ತಂದೆಯ ಕನಸನ್ನು ಈಡೇರಿಸಲು ಚಿತ್ರರಂಗಕ್ಕೆ ಬಂದ ಕಮಲ್ ಹಾಸನ್!

ಕಮಲ್ ಹಾಸನ್(Kamala Haasan) 6 ನೇ ವಯಸ್ಸಿನಲ್ಲಿ ಅಭಿನಯಿಸಿದ ತಮ್ಮ ಮೊದಲ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.  

Last Updated : Nov 7, 2019, 09:28 AM IST
ತಂದೆಯ ಕನಸನ್ನು ಈಡೇರಿಸಲು ಚಿತ್ರರಂಗಕ್ಕೆ ಬಂದ ಕಮಲ್ ಹಾಸನ್! title=

ಬೆಂಗಳೂರು: ಖ್ಯಾತ ಚಲನಚಿತ್ರ ನಟ, ಕಥೆಗಾರ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ಈಗ ಪ್ರಸಿದ್ಧ ರಾಜಕಾರಣಿ ಕಮಲ್ ಹಾಸನ್(Kamala Haasan) ಅವರು ಪ್ರತಿ ಕ್ಷೇತ್ರದಲ್ಲೂ ಯಶಸ್ವಿಯಾಗುವ ಕೆಲವೇ ಕೆಲವು ಅದೃಷ್ಟಶಾಲಿ ಜನರಲ್ಲಿ ಒಬ್ಬರು. ಇಂದು ಕಮಲ್ ಹಾಸನ್ ಅವರ 65 ನೇ ಜನ್ಮದಿನ. ಈ ಸಂದರ್ಭದಲ್ಲಿ, ಹಿಂದಿ ಚಿತ್ರರಂಗಕ್ಕೆ ಈ ನಕ್ಷತ್ರ ಹೇಗೆ ಸಿಕ್ಕಿತು ಮತ್ತು ಯಾರೊಂದಿಗೆ ಅವರು ಪದಾರ್ಪಣೆ ಮಾಡಿದರು ಎಂಬುದನ್ನು ತಿಳಿಯಿರಿ.

ಕಮಲ್ ಹಾಸನ್(Kamala Haasan) ಅವರು ಕಂಡ ಕನಸನ್ನು ಈಡೇರಿಸಿದ್ದಾರೆಂದು ಹೇಳುದರೆ ತಪ್ಪಾಗಲಾರದು. ಆದರೆ ದೇಶದ ಅತ್ಯಂತ ಪ್ರಸಿದ್ಧ ನಟರಲ್ಲಿ ಒಬ್ಬರಾದ ಕಮಲ್ ಹಾಸನ್ ಅವರು ನಟನಾಗಬೇಕೆಂಬ ಕನಸು ಕಂಡಿದ್ದು ಕಮಲ್ ಅಲ್ಲ ಅವರ ತಂದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಹಾಗಾಗಿಯೇ ಕಮಲ್ ಕೇವಲ 6 ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದರು.

6 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಪ್ರಶಸ್ತಿ:
ಕಮಲ್ ಹಾಸನ್ 6 ವರ್ಷದ ಬಾಲ ಕಲಾವಿದರಾಗಿ, ಎ.ಡಿ. ಭೀಮ್ಸಿಂಗ್ ನಿರ್ದೇಶನದ 'ಕಲತ್ತೂರು ಕಣ್ಣಮ್ಮ' ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟರು. ಇದು ಆಗಸ್ಟ್ 12, 1959 ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಹಿರಿಯ ತಮಿಳು ನಟ ಜೆಮಿನಿ ಗಣೇಶನ್ ಸೂಪರ್ ಸ್ಟಾರ್ ರೇಖಾ ಅವರೊಂದಿಗೆ ನಟಿಸಲು ಅವರಿಗೆ ಅವಕಾಶ ಸಿಕ್ಕಿತು. ಈ ಚಿತ್ರಕ್ಕಾಗಿ ಕಮಲ್ ಹಾಸನ್ ತಮ್ಮ 6 ನೇ ವಯಸ್ಸಿನಲ್ಲಿಯೇ ಅತ್ಯುತ್ತಮ ಬಾಲ ಕಲಾವಿದರಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈ ಚಿತ್ರದ ಯಶಸ್ಸಿನ ನಂತರ, ಶಿವಾಜಿ ಗಣೇಶನ್ ಮತ್ತು ಎಂ.ಜಿ.ರಾಮಚಂದ್ರನ್ ಅವರಂತಹ ಚಲನಚಿತ್ರ ನಿರ್ಮಾಪಕರೊಂದಿಗೆ ಬಾಲ ಕಲಾವಿದರಾಗಿ ಇತರ ಐದು ತಮಿಳು ಚಿತ್ರಗಳಲ್ಲಿ ನಟಿಸಿದರು.

ಇವು ಸ್ಮರಣೀಯ ಚಲನಚಿತ್ರಗಳು;
ಕಮಲ್ ಹಾಸನ್ ಹಲವು ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಮಲ್ ಹಾಸನ್ ಅವರ ಪ್ರತಿಯೊಂದು ಚಿತ್ರವೂ ಅವರ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದರೂ, ಅವರ ಕೆಲವು ಚಲನಚಿತ್ರಗಳು ಇಂದಿಗೂ ಇಡೀ ಭಾರತೀಯ ಸಿನೆಮಾ ಉದ್ಯಮದ ಮುಂದೆ ಮೈಲಿಗಲ್ಲುಗಳಾಗಿ ನಿಂತಿವೆ. ಅದರಲ್ಲಿ ದೇಶದ ಅತ್ಯಂತ ಜನಪ್ರಿಯ ಮೂಕ ಚಿತ್ರ 'ಪುಷ್ಪಕ್', 'ಏಕ್ ದುಜೆ ಕೆ ಲಿಯೆ',  'ಸದ್ಮಾ', 'ಆಂಟಿ 420', 'ಇಂಡಿಯನ್' ಇವು ಕಮಲ್ ಅಭಿನಯದ ಅವಿಸ್ಮರಣೀಯ ಚಿತ್ರಗಳು.
 

Trending News