Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೋವಿಡ್ ಪಾಸಿಟಿವ್..!

ಈ ಕುರಿತು ಇನ್‌ಸ್ಟಾಗ್ರಾಮ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಂಗನಾ

Last Updated : May 8, 2021, 11:56 AM IST
  • ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೊರೋನಾ ಪಾಸಿಟಿವ್
  • ಈ ಕುರಿತು ಇನ್‌ಸ್ಟಾಗ್ರಾಮ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಂಗನಾ
  • ಪ್ರಸ್ತುತ ದೇಶದಲ್ಲಿ ಕರೋನವೈರಸ್ ಎರಡನೇ ಅಲೆಯುವು ಜೋರಾಗಿದೆ.
Kangana Ranaut : ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕೋವಿಡ್ ಪಾಸಿಟಿವ್..! title=

ನವದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ಗೆ ಮಹಾಮಾರಿ ಕೊರೋನಾ ಪಾಸಿಟಿವ್ ಬಂದಿದೆ.

ಈ ಕುರಿತು ಇನ್‌ಸ್ಟಾಗ್ರಾಮ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಂಗನಾ(Kangana Ranaut), ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಸುಡುವ ಸಂವೇದನೆಯಿಂದ ನಾನು ದಣಿದಿದ್ದೇನೆ ಮತ್ತು ದುರ್ಬಲವಾಗಿದ್ದೇನೆ, ಹಿಮಾಚಲಕ್ಕೆ ಹೋಗಬೇಕೆಂದು ಆಶಿಸುತ್ತಿದ್ದೆ, ಆದ್ದರಿಂದ ನಿನ್ನೆ ನನ್ನಗೆ ಕೊರೋನಾ ಪರೀಕ್ಷೆ ಮಾಡಲಾಯಿತು. ಇಂದು ರಿಪೋರ್ಟ್ ನಲ್ಲಿ ನನಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಈಗ ನಾನು ಹೋಂ ಕ್ವಾರಂಟೈನ್ ಆಗಿದ್ದೇನೆ.

ಇದನ್ನೂ ಓದಿ : Bollywood: ಸಿನಿ ಕಾರ್ಮಿಕರ ಸಹಾಯಕ್ಕೆ ಧಾವಿಸಿದ 'ಭಾಯಿಜಾನ್' Salman Khan, 25 ಸಾವಿರ ಕಾರ್ಮಿಕರ ಖಾತೆಗೆ ನೇರ ಹಣ ವರ್ಗಾವಣೆ

ಈ ವೈರಸ್ ನನ್ನ ದೇಹದಲ್ಲಿ ಪ್ರವೇಶಿಸಿದೆ ಎಂದು ನನಗೆ ತಿಳಿದಿರಲಿಲ್ಲ, ಈಗ ನಾನು ಅದರ ವಿರುದ್ಧ ಹೋರಾಡುತ್ತಾನ. ಜನಗಳೇ ಯಾವುದೇ ಕಾರಣಕ್ಕೂ ಈ ಕೊರೋನಾ(Corona)ಗೆ ಹೆದರಿಕೊಳ್ಳಬೇಡಿ, ನೀವು ಹೆದರಿದರೆ ಅದು ನಿಮ್ಮನ್ನು ಹೆಚ್ಚು ಹೆದರಿಸುತ್ತದೆ, ಬನ್ನಿ ಈ ಕೋವಿಡ್ -19 ವಿರುದ್ಧ ಹೋರಾಡೋಣ, ಹರ್ ಹರ್ ಮಹಾದೇವ್ wನ್ದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Shankanada Aravind : ಕನ್ನಡದ ಖ್ಯಾತ ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ!

ಪ್ರಸ್ತುತ ದೇಶದಲ್ಲಿ ಕರೋನವೈರಸ್(Coronavirus) ಎರಡನೇ ಅಲೆಯುವು ಜೋರಾಗಿದೆ. ಇದು ಸಿನಿ ಲೋಕದ ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್, ಭೂಮಿ ಪೆಡ್ನೇಕರ್, ಕತ್ರಿನಾ ಕೈಫ್, ಸೋನು ಸೂದ್ ಮತ್ತು ಅರ್ಜುನ್ ರಾಂಪಾಲ್ ಹೀಗೆ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಆದ್ರೆ ಸಧ್ಯ ಅವರೆಲ್ಲ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. 

ಇದನ್ನೂ ಓದಿ : #FightAgainstCorona : ಕರೋನಾ ವಿರುದ್ಧ ಹೊಸ ಅಭಿಯಾನ ಆರಂಭಿಸಿದ ವಿರುಷ್ಕಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News