ಕಾಂತಾರ-2 ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್! ಇದು ಸಿಕ್ವೆಲ್ ಅಲ್ಲ ಪ್ರೀಕ್ವೆಲ್...

Kantara Prequel: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಪ್ರೀಕ್ವೆಲ್ ಕಥೆಯ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡು ಸಿನಿಮಾ ಮುಹೂರ್ತ ಫಿಕ್ಸ್‌ ಆಗಿದ್ದು, ಹೊಂಬಾಳೆ ಸಂಸ್ಥೆ ಸಿಂಪಲ್ ಆಗಿಯೇ ಒಂದು ದೇವಸ್ಥಾನದಲ್ಲಿಯೇ ಚಿತ್ರದ ಮುಹೂರ್ತ ಪ್ಲಾನ್ ಮಾಡಿದೆ.  

Written by - Zee Kannada News Desk | Last Updated : Nov 18, 2023, 11:55 AM IST
  • ಇಲ್ಲಿವರೆಗೂ ನೀವೂ ನೋಡಿರೋದು ಪಾರ್ಟ್-2 ಸಿನಿಮಾನೆ ಆಗಿದ್ದು, ಆದರೆ ಇನ್ಮುಂದೆ ಬರೋದು ಕಾಂತಾರ ಪ್ರೀಕ್ವೆಲ್ ಕಥೆ ಅಂತಲೇ ರಿಷಬ್‌ ಶೆಟ್ಟಿ ಹೇಳಿಕೊಂಡಿದ್ದರು.
  • ಕಾಂತಾರ-2 ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು, ಇದೇ ನವೆಂಬರ್-27 ರಂದು ಸಿನಿಮಾ ಮುಹೂರ್ತ ನಡೆಯಲಿದೆ.
  • ರಿಷಬ್ ಶೆಟ್ಟಿ ಎಲ್ಲ ತಯಾರಿ ನಡೆಸುವುದರ ಜೊತೆಗೆ, ತಮ್ಮ ಲುಕ್ ಅನ್ನು ಕೂಡ ಬದಲಿಸಿಕೊಂಡಿದ್ದಾರೆ.
ಕಾಂತಾರ-2  ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್! ಇದು ಸಿಕ್ವೆಲ್ ಅಲ್ಲ ಪ್ರೀಕ್ವೆಲ್... title=

Kantara Prequel Date Fixed: ಸ್ಯಾಂಡಲ್‌ವುಡ್‌ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ-2 ಚಿತ್ರದ ಹೊಸ ಸುದ್ದಿ ಹರಿದಾಡುತ್ತಿದ್ದು, ಇದು ಸಿನಿಮಾದ ಮುಹೂರ್ತಕ್ಕೆ ಸಂಬಂಧಿಸಿದ್ದೇ ಆಗಿದೆ. ಕಾಂತಾರ ರಿಲೀಸ್ ಆಗಿ ಹಿಟ್ ಆದ್ಮೇಲೆ ಎಲ್ಲೆಡೆ ಈ ಚಿತ್ರದ ಪಾರ್ಟ್-2 ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಅದೇ ಸರಿಯಾದ ಸಮಯಕ್ಕೆ ರಿಷಬ್ ಶೆಟ್ಟಿ ಒಂದು ಮಾಹಿತಿ ನೀಡಿದ್ದರು. ಇದು ಕಾಂತಾರ ಸಿನಿಮಾದ ಕಥೆ ಮುಂದುವರೆಯುತ್ತಿದ್ದು, ಆದರೆ ಅದು ಸಿಕ್ವೆಲ್ ಆಗಿ ಅಲ್ವೇ ಅಲ್ಲ. 

ಹೌದು.. ನಟ ರಿಷಬ್‌ ಶೆಟ್ಟಿ ಈ ಹಿಂದೆ, ಕಾಂತಾರ-2 ಸಿನಿಮಾ ಪ್ರೀಕ್ವೆಲ್ ಆಗಿಯೇ ಬರುತ್ತದೆ. ಇಲ್ಲಿವರೆಗೂ ನೀವೂ ನೋಡಿರೋದು ಪಾರ್ಟ್-2 ಸಿನಿಮಾನೆ ಆಗಿದೆ. ಆದರೆ ಇನ್ಮುಂದೆ ಬರೋದು ಕಾಂತಾರ ಪ್ರೀಕ್ವೆಲ್ ಕಥೆ ಅಂತಲೇ ಹೇಳಿಕೊಂಡಿದ್ದರು. ಸದ್ಯ ಕಾಂತಾರ ಪ್ರೀಕ್ವೆಲ್‌ ಚಿತ್ರದ ಕೆಲಸ ನಡೆಯುತ್ತಿದ್ದು, ಒಂದು ಇಡೀ ಟೀಮ್ ಸಂಶೋಧನೆ ಮಾಡಿ, ಅವಶ್ಯಕ ತಯಾರಿಯನ್ನೂ ನಡೆಸಿಕೊಂಡಿದೆ. ಈ ಸಂಶೋಧನಾ ತಂಡದ ಜೊತೆಗೆ  ರಿಷಬ್‌ ಶೆಟ್ಟಿ ಸಹ ಕುಳಿತು,  ತಾವು ಅಂದುಕೊಂಡಂತೆ ಆ ಕಥೆಗೆ ಒಂದು ರೂಪ ಕೊಟ್ಟಿದ್ದಾರೆ.

