‘ಕಾಂತಾರ 2’ ಶೂಟಿಂಗ್ ಡೇಟ್ ಫಿಕ್ಸ್..! ಸಿನಿಮಾ ಬಜೆಟ್‌ ಬಗ್ಗೆ ರಿಷಬ್‌ ಶೆಟ್ಟಿ ಏನಂದ್ರು ಗೊತ್ತಾ?

Kantara 2 Updates: ಸ್ವತಃ ರಿಷಬ್‌ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ 2 ಶೂಟಿಂಗ್‌ ಎಂದಿನಿಂದ ಶುರುವಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. 

Written by - Savita M B | Last Updated : Sep 23, 2023, 11:40 AM IST
  • ಸ್ವತಃ ರಿಷಬ್‌ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ 2
  • ಶೂಟಿಂಗ್‌ ಎಂದಿನಿಂದ ಶುರುವಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು
  • ಸದ್ಯ ಕಾಂತಾರ 2 ಸಿನಿಮಾದ ಬಗ್ಗೆ ಮಾಹಿತಿ ದೊರಕಿದೆ
‘ಕಾಂತಾರ 2’ ಶೂಟಿಂಗ್ ಡೇಟ್ ಫಿಕ್ಸ್..! ಸಿನಿಮಾ ಬಜೆಟ್‌ ಬಗ್ಗೆ ರಿಷಬ್‌ ಶೆಟ್ಟಿ ಏನಂದ್ರು ಗೊತ್ತಾ?  title=

Kantara 2: ಕಾಂತಾರ ಸಿನಿಮಾ ಮೂಲಕ ಅಚ್ಚಳಿಯದ ಗುರುತಾಗಿ ಉಳಿದಿರುವ ರಿಷಬ್‌ ಶೆಟ್ಟಿ ಸದ್ಯ ‘ಕಾಂತಾರ 2’ ಸಿನಿಮಾ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ..

ರಿಷಬ್‌ ಶೆಟ್ಟಿ ಕನ್ನಡದಲ್ಲಿ ಒಂದೆರಡು ಸಿನಿಮಾಗಳನ್ನು ಮಾಡಿದ್ದರೂ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು ಕಾಂತಾರ ಸಿನಿಮಾ. ಅಲ್ಲದೇ ಇದೇ ಸಿನಿಮಾದಿಂದ ರಿಷಬ್‌ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಈ ಭರವಸೆಯೊಂದಿಗೆ ರಿಷಬ್‌ ಮತ್ತೊಂದು ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ ಅದೇ ‘ಕಾಂತಾರ 2’.

‘ಕಾಂತಾರ 2’ ಸಿನಿಮಾ ಬಗ್ಗೆ ಮಾತನಾಡಿದ ರಿಷಬ್‌ ಶೆಟ್ಟಿ ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚಿತ್ರೀಕರಣಕ್ಕೆ ಹೋಗಲಿದ್ದೇವೆ..ಸದ್ಯ ನಾನು ಸ್ಕ್ರಿಪ್ಟ್ ಮತ್ತು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ" ಎಂದಿದ್ದಾರೆ. 

ಇದನ್ನೂ ಓದಿ-ʼಆ ಕರಾಳ ರಾತ್ರಿʼಯ ಹುಡುಗಿ ಬೆಳದಿಂಗಳ ಬಾಲೆಯಾಗಿ ಮಿಂಚಿಂಗ್‌

ಇನ್ನು ಈ ಸಿನಿಮಾಗಾಗಿ ರಿಷಬ್‌ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಕಾಂತಾರ ಸಿನಿಮಾಗಿಂತ ‘ಕಾಂತಾರ 2’ ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಹೌದು ಕಾಂತಾರ ಸಿನಿಮಾ ಬರೀ ರಿಷಬ್‌ ಶೆಟ್ಟಿ ಅವರ ಊರಿನಲ್ಲಿ ಮಾತ್ರ ಶೂಟಿಂಗ್‌ ನಡೆದಿತ್ತು. ಆದರೆ ಈ ‘ಕಾಂತಾರ 2’ ಚಿತ್ರದಲ್ಲಿ ಅವರ ಊರಿನ ಜೊತೆಗೆ ನಾನಾ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಕೂಡ ನಡೀತಾಯಿದೆ ಎನ್ನಲಾಗುತ್ತಿದೆ. 

ಇನ್ನು ಇದೇ ವೇಳೆ ರಿಷಬ್‌ ಸಿನಿಮಾದ ಬಜೆಟ್ ಕುರಿತಾಗಿಯೂ ಮಾತನಾಡಿದ್ದು, "ಕಥೆಗೆ ತಕ್ಕಂತೆ ಬಜೆಟ್ ಇರಲಿದೆ" ಎಂದಿದ್ದಾರೆ. ಇದಲ್ಲದೇ ಕಾಂತಾರ ಸಿನಿಮಾದ ಬಜೆಟ್ ಗಿಂತ ಹೆಚ್ಚು ಬಜೆಟ್‌ನಲ್ಲಿ ತಯಾರಾಗುವ ಸಿನಿಮಾ ಇದಾಗಲಿದೆ ಎಂದು ಈ ಹಿಂದೆ ರಾಜ್ ಬಿ ಶೆಟ್ಟಿ ಬಾಯ್ಬಿಟ್ಟಿದ್ದರು. ಅಲ್ಲದೇ ಇದು ನೂರು ಕೋಟಿ ಬೇಡುವಂತಹ ಸಿನಿಮಾ ಎಂದು ಹೇಳಿದ್ದರು. 

ಇದನ್ನೂ ಓದಿ-ಬಿಗ್ ಬಾಸ್ ಕನ್ನಡ 10 ಎಲ್ಲಿ? ಎಂದಿನಿಂದ? ಯಾವ ಸಮಯಕ್ಕೆ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News