VIDEO: PM Modi ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ Kangana Ranaut ಹೇಳಿದ್ದೇನು?

'ಗೌರವಾನ್ವಿತ ಪ್ರಧಾನಿ ಅವರಿಗೆ, ನಿಮ್ಮ ಹುಟ್ಟುಹಬ್ಬದ ಅಭಿನಂದನೆಗಳು ಎಂದು ಕಂಗನಾ ರನೌತ್ (Kangana Ranaut) ವಿಡಿಯೋ ಟ್ವೀಟ್ ಮಾಡಿದ್ದಾರೆ. ನಿಮ್ಮೊಂದಿಗೆ ಮಾತನಾಡಲು ನನಗೆ ಎಂದಿಗೂ ಅವಕಾಶ ಸಿಕ್ಕಿಲ್ಲ ... '

Last Updated : Sep 17, 2020, 03:26 PM IST
  • ಪ್ರಧಾನಿ ಮೋದಿ ಇಂದು ತಮ್ಮ 70 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
  • ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿದ ಕಂಗನಾ ರಣಾವತ್
  • ನಿಮ್ಮನ್ನು ಪ್ರಧಾನಿಗಳಾಗಿ ಪಡೆದ ನಾವೆಲ್ಲರೂ ಭಾಗ್ಯಶಾಲಿಗಳು ಎಂದ ಕಂಗನಾ.
VIDEO: PM Modi ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ Kangana Ranaut ಹೇಳಿದ್ದೇನು? title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತಮ್ಮ 70 ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಹಿರಾಬೆನ್ ಮತ್ತು ದಾಮೋದರ್ದಾಸ್ ಮುಲ್ಚಂದ್ ಮೋದಿಯವರಿಗೆ ಜನಿಸಿದರು. ನರೇಂದ್ರ ಮೋದಿ ಬಾಲ್ಯದಿಂದಲೂ ಸಂಘರ್ಷ ನಡೆಸಿದ್ದಾರೆ. ಅವರ ಹೋರಾಟಗಳ ಫಲವೇ ಇಂದು ಅವರು ವಿಶ್ವದಾದ್ಯಂತ ಪ್ರಭಾವಿ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಪ್ರಪಂಚದಾದ್ಯಂತ ಭಾರತದ ಪ್ರಾಬಲ್ಯವನ್ನು ಎತ್ತಿ ಹಿಡಿದಿದ್ದಾರೆ. ಇದೆ ವೇಳೆ ಅವರ ಹುಟ್ಟುಹಬ್ಬದ  ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ಪಿಎಂ ಮೋದಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ವಿಡಿಯೋ ಹಂಚಿಕೊಂಡ ಕಂಗನಾ ಹೇಳಿದ್ದೇನು?
ಈ ಸಂದರ್ಭದಲ್ಲಿ ವಿಡಿಯೋ ಹಂಚಿಕೊಂಡಿರುವ ಕಂಗನಾ, " ಗೌರವಾನ್ವಿತ ಪ್ರಧಾನಿಗಳೇ ನಿಮಗೆ ನಿಮ್ಮ ಹುಟ್ಟುಹಬ್ಬದ ಅನೇಕ ಅಭಿನಂದನೆಗಳು. ನಿಮ್ಮೊಂದಿಗೆ ಸಂವಾದ ಸಾಧಿಸುವ ಅವಕಾಶ ನನಗೆ ಎಂದಿಗೂ ಸಿಕ್ಕಿಲ್ಲ. ಕೇವಲ ಫೋಟೋ ಸೆಶನ್ ಗಾಗಿ ಮಾತ್ರ ನಾವು ಭೇಟಿಯಾಗಿದ್ದೇವೆ. ಆದರೆ, ಈ ದೇಶ ನಿಮ್ಮನ್ನು ನಿಮ್ಮನ್ನು ತುಂಬಾ ಮೆಚ್ಚುತ್ತದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಿಮಗೆ ಅನಾನುಕೂಲ ಎನಿಸುವ ಸಾಕಷ್ಟು ಧ್ವನಿಗಳಿವೆ ಎಂಬುದು ನನಗೆ ತಿಳಿದಿದೆ. ಯಾರಿಗೂ ಕೂಡ ಇಷ್ಟೊಂದು ಅಪಮಾನಾಸ್ಪದ ಹೇಳಿಕೆಗಳನ್ನು ನೀಡಲಾಗುವುದಿಲ್ಲ. ಯಾವುದೇ ಓರ್ವ ಪ್ರಧಾನಿಗೆ ಇಷ್ಟೊಂದು ನಿಂದನೀಯ ಹಾಗೂ ಅಭದ್ರ ಭಾಷೆಯನ್ನೂ ಬಳಸಿರಲಿಕ್ಕಿಲ್ಲ. ಆದರೆ, ಅವರ ಸಂಖ್ಯೆ ತೀರಾ ಕಮ್ಮಿ ಎಂಬುದು ನಿಮಗೂ ತಿಳಿದಿದೆ. ಕೇವಲ ಅದೊಂದು ಪ್ರೊಪಗೇಂಡಾ ಮಾತ್ರ' ಎಂದಿದ್ದಾರೆ.

Also Read- ಕೇಂದ್ರ ಗೃಹ ಸಚಿವಾಲಯದಿಂದ Kangana Ranautಗೆ Y+ ಶ್ರೇಣಿ ಭದ್ರತೆ

'ಆದರೆ, ಓರ್ವ ಸಾಮಾನ್ಯ ಭಾರತೀಯನ ಭಾವನೆಗಳನ್ನು ನಾನು ಗಮನಿಸಿದ್ದೇನೆ ಮತ್ತು ನಿಮಗೆ ಸಿಕ್ಕಿರುವಷ್ಟು ಸನ್ಮಾನ, ಭಕ್ತಿ ಹಾಗೂ ಪ್ರೀತಿ ಇತರ ಯಾವುದೇ ಪ್ರಧಾನಿಗೆ ಇದಕ್ಕೂ ಮೊದಲು ಸಿಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಈ ಕೋಟ್ಯಾಂತರ ಸಾಮಾನ್ಯ ನಾಗರಿಕರು ಸಾಮಾಜಿಕ ಮಾಧ್ಯಮಗಳ ಮೇಲೆ ಇಲ್ಲ. ಅವರೆಲ್ಲರೂ ನಿಮ್ಮ ದೀರ್ಘಾಯುಷ್ಯಕಾಗಿ ಪ್ರಾರ್ಥಿಸುತ್ತಿದ್ದಾರೆ. ಅವರ ಧ್ವನಿ ನಿಮ್ಮ ಬಳಿಗೆ ತಲುಪುವುದಿಲ್ಲ. ನಿಮ್ಮಂತಹ ಪ್ರಧಾನಿ ಮಂತ್ರಿಯನ್ನು ಪಡೆದ ನಾವೆಲ್ಲರೂ ಭಾಗ್ಯಶಾಲಿಗಳಾಗಿದ್ದೇವೆ. ಜೈ ಹಿಂದ್ ' ಏನೂ ಕೂಡ ಕಂಗನಾ ಬರೆದಿದ್ದಾರೆ.

Trending News