ರಾಜಿ ಪ್ರೀತಿಗೆ ಇವಳೇ ಆಸ್ತಿ...!

Written by - CHARITHA PATEL | Edited by - Manjunath N | Last Updated : Apr 18, 2022, 07:56 PM IST
  • ಸದಾ ತಂದೆಯ ಆಸ್ತಿ ಕಬಳಿಸುವ ಹೊಂಚು ಹಾಕ್ತಿರುತ್ತಾನೆ.
  • ಉದಯ್ ಪತ್ನಿ ದೇವಕಿ ಶಾಂಭವಿ ಕೇಡಿತನದಲ್ಲಿ ಭಾಗಿಯಾಗಿದ್ರೂ ತನ್ನ ಮಂದ ಬುದ್ಧಿಯಿಂದಾಗಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾಳೆ.
  • ಹೀಗಾಗಿ ದೇವಕಿ ಇದ್ದ ಕಡೆ ಕಾಮಿಡಿ ಇರುತ್ತೆ.
ರಾಜಿ ಪ್ರೀತಿಗೆ ಇವಳೇ ಆಸ್ತಿ...! title=

ರಾಜಿ...ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ ಹೊಸ ಧಾರಾವಾಹಿ.. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಧಾರಾವಾಹಿ.. ಉತ್ತಮ ಕಥೆ ಮತ್ತು ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

ತಂದೆ, ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳೆಸಿರುತ್ತಾರೆ.ಭಾಸ್ಕರ್ ಶಾನುಭೋಗ ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ ಉಳಿದವರಿಗೆ ರಾಜಿ ಮನೆ ಕೆಲಸದಾಕೆ ಮಾತ್ರ.ಭಾಸ್ಕರ್ ಶಾನುಭೋಗರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳ ಪೈಕಿ ಮೊದಲನೆಯವನು ರವೀಶ್. ಮೃದು ಸ್ವಭಾವದ ಇವನಿಗೆ ತನ್ನ ಹೆಂಡತಿ ಶಾಂಭವಿ ಹೇಳಿದ್ದೇ ವೇದವಾಕ್ಯ, ಇನ್ನು 2ನೇ ಮಗ ಉದಯ್ ಶಾಂಭವಿ ಅತ್ತಿಗೆ ರೀತಿಯೇ ಎಂದು ಹೇಳಬಹುದು.

ಸದಾ ತಂದೆಯ ಆಸ್ತಿ ಕಬಳಿಸುವ ಹೊಂಚು ಹಾಕ್ತಿರುತ್ತಾನೆ.ಉದಯ್ ಪತ್ನಿ ದೇವಕಿ ಶಾಂಭವಿ ಕೇಡಿತನದಲ್ಲಿ ಭಾಗಿಯಾಗಿದ್ರೂ ತನ್ನ ಮಂದ ಬುದ್ಧಿಯಿಂದಾಗಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾಳೆ.ಹೀಗಾಗಿ ದೇವಕಿ ಇದ್ದ ಕಡೆ ಕಾಮಿಡಿ ಇರುತ್ತೆ.

ಇದನ್ನೂ ಓದಿ: ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಗೆ ಎರಡನೇ ಸ್ಥಾನ..! ಫ್ರೀ ಟಿಕೆಟ್ ಘೋಷಿಸಿದ ಈ ಕಂಪನಿ..!

ಭಾಸ್ಕರ್ ಶಾನುಭೋಗರ ಮಗಳು ರೇಣು ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ. ರೇಣು ಪತಿ ಮನೋಜ್ ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ ಒಳ್ಳೆಯ ಮನಸಿನವನಾಗಿರುತ್ತಾನೆ.ಸಾನ್ವಿ, ವಿರಾಟ್ ಮತ್ತು ಲಚ್ಚಜ್ಜಿಯ ಪಾತ್ರಗಳು, ʻರಾಜಿ' ಧಾರಾವಾಹಿಯ ಕತೆಯ ತಿರುವಿಗೆ ಕಾರಣವಾಗುತ್ತವೆ.

ಭಾಸ್ಕರ್ ಶಾನುಭೋಗರ ಕಿರಿಯ ಮಗ ಕರ್ಣ ಲಂಡನ್ನಿಗೆ ತನ್ನ ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾನೆ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು. ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗುತ್ತಾ ಅನ್ನೋದೇ ʻರಾಜಿ' ಧಾರಾವಾಹಿಯ ಕಥಾಹಂದರ.

ಇದನ್ನೂ ಓದಿ: KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!

ರಾಜಿಯ ಪಾತ್ರದಲ್ಲಿ ಸೌಂದರ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕಾರ್ತಿಕ್ ಕರ್ಣನ ಪಾತ್ರದಲ್ಲಿದ್ದಾರೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಮತ್ತು ವೈಜಯಂತಿ ಕಾಶಿ, ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗರ ಪಾತ್ರವಹಿಸಿದ್ದಾರೆ. ನಿನಾಸಂ ಅಶ್ವಥ್ ರಾಜಿಯ ತಂದೆ ವೀರೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ನಧಾಫ್ , ರಜನಿ, ಛಾಯಾ, ದಿನೇಶ್, ಸುಧಾ ಹೆಗ್ಡೆ, ಶಿಲ್ಪಾ, ಅಮೃತಾ ನಾಯ್ಕ್, ವಿನಾಯಕ ಮತ್ತು ಸಂದೀಪ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ʻರಾಜಿ'ಯ ಶೀರ್ಷಿಕೆ ಗೀತೆ ಸುಮಧುರವಾಗಿದ್ದು, ಸಾಮಾಜಿಕ ತಾಣದಲ್ಲಿ ಬಹಳಷ್ಟು ಸದ್ದು ಮಾಡಿದೆ.

ಶಾನುಭೋಗ ಮನೆತನದ ಪ್ರೀತಿಯ ಆಸ್ತಿ ʻರಾಜಿ', ಏಪ್ರಿಲ್ 18ರಿಂದ ಸಂಜೆ 7.30ಕ್ಕೆ ಸ್ಟಾರ್ ಸುವರ್ಣದಲ್ಲಿ ಆರಂಭವಾಗಲಿದೆ.

Trending News