆಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಕುತೂಹಲ ಕೂಡ ಹೆಚ್ಚುತ್ತಲೇ ಇದೆ ಅಂತಲೂ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News