ಪ್ರೇಕ್ಷಕರ ಬೇಡಿಕೆ ಮೇರೆಗೆ ಮತ್ತೊಮ್ಮೆ ತೆರೆಮೇಲೆ ‘ಕಾಂತಾರ’: ಫೆ.19ರಂದು ಸ್ಟಾರ್ ಸುವರ್ಣದಲ್ಲಿ ‘ದೈವ’ ದರ್ಶನ’

ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಹೊಂಗನಸು, ಸುವರ್ಣ ಸೂಪರ್ ಸ್ಟಾರ್ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ.

Written by - Bhavishya Shetty | Last Updated : Feb 18, 2023, 11:02 PM IST
    • 'ಕಾಂತಾರ' ಸಿನಿಮಾ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು
    • ಆ ಸಂದರ್ಭದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಸುವರ್ಣ ವಾಹಿನಿಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು
    • ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ
ಪ್ರೇಕ್ಷಕರ ಬೇಡಿಕೆ ಮೇರೆಗೆ ಮತ್ತೊಮ್ಮೆ ತೆರೆಮೇಲೆ ‘ಕಾಂತಾರ’: ಫೆ.19ರಂದು ಸ್ಟಾರ್ ಸುವರ್ಣದಲ್ಲಿ ‘ದೈವ’ ದರ್ಶನ’ title=
Kantara

2022ರಲ್ಲಿ ಇಡೀ ದೇಶವೇ  ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ, ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ ‘ಕಾಂತಾರ’ ಇದೀಗ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಕೋಮಾ ಸ್ಥಿತಿಯಲ್ಲಿ ಧ್ರುವ ಅಭಿಮಾನಿ : ಚಿಕಿತ್ಸೆಗೆ 5 ಲಕ್ಷ ಕೊಟ್ಟು ಕುಟುಂಬಕ್ಕೆ ಆಸರೆಯಾದ ನಟ..! 

ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ, ನಮ್ಮ ಲಚ್ಚಿ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಹೊಂಗನಸು, ಸುವರ್ಣ ಸೂಪರ್ ಸ್ಟಾರ್ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಾಹಿನಿಯಲ್ಲಿರುವ ಜೇಮ್ಸ್, ಲಕ್ಕಿಮ್ಯಾನ್, RRRನಂತಹ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ  'ಕಾಂತಾರ' ಎಂಬ ದಂತಕಥೆಯೊಂದು ಸೇರ್ಪಡೆಯಾಗಿದೆ. 'ಕಾಂತಾರ' ಸಿನಿಮಾ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾದಾಗ ಅತೀ  ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಸುವರ್ಣ ವಾಹಿನಿಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಇದೀಗ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ.

ಇದು ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲಿ ಆರಾಧಿಸಲ್ಪಡುವ ದೈವಾರಾಧನೆ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯನ್ನು ತೆರೆಮೇಲೆ ಅಚ್ಚುಕಟ್ಟಾಗಿ, ಕಿಂಚಿತ್ತೂ ಅಪಮಾನವಾಗದಂತೆ ತಂದಿರುವ ಸಿನಿಮಾವಾಗಿದೆ. ಹೈವೋಲ್ಟೇಜ್‌ ದೃಶ್ಯಗಳಿಂದ ಆರಂಭವಾಗುವ ಸಿನಿಮಾ ನೋಡ ನೋಡುತ್ತಿದ್ದಂತೆ ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Vaathi Film: ಬಾಲಿವುಡ್‌ ನ ಶೆಹಜಾದಾ ಸಿನಿಮಾ ಹಿಂದಿಕ್ಕಿದ ಧನುಷ್ ನಟನೆಯ ʼವಾತಿʼ ಚಿತ್ರ..!

ಇನ್ನು ಇದೇ ಭಾನುವಾರ ಅಂದರೆ ಫೆ.19ರಂದು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಡಿವೈನ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ‘ಕಾಂತಾರ’ ಸಂಜೆ 6 ಗಂಟೆಗೆ  ಪ್ರಸಾರವಾಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News