Kaatera: 'ಕಾಟೇರನಿ'ಗೆ ದಾರಿಬಿಡಿ...! ಡಿ ಬಾಸ್‌ ಅಭಿಮಾನಿಗಳು ಕಾಯುತ್ತಿರುವ ಆ ಟೈಮ್ ಬಂದೇಬಿಡ್ತು

Katerra : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಾಕಿದೆ. ಇನ್ನು ಸಿನಿಮಾ ದಸರಾ ಹಬ್ಬಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಇದೀಗ ಈ ಸಿನಿಮಾದ ಮತ್ತೊಂದು ಬಿಗ್‌ ಅಪ್ಡೇಟ್‌ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಏನದು ಅಂತೀರಾ ಮುಂದೆ ಓದಿ...  

Written by - Savita M B | Last Updated : Sep 5, 2023, 11:53 AM IST
  • ಇತ್ತೀಚೆಗೆ ನಟ ದರ್ಶನ್‌ ಹಾಗೂ ಸುದೀಪ್‌ ಅವರು ಒಂದಾಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು
  • ಇದು ಎಷ್ಟೋ ಅಭಿಮಾನಿಗಳ ಆಸೆ.
  • ಇದೀಗ ದರ್ಶನ್‌ ಮತ್ತೆ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Kaatera: 'ಕಾಟೇರನಿ'ಗೆ ದಾರಿಬಿಡಿ...! ಡಿ ಬಾಸ್‌ ಅಭಿಮಾನಿಗಳು ಕಾಯುತ್ತಿರುವ ಆ ಟೈಮ್ ಬಂದೇಬಿಡ್ತು title=

Good News for D Boss Fans : ಇತ್ತೀಚೆಗೆ ನಟ ದರ್ಶನ್‌ ಹಾಗೂ ಸುದೀಪ್‌ ಅವರು ಒಂದಾಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದು ಎಷ್ಟೋ ಅಭಿಮಾನಿಗಳ ಆಸೆ. ಇದೆಲ್ಲವನ್ನು ಹೊರತುಪಡಿಸಿ ಇದೀಗ ದರ್ಶನ್‌ ಮತ್ತೆ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 

ಹೌದು ಕಾಟೇರ ಸಿನಿಮಾ ಅಪ್‌ಡೇಟ್ಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಸರಾಗೆ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ. ಸದ್ಯ ಚಿತ್ರದ ಪೋಸ್ಟರ್‌ಗಳನ್ನು ಬಿಟ್ಟರೆ ಯಾವುದೇ ಸ್ಯಾಂಪಲ್‌ಗಳು ರಿವೀಲ್‌ ಆಗಿಲ್ಲ. ಅದರಲ್ಲೂ ಮುಖ್ಯವಾಗಿ ಡಿ ಬಾಸ್‌ ಅಭಿಮಾನಿಗಳು ಕಾಟೇರ ಟೀಸರ್‌ಗಾಗಿ ಕಾಯುತ್ತಿದ್ದಾರೆ. 

ಇದನ್ನೂ ಓದಿ-"ಉಸಿರೇ ಉಸಿರೇ" ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 

ಇನ್ನು ಕಳೆದ ವರ್ಷ  ವರಮಹಾಲಕ್ಷ್ಮಿ ಹಬ್ಬದಂದು ಈ ಸಿನಿಮಾ ಸೆಟ್ಟೇರಿತ್ತು. ಈ ವರ್ಷದ ವರಮಹಾಲಕ್ಷ್ಮಿ ಹಬ್ಬಕ್ಕೆ ಟೀಸರ್‌ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಇದೀಗ ಟೀಸರ್‌ ಬಿಡುಗಡೆ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಬಿಸಿಬಿಸಿ ಚರ್ಚೆಯೊಂದು ಪ್ರಾರಂಭವಾಗಿದೆ. 

ಹೌದು ಗಣೇಶ ಹಬ್ಬಕ್ಕೆ ಕಾಟೇರ ಸಿನಿಮಾದ ಟೀಸರ್‌ ಬಿಡುಗಡೆಯಾಗೋದು ಕನ್ಫರ್ಮ್‌ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ತರುಣ್‌ ಸುಧೀರ್‌ ಆಂಡ್‌ ಟೀಮ್‌ ಟೀಸರ್ ರೆಡಿಮಾಡುವ ಕೆಲಸದಲ್ಲಿ ಬ್ಯೂಸಿಯಾಗಿದೆ ಎನ್ನಲಾಗುತ್ತಿದೆ. ಟೀಸರ್‌ ಇಲ್ಲವಾದರೂ ಸಣ್ಣ ಗ್ಲಿಂಪ್ಸ್ ಆದರೂ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆಗಳು ಹೆಚ್ಚಾಗುತ್ತಿವೆ. 

ಇದನ್ನೂ ಓದಿ-Jalandhara Shooting Complete: ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಪ್ರಮೋದ್ ಶೆಟ್ಟಿ ಅಭಿನಯದ ‘ಜಲಂಧರ’

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News