ಇದನ್ನು ಓದಿ: ಸಿಂಪಲ್‌ ಪ್ರೇಮ ಕಥೆಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟ್ರೇಲರ್‌ ಔಟ್!

ಇದೀಗ ರಿಷಬ್ ಶೆಟ್ಟಿಯ ಕಾಂತಾರ ಪ್ರೀಕ್ವೆಲ್ ಕಥೆಯ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡು, ಡೈಲಾಗ್ ವರ್ಶನ್‌ಗೆ ಬಂದಿದ್ದಾರೆ ಅನ್ನುವ ಸುದ್ದಿ ಕೂಡ ಅತಿ ಹೆಚ್ಚು ಹರಿದಾಡುತ್ತಿದೆ. ಕಾಂತಾರ-2 ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದ್ದು,  ಇದೇ  ನವೆಂಬರ್-27 ರಂದು ಸಿನಿಮಾ ಮುಹೂರ್ತ ನಡೆಯಲಿದೆ. ಮುಹೂರ್ತವನ್ನ ಹೊಂಬಾಳೆ ಸಂಸ್ಥೆ ದೊಡ್ಡಮಟ್ಟದಲ್ಲಿಯೇ ಯಾವ ತಯಾರಿ ಮಾಡಿಕೊಳ್ಳದೆ, ಸಿಂಪಲ್ ಆಗಿಯೇ ಒಂದು ದೇವಸ್ಥಾನದಲ್ಲಿಯೇ ಚಿತ್ರದ ಮುಹೂರ್ತ ಪ್ಲಾನ್ ಮಾಡಿದೆ. ಆ ಪ್ರಕಾರ ಇದೀಗ ಕಾಂತಾರ ಪ್ರೀಕ್ವೆಲ್ ಇದೇ ತಿಂಗಳಿನಿಂದಲೇ ಶುರು ಆಗುತ್ತಿದೆ ಅಂತಲೇ ಹೇಳಬಹುದು.

ರಿಷಬ್ ಶೆಟ್ಟಿ ಎಲ್ಲ ತಯಾರಿ ನಡೆಸುವುದರ ಜೊತೆಗೆ, ತಮ್ಮ ಲುಕ್ ಅನ್ನು ಕೂಡ ಬದಲಿಸಿಕೊಂಡಿದ್ದು, ಮೊನ್ನೆ ರಿಷಬ್ ಶೆಟ್ರು ಒಂದು ವಿಡಿಯೋ ಕಾಲ್ ಅಲ್ಲಿ ಬಂದಿ, ಎ.ಆರ್.ರೆಹಮಾನ್ ಜೊತೆಗೆ ಕಾಂತಾರ ಕುರಿತು ಮಾತನಾಡಿದ್ದರು. ಆಗಲೇ ಎಲ್ಲರೂ ರಿಷಬ್ ಹೊಸ ಲುಕ್‌ನ್ನು ಗಮನಿಸಿದ್ದು, ಇದರ ಹೊರತಾಗಿ ಈ ನಟ ಕಥೆಗೆ ಬೇಕಿರೋ ರೀತಿಯಲ್ಲಿ ಹಾರ್ಸ್ ರೈಡಿಂಗ್ ಕೂಡ ಕಲಿಯುತ್ತಿದ್ದಾರೆ. ಈ ಮೂಲಕ ರಿಷಬ್ ಶೆಟ್ರು ಪಂಜುರ್ಲಿ ದೈವದ ಕಥೆಯನ್ನ ಮತ್ತೊಮ್ಮೆ ಹೇಳುತ್ತಿದ್ದಾರೆ. ಆದರೆ ಅದು ಆರಂಭದಿಂದಲೇ ಅನ್ನುವ ಸುದ್ದಿಯಾಗಿ ಕಾಂತಾರ ಪ್ರೀಕ್ವೆಲ್ ಬಗ್ಗೆ ದಿನೇ ದಿನೇ ಕುತೂಹಲ ಜಾಸ್ತಿನೇ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News