Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..!

ಸ್ಪರ್ಧಿಯೊಬ್ಬರ ಡ್ಯಾನ್ಸ್ ಪ್ರದರ್ಶನಕ್ಕೆ ಮನಸೋತ ಕನ್ನಡದ ನಟಿಯೊಬ್ಬರು ಮುತ್ತು ಕೊಟ್ಟು ಕೆನ್ನೆ ಕಚ್ಚಿದ್ದಾರೆ.

Written by - Puttaraj K Alur | Last Updated : Sep 19, 2021, 08:01 AM IST
  • ‘ಧೀ ಚಾಂಪಿಯನ್ಸ್’ ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಗೆ ಕಿಸ್
  • ಸ್ಪರ್ಧಿಯ ಪ್ರದರ್ಶನಕ್ಕೆ ಮನಸೋತು ಕೆನ್ನೆ ಕಚ್ಚಿದ ಕನ್ನಡ ನಟಿ ಶಮ್ನಾ ಕಾಸಿಂ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಕೆನ್ನೆ ಕಚ್ಚಿರುವ ವಿಡಿಯೋ
Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..! title=
ಸ್ಪರ್ಧಿಯ ಕೆನ್ನೆ ಕಚ್ಚಿದ ನಟಿ ಶಮ್ನಾ ಕಾಸಿಂ (Photo Courtesy: Twitter/@chettyrajubhai)

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋ(Reality show)ಗಳ ಅಬ್ಬರ ಜೋರಾಗಿದೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ವಿವಿಧ ರಿಯಾಲಿಟಿ ಶೋಗಳು ನಡೆಯುತ್ತಿವೆ. ಡ್ಯಾನ್ಸ್, ಸಿಂಗಿಂಗ್, ಕ್ವೀಜ್, ಬಿಗ್ ಬಾಸ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ರಿಯಾಲಿಟಿ ಶೋ(Reality show)ನಲ್ಲಿ ಸ್ಪರ್ಧಿಗಳಿಗೆ ಮಾತ್ರವಲ್ಲ ಚಾನೆಲ್ ಗಳಿಗೂ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ. ಪ್ರೇಕ್ಷಕರನ್ನು ತಮ್ಮತ್ತ ಸೆಳೆಯಲು ವಿಭಿನ್ನ ವಿಷಯಗಳ  ಶೋಗಳನ್ನು ನಡೆಸಲಾಗುತ್ತಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳು ಅನೇಕ ವಾಹಿನಿಗಳು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತಿವೆ. ರಿಯಾಲಿಟಿ ಶೋನಲ್ಲಿ ಅನೇಕ ರೀತಿಯ ಗಿಮಿಕ್ ಮಾಡುವ ಮೂಲಕ ಕೆಲವು ವಾಹಿನಿಗಳು TRP ಹೆಚ್ಚಿಸಿಕೊಳ್ಳಲು ನೋಡುತ್ತವೆ.  

ಇದನ್ನೂ ಓದಿ: Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ

ಮನರಂಜನಾ ವಾಹಿನಿಗಳ ಮೂಲಕ ಆದಾಯಕ್ಕೆ TRP ಯೇ ಮುಖ್ಯ ಮಾನದಂಡ. ಹೀಗಾಗಿ ಅನೇಕ ಬಾರಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಮತ್ತು ಕಾರ್ಯಕ್ರಮದ ತೀರ್ಪುಗಾರರ ಮಧ್ಯೆ ಚಿತ್ರ-ವಿಚಿತ್ರ ಪ್ರಸಂಗಗಳು ಜರುಗುತ್ತವೆ. ಅಂತಹದ್ದೇ ಒಂದು ಘಟನೆಯಲ್ಲಿ ಕನ್ನಡದ ನಟಿಯೊಬ್ಬರು ಸ್ಪರ್ಧಿಯೊಬ್ಬರಿಗೆ ಮುತ್ತು ಕೊಟ್ಟಿದ್ದು, ಕೆನ್ನೆ ಕಚ್ಚಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ.  

ಹೌದು, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಶಮ್ನಾ ಕಾಸಿಂ(Shamna Kasim)ಅವರು ಖಾಸಗಿ ಚಾನೆಲ್ ವೊಂದರಲ್ಲಿ ಪ್ರಸಾರವಾಗುತ್ತಿರುವ ‘ಧೀ ಚಾಂಪಿಯನ್ಸ್'(Dhee Champions)ಹೆಸರಿನ ರಿಯಾಲಿಟಿ ಶೋನಲ್ಲಿ ತೀರ್ಪುಗಾರ್ತಿಯಾಗಿ ಪಾಲ್ಗೊಂಡಿದ್ದಾರೆ. ಈ ಶೋನಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಯೊಬ್ಬರಿಗೆ ನಟಿ ಪ್ರಶಂಸೆಗಳ ಸುರಿಮಳೆ ಸುರಿಸಿ, ವೇದಿಕೆಯ ಮೇಲೆಯೆ ಆತನಿಗೆ ಕಿಸ್ ಮಾಡಿದ್ದಾರೆ. ಅಲ್ಲದೆ ಸ್ಪರ್ಧಿಯ ಕೆನ್ನೆ ಕಚ್ಚುವ ಮೂಲಕ ನೆರೆದಿದ್ದವರು ಹುಬ್ಬೇರುವಂತೆ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸೋದರಸಂಬಂಧಿ ಮದುವೆಯಲ್ಲಿ ಪತಿ ಜೊತೆ ಸಖತ್ ಡ್ಯಾನ್ಸ್ ಮಾಡಿದ ಐಶ್ವರ್ಯ ರೈ..!

ಶಮ್ನಾ ಕಾಸಿಂ(Shamna Kasim) 2019ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ‘ಜೋಶ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದ್ರೆ ಅವರಿಗೆ ಚಪ್ಪಾಳೆ, ಹೊಗಳಿಕೆ, ಗಿಫ್ಟ್ ನೀಡಲಾಗುತ್ತದೆ. ಆದರೆ ನಟಿ ಶಿಮ್ನಾ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ವೇದಿಕೆಯ ಮೇಲೆಯೇ ಸ್ಪರ್ಧಿಯ ಕೆನ್ನೆ ಕಚ್ಚಿದ್ದಾರೆ.

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸ್ಪರ್ಧಿಗೆ ಕಿಸ್ ಮಾಡಿ ಆತನ ಕೆನ್ನೆ ಕಚ್ಚಿರುವ ನಟಿ ಶಮ್ನಾ ಕಾಸಿಂ ನಡವಳಿಕೆಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಒಬ್ಬ ಜಡ್ಜ್ ಆಗಿ ಸ್ಪರ್ಧಿಗೆ ಉತ್ತಮ ತೀರ್ಪು ನೀಡಬೇಕೆ ಹೊರತು ಆತನಿಗೆ ಪಪ್ಪಿ ನೀಡುವುದಲ್ಲವೆಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ನಟಿ ಕುರಿತು ಪೋಲಿ ಕಾಮೆಂಟ್ ಕೂಡ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News